BB ಮಿನಿ ಸೀಸನ್ ನಿರೂಪಣೆ ಮಾಡಲಿದ್ದಾರೆ ಕಿಚ್ಚ

Public TV
1 Min Read

ಬಿಗ್‍ಬಾಸ್ ಮಿನಿ ಸೀಸನ್ ಈಗಾಗಲೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಬಿಗ್‍ಬಾಸ್‍ನಂತೆ ಸುದೀಪ್ ನಿರೂಪಣೆ ಮಾಡಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಬಿಗ್ ಬಾಸ್ ಮಿನಿ ಸೀಸನ್ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹೊಸತು. ಈ ರೀತಿಯ ಬಿಗ್‍ಬಾಸ್‍ಅನ್ನು ವೀಕ್ಷಕರು ಈ ಹಿಂದೆ ಕಂಡಿರಲಿಲ್ಲ. ಇದೇ ಮೊದಲ ಬಾರಿಗೆ ಖಾಸಗಿ ವಾಹಿನಿ ಇಂಥದ್ದೊಂದು ಪ್ರಯತ್ನ ಮಾಡಿದೆ. ಆದರೆ ಈ ಶೋ ನಿರೂಪಣೆ ಮಾಡುವುದು ಯಾರು? ಕಿಚ್ಚ ಸುದೀಪ್ ಬದಲಿಗೆ ಬೇರೆ ಯಾರಾದರೂ ಬರುತ್ತಾರಾ? ಇಂಥ ಹಲವು ಪ್ರಶ್ನೆಗಳು ವೀಕ್ಷಕರ ಮನದಲ್ಲಿ ಮೂಡಿದ್ದವು. ಖಾಸಗಿವಾಹಿನಿಯ ಬ್ಯುಸಿನೇಸ್‍ಹೆಡ್ ಪರಮೇಶ್ವರ ಗುಂಡ್ಕಲ್ ಇದಕ್ಕೆ ಉತ್ತರವನ್ನು ನೀಡಿದ್ದಾರೆ. ಇದನ್ನೂ ಓದಿ:  ಅಪ್ಪು ಡೋಂಟ್‍ವರಿ, ನೀವು ಓದಿಲ್ಲ ಆದ್ರೂ ನೀವೊಬ್ಬರು ಐಕಾನ್: ಬೊಮ್ಮಾಯಿ

ಸುದೀಪ್ ಜೊತೆ ತಾವು ಇರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪರಮೇಶ್ವರ ಗುಂಡ್ಕಲ್ ಅವರು ಗುಡ್ ನ್ಯೂಸ್ ನೀಡಿದ್ದಾರೆ. ಕಿಚ್ಚ ಸುದೀಪ್ ಅವರೇ ಬಿಗ್‍ಬಾಸ್ ಮಿನಿ ಸೀಸನ್ ಫಿನಾಲೆಯನ್ನು ಹೋಸ್ಟ್ ಮಾಡಲಿದ್ದಾರೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ. ಈ ಶೋನ ಫಿನಾಲೆ ಹೇಗಿರಲಿದೆ? ಎಷ್ಟು ಭಿನ್ನವಾಗಿರಲಿದೆ? ಯಾರು ವಿನ್ನರ್? ಆಗುತ್ತಾರೆ ಎಂಬುದನ್ನೆಲ್ಲ ತಿಳಿದುಕೊಳ್ಳಲು ಕಿರುತೆರೆ ವೀಕ್ಷಕರು ಕಾಯುತ್ತಿದ್ದಾರೆ.

ಧಾರಾವಾಹಿ ನಟ, ನಟಿಯರ ರಿಯಲ್ ಲೈಫ್ ವ್ಯಕ್ತಿತ್ವ ಈ ಶೋನಲ್ಲಿ ಅನಾವರಣ ಆಗುತ್ತಿದೆ. ಹಲವು ಇಂಟರೆಸ್ಟಿಂಗ್ ಕಹಾನಿಗಳು ಹೊರಬರುತ್ತಿವೆ. ಹಾಗಾಗಿ ವೀಕ್ಷಕರಿಗೆ ಈ ಕಾರ್ಯಕ್ರಮ ಇಷ್ಟವಾಗುತ್ತಿದೆ. ಅಕುಲ್ ಬಾಲಾಜಿ, ಕಿರಣ್ ರಾಜ್, ಕೌಸ್ತುಭ, ಗಗನ್ ಚಿನ್ನಪ್ಪ, ಭವ್ಯ, ರಿತ್ವಿಕ್ ಸೇರಿದಂತೆ ಒಟ್ಟು 15 ಸೆಲೆಬ್ರಿಟಿಗಳು ದೊಡ್ಮನೆ ಪ್ರವೇಶ ಮಾಡಿದ್ದು, ಹಲವು ಟಾಸ್ಕ್‍ನಲ್ಲಿ ಪಾಲ್ಗೊಂಡಿದ್ದಾರೆ. ಈ ಶೋಗೂ ಒಂದು ಫಿನಾಲೆ ನಡೆಯಲಿದೆ. ಅದಕ್ಕೆ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ ಎಂಬುದು ಈಗ ಖಚಿತ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *