ಅಮಿತ್ ಶಾ ಭೇಟಿ – ಹೊರಟ್ಟಿ ಬಿಜೆಪಿಗೆ ಸೇರ್ಪಡೆ

Public TV
1 Min Read

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಜೆಡಿಎಸ್‍ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಭೇಟಿಯಾಗಿದ್ದಾರೆ. ಈ ಮೂಲಕ ಹೊರಟ್ಟಿ ಬಿಜೆಪಿ ಸೇರ್ಪಡೆ ಅಮಿತ್ ಷಾ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಈ ಮೂಲಕ 42 ವರ್ಷಗಳ ಕಾಲ ಜೆಡಿಎಸ್‍ನಲ್ಲಿದ್ದ ಹೊರಟ್ಟಿ ಬಿಜೆಪಿ ಸೇರುವುದು ಸನ್ನಿಹಿತವಾಗಿದೆ. ಈ ಬಗ್ಗೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಶೀಘ್ರದಲ್ಲೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ. ನಿಮ್ಮಂಥಹವರು ಪಕ್ಷಕ್ಕೆ ಬರಬೇಕು ಅಂತಾ ಅಮಿತ್ ಶಾ ಹೇಳಿದರು ಎಂದರು.

ಜೆಡಿಎಸ್ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ. ಈಗ ಬದಲಾದ ವ್ಯವಸ್ಥೆಯಲ್ಲಿ ಮತದಾರರು ಅಭಿಪ್ರಾಯ ಎಲ್ಲಾ ಆಧಾರದ ಮೇಲೆ ಸೇರ್ಪಡೆಗೊಂಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: 2024 ಮೋದಿ ಒನ್ಸ್‌ಮೋರ್‌ – ಜರ್ಮನಿ ಭಾರತೀಯರಿಂದ ಘೋಷಣೆ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಬಸವ ಜಯಂತಿ ಶುಭಾಶಯ. ಜೊತೆಗೆ ಇವತ್ತು ಸಿಹಿ ಬಿಜೆಪಿಗೆ ಸಿಕ್ಕಿದೆ. ಹೊರಟ್ಟಿ ಬಿಜೆಪಿ ಸೇರುವ ಮನಸ್ಸು ಮಾಡಿದ್ದಾರೆ. ಇವರು ಸಜ್ಜನ ಸರಳಿಕೆ ಇರುವಂತಹ ವ್ಯಕ್ತಿ. ಇದರಿಂದಾಗಿ ಇಡೀ ಕರ್ನಾಟಕದಲ್ಲಿ ವರ್ಚಸ್ಸು ಬಿಜೆಪಿಗೆ ಬರುತ್ತದೆ. 2023ರ ಪರ್ವ ಈಗ ಬಿಜೆಪಿಯಲ್ಲಿ ಶುರುವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, ರಾಜ್ಯಾಧ್ಯಕ್ಷರ ಬದಲಾವಣೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮೇ 10ರ ಒಳಗಡೆ ಸಿಎಂ ಬದಲಾವಣೆ: ಯತ್ನಾಳ್‌ ಬಾಂಬ್‌

Share This Article
Leave a Comment

Leave a Reply

Your email address will not be published. Required fields are marked *