ಇರಾನ್‌ ದಾಳಿಗೆ ಭಾರತೀಯ ನೌಕಾನೆಲೆ ಬಳಕೆ- ವರದಿ ತಿರಸ್ಕರಿಸಿದ ವಿದೇಶಾಂಗ ಸಚಿವಾಲಯ

2 Min Read

ನವದೆಹಲಿ: ಇರಾನ್ ಮೇಲೆ ದಾಳಿ (Strikes On Iran) ಮಾಡಲು ಅಮೆರಿಕವು ತನ್ನ ನೌಕಾ ನೆಲೆಗಳನ್ನ ಬಳಸುತ್ತಿದೆ ಎಂಬ ವರದಿಯನ್ನ ಭಾರತ (India) ತಿರಸ್ಕರಿಸಿದೆ.

ಇರಾನ್‌ ಉದ್ವಿಗ್ನತೆಯಿಂದಾಗಿ ಮಧ್ಯಪ್ರಾಚ್ಯ ಈಗಾಗಲೇ ರಣರಂಗವಾಗಿದೆ. ಈ ಮಧ್ಯೆ ಹಲವು ದೇಶಗಳು ಉಭಯ ಕಡೆಗಳಿಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲ ಸೂಚಿಸಿವೆ. ಆದರೆ, ಭಾರತ ಮಾತ್ರ ಈ ಯುದ್ದದಲ್ಲಿ ಈವರೆಗೂ ಬಹಿರಂಗವಾಗಿ ಯಾರ ಪರ ವಹಿಸದೆ ತಟಸ್ಥ ನಿಲುವು ಕಾಯ್ದುಕೊಂಡಿದೆ. ಇದನ್ನೂ ಓದಿ: ಯುದ್ಧದ ನಡುವೆ ವಿನಾಶಕಾರಿ ʻಡೂಮ್ಸ್‌ಡೇʼ ಕ್ಷಿಪಣಿ ಪರೀಕ್ಷಿಸಿದ ಅಮೆರಿಕ – 3ನೇ ಮಹಾಯುದ್ಧ ಫಿಕ್ಸಾ?

ಈ ಮಧ್ಯೆ ಇರಾನ್ ಮೇಲೆ ದಾಳಿ ಮಾಡಲು ಅಮೆರಿಕವು ಭಾರತೀಯ ನೌಕಾನೆಲೆಗಳನ್ನ (Indian Naval Base) ಬಳಸುತ್ತಿದೆ ಎಂದು US ಮಾಜಿ ಸೇನಾ ಕರ್ನಲ್ ಡೌಗ್ಲಾಸ್ ಮ್ಯಾಕ್‌ಗ್ರೆಗರ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತ ವಿದೇಶಾಂಗ ಸಚಿವಾಲಯವು, ಯುಎಸ್‌ ಅಧಿಕಾರಿಯ ಹೇಳಿಕೆ ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದೆ.

ಭಾರತದ ವಿದೇಶಾಂಗ ಸಚಿವಾಲಯದ ಅಧಿಕೃತ ಸತ್ಯ-ಪರಿಶೀಲನಾ ಹ್ಯಾಂಡಲ್ (Fact-Cheking) ತನ್ನ X ಖಾತೆ ಮೂಲಕ, ʻನಕಲಿ ಸುದ್ದಿ ಎಚ್ಚರಿಕೆʼ ಎಂಬ ಶೀರ್ಷಿಕೆಯಡಿ ಪೋಸ್ಟ್‌ ಮಾಡಿ ವರದಿಗಳನ್ನ ತಳ್ಳಿಹಾಕಿದೆ. ಇದನ್ನೂ ಓದಿ: ಇರಾನ್‌ಗೆ ನಾಯಕರಾಗಲು ಬಯಸುವ ಪ್ರತಿಯೊಬ್ಬರೂ ಸಾಯ್ತಾರೆ – ಟ್ರಂಪ್‌ ಮಾರ್ಮಿಕ ಸಂದೇಶ

ʻನಕಲಿ ಸುದ್ದಿ ಎಚ್ಚರಿಕೆ… ಭಾರತೀಯ ನೌಕಾನೆಲೆ ಹಾಗೂ ಬಂದರುಗಳನ್ನ ಅಮೆರಿಕಾ ನೌಕಾಪಡೆ ಬಳಸುತ್ತಿದೆ ಎಂದು ಅಮೆರಿಕಾ ಮೂಲದ ಚಾನೆಲ್ OAN ನಲ್ಲಿ ಹೇಳಲಾಗುತ್ತಿರುವ ವಿಚಾರಗಳು ನಕಲಿ ಮತ್ತು ಸುಳ್ಳು. ಇಂತಹ ಆಧಾರರಹಿತ ಮತ್ತು ಕಟ್ಟುಕಥೆಗಳ ವಿರುದ್ಧ ನಾವು ನಿಮ್ಮನ್ನು ಎಚ್ಚರಿಸುತ್ತೇವೆ ಎಂದು ಹೇಳಿದೆ.

ಯುಎಸ್‌ ಅಧಿಕಾರಿ ಹೇಳಿದ್ದೇನು?
ಇರಾನ್‌ ಮೇಲೆ ಇಸ್ರೇಲ್-ಅಮೆರಿಕಾ ಜಂಟಿ ದಾಳಿ ಮಾಡುತ್ತಿದೆ. ಈ ಮಧ್ಯೆ ಹಲವು ನಕಲಿ ಹೇಳಿಕೆಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಂತೆಯೇ ಅಮೆರಿಕದ ಮಾಜಿ ಸೇನಾ ಕರ್ನಲ್ ಡೌಗ್ಲಾಸ್ ಮ್ಯಾಕ್‌ಗ್ರೆಗರ್ ಎಂಬಾತ OAN ಎಂಬ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ್ದರು. ಇದನ್ನೂ ಓದಿ: ಇರಾನ್ – ಇಸ್ರೇಲ್ ವಾರ್ ಎಫೆಕ್ಟ್; ವಾರದೊಳಗೆ ದುಬಾರಿಯಾಗಲಿದೆ ಡ್ರೈಫ್ರೂಟ್ಸ್

ಈ ವೇಳೆ ʻಅಮೆರಿಕದ ಎಲ್ಲಾ ನೆಲೆಗಳು ಹಾಗೂ ಬಂದರುಗಳು ನಾಶವಾಗಿದೆ. ಇದರಿಂದಾಗಿ ನಾವು ಭಾರತೀಯ ನೌಕಾನೆಲೆಗಳನ್ನು ಬಳಸಿಕೊಂಡು ದಾಳಿ ಮಾಡುವ ಸ್ಥಿತಿ ಬಂದಿದೆ. ಇದು ಒಳ್ಳೆಯ ವಿಚಾರವಲ್ಲʼ ಎಂದು ಹೇಳಿದ್ದರು. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ಚರ್ಚೆಗೆ ಗ್ರಾಸವಾಗಿತ್ತು.

Share This Article