ಸೀನಿಯರ್‌ನಿಂದ ಪ್ರೀತಿಸುವಂತೆ ಕಿರುಕುಳ ಆರೋಪ – ಬೆಂಗಳೂರಲ್ಲಿ ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ

Public TV
1 Min Read

ಬೆಂಗಳೂರು: ಬಿಬಿಎ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲೂರಿನ ಖಾಸಗಿ ಕಾಲೇಜಿನ ಪಿಜಿಯಲ್ಲಿ ನಡೆದಿದೆ.

ಸನಾ ಪರ್ವಿನ್ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಬಾಗಲೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದಳು. ಕಾಲೇಜಿನ ಪಿಜಿಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಬೆಳಗಾವಿ | ಪ್ರೀತಿಸಿ ಮದ್ವೆಯಾದ, ವಿಚ್ಛೇದನ ಪಡೆದು ಮಾಜಿ ಪತ್ನಿ ಕೊಂದ ಪೊಲೀಸಪ್ಪ

ಸಹ ವಿದ್ಯಾರ್ಥಿ ಪ್ರೀತಿಸುವಂತೆ ಈಕೆಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅದೇ ಕಾಲೇಜಿನಲ್ಲಿ ಓದುತ್ತಿದ್ದ ಸೀನಿಯರ್ ವಿದ್ಯಾರ್ಥಿಯಿಂದ ಕಿರುಕುಳ ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಸನಾ ಪರ್ವಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪ ಕೇಳಿಬಂದಿದೆ. ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಸನಾ ಪರ್ವಿನ್‌ ಮಡಿಕೇರಿ ಮೂಲದ ಯುವತಿ. ಈಕೆಗೆ ಕೇರಳದ ಮೂಲದ ಯುವಕ, ಪಿಜಿ ಮತ್ತು ಕಾಲೇಜು ಬಳಿ ಬಂದು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಅಸಭ್ಯವಾಗಿ ಮೆಸೇಜ್‌ ಮಾಡುತ್ತಿದ್ದ. ಕಳೆದ 10 ತಿಂಗಳಿಂದ ಆಕೆಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ವಿಜಯಪುರದಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು -‌ ಎನ್‌ಕೌಂಟರ್‌ಗೆ ರೌಡಿಶೀಟರ್ ಬಲಿ

ಯುವಕನ ಕಿರುಕುಳದ ವಿಚಾರವನ್ನು ಯುವತಿ ತನ್ನ ಪೋಷಕರಿಗೂ ತಿಳಿಸಿದ್ದಳು. ಆದರೆ, ನಿನ್ನೆ ರಾತ್ರಿ ತನ್ನ ಪಿಜಿ ಸಹಪಾಠಿಗಳು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.

Share This Article