ಗ್ರ್ಯಾಂಡ್ ಫಿನಾಲೆಯ ವೇದಿಕೆಯಲ್ಲಿ ಸುದೀಪ್ ಅವರು ವೀಕ್ಷಕರಲ್ಲಿ ಕ್ಷಮೆ ಕೇಳಿದ್ದಾರೆ. ಹೌದು ಬಿಗ್‍ಬಾಸ್‍ನಲ್ಲಿ ಟೆಲಿಕಾಸ್ಟ್‌ನಲ್ಲಿ ಆಗಿರುವ ಒಂದು ಎಡವಟ್ಟಿಗೆ ಸುದೀಪ್ ಅವರು ವೀಕ್ಷಕರಲ್ಲಿ ಕ್ಷಮೆ ಕೇಳಿದ್ದಾರೆ.
ನಿನ್ನೆ ಇಂಟರ್‍ನೆಟ್ ಸಮಸ್ಯೆಯಿಂದಾಗಿ ಬಿಗ್‍ಬಾಸ್ ಪ್ರಸಾರವಾಗಲು ಕೊಂಚ ತಡವಾಯಿತು. ವೀಕ್ಷಕರು ಏನಾಯಿತ್ತು ಎಂದು ಕೊಂಚ ಬೇಸರವಾಗಿದ್ದರು. ಈ ಕುರಿತಾಗಿ ಸುದೀಪ್ ಅವರು ವೇದಿಕೆಯಲ್ಲಿ ಅಡಚಣೆಯ ಕುರಿತಾಗಿ ವಿಷಾದಿಸುತ್ತೇವೆ ಎಂದು ಹೇಳಿದರು.
ಈ ಸೀಸನ್ ಅಷ್ಟು ಚಾಲೆಂಜ್ ಬೇರೆ ಯಾವ ಸೀಸನ್‍ನಲ್ಲೂ ಇಷ್ಟೊಂದು ಇರಲಿಲ್ಲ. ಹೊರಗೆ ಇದ್ದು ಈ ಮನೆಯನ್ನು ನೋಡಿಕೊಳ್ಳುವವರ ಶ್ರಮ ತುಂಬಾ ಇದೆ. ಬೇರೆ, ಬೇರೆ ಚಾಲೆಂಜ್‍ಗಳನ್ನು ನಾವು ಎದುರಿಸಬೇಕಾಗಿ ಬಂತು. ಉದಾಹರಣೆಯಾಗು ಹೇಳುವುದಾದರೆ ನಿನ್ನೆ ನಡೆದಿರುವ ಫಿನಾಲೆ ಎಪಿಸೋಡ್ ಪ್ರಸಾವಾಗುವ 2/3 ಗಂಟೆಗಳ ಕಾಲ ಮುಂಚೆ ಅಷ್ಟೆ ಶೂಟ್ ಆಗುತ್ತಿರುತ್ತದೆ. ಕ್ಯಾಮೆರಾದಲ್ಲಿ ಶೂಟ್ ಆಗಿರುವ ವಿಶ್ಯುವಲ್ ಎಡಿಟ್ ಆಗಬೇಕು, ಮ್ಯೂಸಿಕ್ ಆಗಬೇಕು, ಬ್ರೇಕ್‍ಗಳು ಲಾಕ್ ಅಗಬೇಕು ನಂತರ ಒಂದು ಕೊನೆಯ ಎಡಿಟ್ ಆಗಿ ಮುಂಬೈಗೆ ಈ ದೃಶ್ಯಗಳು ಹೋಗಬೇಕು ಅಲ್ಲಿಂದ ನೋಯ್ಡಾದ ಎಂಸಿಆರ್‍ಗೆ ತಲುಪಿ ಅಲ್ಲಿಂದ ಈ ಕಾರ್ಯಕ್ರಮ ಪ್ರಸಾರವಾಗಬೇಕು. ಈಗ ನಾನು ಹೇಳಿರುವುದರಲ್ಲೇ ಒಂದು ಜರ್ನಿ ಇದೆ.
ಈ ಯಾವುದೇ ಒಂದು ಕಡೆ ಸಣ್ಣ ತಪ್ಪುಗಳಾದ್ರೂ ಕೂಡ ಬಿಗ್‍ಬಾಸ್ ವೀಕ್ಷಿಸುತ್ತೀರುವ ನಿಮಗೆ ಖಂಡಿತ ತೊಂದರೆಯಾಗುತ್ತದೆ. ನಿನ್ನೆ ಇನ್‍ಟರ್‍ನೆಟ್ ಸಮಸ್ಯೆಯಿಂದಾಗಿ ಕಾರ್ಯಕ್ರಮ ಪ್ರಸಾರವಾಗುದುದು ತಡವಾಯಿತು. ಆದರೆ ಈ ವಿಳಂಬವನ್ನು ತಾವುಗಳು ಬೇಜಾರು ಇಲ್ಲದೆ ಕಾರ್ಯಕ್ರಮವನ್ನು ವೀಕ್ಷಿಸಿದ್ದೀರಿ. ಈ ಸಮಸ್ಯೆ ನಮ್ಮೆಲ್ಲರ ನಿಯಂತ್ರಣವನ್ನು ಮೀರಿ ನಡೆದಿದ್ದಾಗಿದೆ. ಇಷ್ಟಾದರೂ ಕೂಡಾ ತಾವೆಲ್ಲರೂ ಕೊನೆಯವರೆಗೂ ಬಹಳ ಪ್ರಿತಿಯಿಂದ ಕಾರ್ಯಕ್ರಮವನ್ನು ವೀಕ್ಷಿಸಿದ್ದೀರಿ ನಮ್ಮ ಕಡೆಯಿಂದ ಧನ್ಯವಾದಗಳು. ತೊಂದರೆಗೆ ವಿಷಾದಿಸುತ್ತೇವೆ ಎಂದು ಹೇಳಿದ್ದಾರೆ.
ಆಗಿದ್ದು ಏನು?
ರಾತ್ರಿ 11 ಗಂಟೆಯಿಂದ ವಾಹಿನಿಯಲ್ಲಿ ಬಿಗ್ ಬಾಸ್ ಶೋ ಪ್ರಸಾರ ತಡವಾಯಿತು. ವಾಹಿನಿಯ ಧಾರಾವಾಹಿಯ ಪ್ರೋಮೋಗಳನ್ನು ಪ್ರಸಾರ ಮಾಡಲಾಗಿತ್ತು. ಯಾಕೆ ಇಷ್ಟೊಂದು ಪ್ರೋಮೋಗಳನ್ನು ಹಾಕಲಾಗುತ್ತಿದೆ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದರು.