ಬಹುಮತ ಇಲ್ಲದಿದ್ದರೂ ಮೂರು ಪಕ್ಷದ ಬೆಂಬಲದಿಂದ ಸಭಾಪತಿಯಾಗಿದ್ದೆ: ಬಸವರಾಜ ಹೊರಟ್ಟಿ

Public TV
1 Min Read

ಹಾವೇರಿ: ಹಿಂದಿನಿಂದಲೂ ಬಿಜೆಪಿ ನನಗೆ ಸಪೋರ್ಟ್ ಮಾಡುತ್ತಿತ್ತು. ಬಹುಮತ ಇಲ್ಲದಿದ್ದರೂ ಮೂರು ಪಕ್ಷದವರ ಬೆಂಬಲದಿಂದ ನಾನು ಸಭಾಪತಿಯಾಗಿದ್ದೆ ಎಂದು ಬಿಜೆಪಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಅಭ್ಯರ್ಥಿ ಬಸವರಾಜ ಹೊರಟ್ಟಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರು, ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲರ ಬೆಂಬಲವಿದೆ. ನನ್ನ ವಿಚಾರದಲ್ಲಿ ಪಕ್ಷ ಬರುವುದಿಲ್ಲ. ಎಲ್ಲಿಯಾದರೂ ನಿಂತುಕೊಳ್ಳಿ ಸರ್ ನಿಮಗೆ ಬೆಂಬಲವಿದೆ ಅಂದಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್‍ನಲ್ಲಿದ್ದ ಕೆಲವರೂ ನನ್ನ ಪರವಾಗಿದ್ದಾರೆ. ಯಾವ ಶಿಕ್ಷಕರಾದರೂ ನನಗೆ ಹತ್ತು ರೂಪಾಯಿ ಕೊಟ್ಟಿದ್ದಾರೆ ಅಂದರೆ ನಾನು ರಾಜೀನಾಮೆ ನೀಡುತ್ತೇನೆ ಎಂದರು.

ಪ್ರತಿ ಚುನಾವಣೆಯಲ್ಲಿ ಬಿಜೆಪಿ ಮತ್ತು ನನಗೆ ಸ್ಪರ್ಧೆ ಇರುತ್ತಿತ್ತು. ಪ್ರತಿಬಾರಿ ಬಿಜೆಪಿ ಮತ್ತು ನನ್ನ ನಡುವೆ ಕೆಲವೊಂದು ವೋಟುಗಳು ಹಂಚಿ ಹೋಗುತ್ತಿದ್ದವು. ಈಗ ನಾನೇ ಬಿಜೆಪಿ ಅಭ್ಯರ್ಥಿ ಆಗಿದ್ದರಿಂದ ಕಳೆದ ಚುನಾವಣೆಗಳಿಗಿಂತಲೂ ಈ ಬಾರಿ ಶೇಕಡಾ ನಾಲ್ವತ್ತರಷ್ಟು ಹೆಚ್ಚು ಮತಗಳು ನನಗೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಸಿದರು. ಇದನ್ನೂ ಓದಿ: ಜನಿವಾರ ದೀಕ್ಷೆಯನ್ನು ಬಸವಣ್ಣನವರು ನಿರಾಕರಿಸಿದ್ದು ಸತ್ಯ: ಸಿದ್ದಗಂಗಾ ಶ್ರೀ

ನನ್ನ ಬಗ್ಗೆ ಮಾತನಾಡುತ್ತಿರುವ ಪ್ರತಿಪಕ್ಷದ ಅಯೋಗ್ಯರ ಹೇಳಿಕೆಗಳಿಗೆ ನಾನು ಉತ್ತರ ಕೊಡೋದಿಲ್ಲ. ಅವರು ಚುನಾವಣೆ ಬಂದಿದೆ ಎಂದು ಬಂದಿದ್ದಾರೆ. ಅವರು ಹೋದಲ್ಲೆಲ್ಲ ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದು ಹೇಳುತ್ತಿದ್ದಾರೆ. ಮತದಾರರು ಬದಲಾವಣೆ ಬಯಸಿಲ್ಲ, ಅವರು ಬದಲಾವಣೆ ಬಯಸಿದ್ದಾರೆ. ನಾನು ಮಂತ್ರಿ ಇದ್ದಾಗ ರಾಜ್ಯ ಹುಟ್ಟಿದಾಗಿನಿಂದ ಯಾರೂ ಮಾಡಲಾಗದಷ್ಟು ಕೆಲಸಗಳನ್ನು ಮಾಡಿದ್ದೇನೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಯಲಹಂಕ ವಾಯುನೆಲೆ ಸುತ್ತಮುತ್ತಲಿರುವ ಕಟ್ಟಡಗಳಿಗೆ BBMP ನೋಟಿಸ್

Share This Article
Leave a Comment

Leave a Reply

Your email address will not be published. Required fields are marked *