ಬಟಿಂಡಾ ಸೇನಾ ಠಾಣೆಯೊಳಗೆ ಗುಂಡಿನ ದಾಳಿ – ನಾಲ್ವರು ಸಾವು

Public TV
1 Min Read

ಚಂಡೀಗಢ: ಬಟಿಂಡಾ ಸೇನಾ ಠಾಣೆಯೊಳಗೆ (Bathinda Military Station) ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಪಂಜಾಬ್‍ನಲ್ಲಿ (Punjab) ನಡೆದಿದೆ.

ಘಟನೆಯ ನಂತರ ಸ್ಟೇಷನ್ ಕ್ವಿಕ್ ರಿಯಾಕ್ಷನ್ ತಂಡಗಳನ್ನು ಸಕ್ರಿಯಗೊಳಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಬಿಗಿ ಭದ್ರತೆ ವಹಿಸಲಾಗಿದೆ. ಸೇನಾ ಠಾಣೆಯೊಳಗೆ ಮುಂಜಾನೆ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) ಸುರೀಂದರ್ ಪಾಲ್ ಸಿಂಗ್ ಪರ್ಮಾರ್ ಮಾತನಾಡಿ, ಇದರಲ್ಲಿ ಯಾವುದೇ ಭಯೋತ್ಪಾದನಾ ದಾಳಿಯ ಕೋನವಿಲ್ಲ. ಶಸ್ತ್ರಾಸ್ತ್ರಗಳನ್ನು ಹೊಂದಿರುವ ಇಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕರ ಎದೆ ನಡುಗಿಸುವಂತಿದೆ ಬಿಜೆಪಿ ಪಟ್ಟಿ: ಈಶ್ವರಪ್ಪ

ಪಂಜಾಬ್ ಪೊಲೀಸ್ ಮೂಲಗಳ ಪ್ರಕಾರ, 2 ದಿನಗಳ ಹಿಂದೆ 28 ಕಾಟ್ರಿಡ್ಜ್‌ಗಳಿದ್ದ ಒಂದು ಇನ್ಸಾಸ್ ರೈಫಲ್ ನಾಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಘಟನೆಯ ಹಿಂದೆ ಕೆಲವು ಸೇನಾ ಸಿಬ್ಬಂದಿ ಇರಬಹುದು ಎಂದು ಶಂಕಿಸಿದೆ. ಇದನ್ನೂ ಓದಿ: 2 ಕಡೆ ಟಿಕೆಟ್ ಕೊಡ್ತಾರೆ ಅಂತ ಕನಸಲ್ಲೂ ಅನ್ಕೊಂಡಿರಲಿಲ್ಲ: ಸೋಮಣ್ಣ

Share This Article