ಹೊರಟ್ಟಿ ಕಬಡ್ಡಿ ಪ್ಲೇಯರ್ – ಸೈಕಲ್ ಕೂಡಾ ಹೊಡೆಯುತ್ತಾರೆ: ಲಕ್ಷ್ಮಣ ಸವದಿ

By
1 Min Read

ಬೆಳಗಾವಿ: ನನಗೆ ಬಸವರಾಜ ಹೊರಟ್ಟಿ (Basavaraj Horatti) ಮೇಲೆ ಹೊಟ್ಟೆ ಕಿಚ್ಚು ಇದೆ. 8 ಬಾರಿ ಹೇಗೆ ಗೆದ್ದರು ಅಂತ ಯಾರಿಗೂ ಗುಟ್ಟು ಹೇಳಿಲ್ಲ. ಹೊರಟ್ಟಿ ಕಬಡ್ಡಿ (Kabaddi) ಪ್ಲೇಯರ್. ಈಗಲೂ ಹೊರಟ್ಟಿ ಬಿಟ್ಟರೆ ಚೆನ್ನಾಗಿ ಕಬಡ್ಡಿ ಆಡ್ತಾರೆ. ಸೈಕಲ್ ಕೂಡಾ ಹೊಡೆಯುತ್ತಾರಂತೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕರ್ನಾಟಕ ವಿಧಾನ ಪರಿಷತ್ತಿನ ನೂತನ ಸಭಾಪತಿಗಳಾಗಿ (Council Chairman) ಆಯ್ಕೆಯಾದ, ಪರಿಷತ್ತಿನ ಅನುಭವಿ, ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಕುರಿತು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಪರಿಷತ್ತಿನ ನೂತನ ಸಭಾಪತಿಗಳಾಗಿ ಇಂದು ಹೊರಟ್ಟಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಸದನದಲ್ಲಿ ಮಾತನಾಡಿದ ಸವದಿ, ಬಸವರಾಜ ಹೊರಟ್ಟಿ ಮೇಲೆ ಹೊಟ್ಟೆ ಕಿಚ್ಚು ಇದೆ. ನಿಮ್ಮ ಆರೋಗ್ಯದ ಗುಟ್ಟೇನು? ಹೇಗೆ 8 ಬಾರಿ ಗೆದ್ದಿದ್ದೀರಿ ನಿಮ್ಮ ಗುಟ್ಟು ಹೇಳಿ ಎಂದು ಕೇಳಿಕೊಂಡರು. ಬಳಿಕ ಮುಂದುವರಿಸಿ ಹೊರಟ್ಟಿ ಕಬಡ್ಡಿ ಪ್ಲೇಯರ್. ಈಗಲೂ ಹೊರಟ್ಟಿ ಬಿಟ್ಟರೆ ಚೆನ್ನಾಗಿ ಕಬಡ್ಡಿ ಆಡ್ತಾರೆ. ಸೈಕಲ್ ಕೂಡಾ ಹೊಡೆಯುತ್ತಾರಂತೆ ಆದರೆ ಅದರ ಗುಟ್ಟು ಮಾತ್ರ ಹೇಳಿಲ್ಲ ಎಂದು ಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ: ಶಬರಿಮಲೆ ಹಾದಿಯಲ್ಲಿ ಈ ಬಾರಿ 23 ಮಂದಿ ಹೃದಯಾಘಾತದಿಂದ ಸಾವು

ಬಳಿಕ ಪ್ರಕಾಶ್ ರಾಥೋಡ್ ಮಾತನಾಡಿ, ಈ ಸ್ಥಾನ ನಿಮಗೆ ಶೋಭೆ ತರುವಂತಹದ್ದು. ನೀವು ಬಿಜೆಪಿ ಸೇರುವಾಗ ಸ್ವಲ್ಪ ನೋವು ಅನುಭವಿಸಿದ್ದೀರಾ. ಈ ಸ್ಥಾನಕ್ಕೆ ನೀವು ನ್ಯಾಯ ಕೊಡ್ತೀರಾ ಅನ್ನೋ ವಿಶ್ವಾಸ ಇದೆ. ವಿಪಕ್ಷಗಳಿಗೆ ಹೆಚ್ಚು ಅವಕಾಶ ಕೊಡಬೇಕು. ಶಾಸಕರ ಕ್ರೀಡಾಕೂಟ ನೀವು ಮತ್ತೆ ಪ್ರಾರಂಭ ಮಾಡಬೇಕು. ದೇಶದ ಮುಖ್ಯ ಸಚೇತಕರ ಸಮಾವೇಶ ಕರ್ನಾಟಕದಲ್ಲಿ ಮಾಡಲು ಕ್ರಮವಹಿಸಿ. ಶಾಸಕರ ಪ್ರವಾಸ ವ್ಯವಸ್ಥೆ ಮತ್ತೆ ಪ್ರಾರಂಭ ಮಾಡಿ ಎಂದು ಸಭಾಪತಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರಾಜಕೀಯ ಮರು ಪ್ರವೇಶ ಖಚಿತ – ನನ್ನ ಜೊತೆ ಯಾರು ಇರ್ತಾರೆ, ಯಾರು ಬರ್ತಾರೆ ಡಿ.25ಕ್ಕೆ ತಿಳಿಸುತ್ತೇನೆ: ಜನಾರ್ದನ ರೆಡ್ಡಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *