ಇಸ್ರೇಲ್‌-ಇರಾನ್‌ ಯುದ್ಧ; ದುಬೈನಲ್ಲಿ ಸಿಲುಕಿರೋ ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಪುತ್ರಿ

0 Min Read

ಕೊಪ್ಪಳ: ಇಸ್ರೇಲ್‌-ಇರಾನ್‌ ಯುದ್ಧ ಭೀತಿ ಹೆಚ್ಚಿದ್ದು, ದುಬೈನಲ್ಲಿ (Dubai) ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ (Basavaraj Rayareddy) ಅವರ ಪುತ್ರಿ ಸಿಲುಕಿಕೊಂಡಿದ್ದಾರೆ.

ಮಮತಾ ರಾಯರಡ್ಡಿ ದುಬೈನಲ್ಲಿದ್ದಾರೆ. ಮೂರು ದಿನಗಳ ಹಿಂದೆ ಸ್ನೇಹಿತೆಯ ಮದುವೆಗೆ ಹೋಗಿದ್ದರು. ವಾಪಸ್‌ ಆಗಲು ವಿಮಾನ ಸಿಕ್ಕಿಲ್ಲ. ಈಗ ಸ್ನೇಹಿತರ ಮನೆಯಲ್ಲಿ ಸುರಕ್ಷಿತವಾಗಿದ್ದಾರೆ.

ವಿಮಾನಯಾನ ಆರಂಭವಾದಾಗ ಕರೆದುಕೊಂಡು ಬರಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾಹಿತಿ ನೀಡಿದ್ದಾರೆ.

Share This Article