ಕಾಂಗ್ರೆಸ್ ರಾಜ್ಯದ ಮಕ್ಕಳಿಗೆ ದ್ರೋಹ ಮಾಡ್ತಿದೆ, ಇದು ರಾಜದ್ರೋಹ: ಬೊಮ್ಮಾಯಿ ಕಿಡಿ

Public TV
1 Min Read

ಬೆಂಗಳೂರು: ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ವಿಧಾನಮಂಡಲದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಸಿಎಂ ಕಿಡಿಕಾರಿದ್ದಾರೆ. ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಗೆ ಇಳಿದು ಕಾಂಗ್ರೆಸ್ ಸದಸ್ಯರಿಂದ ಧರಣಿ, ಧಿಕ್ಕಾರ ಘೋಷಣೆ ಕೂಗಿದೆ.  ಈ ಕುರಿತಾಗಿ ಮಾತನಾಡಿದ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ.

ಈಶ್ವರಪ್ಪ ವಜಾ ಮಾಡುವಂತೆ ಆಗ್ರಹಿಸಿ ಧಿಕ್ಕಾರದ ಘೋಷಣೆ ಕೂಗಿದ್ದಾರೆ. ಇದೇ ವೇಳೆ ವಿಧಾನಸಭೆಯಲ್ಲಿ ಕಿಡಿಕಾರಿದ ಸಿಎಂ ಬಸವರಾಜ ಬೊಮ್ಮಾಯಿ ವಿಪಕ್ಷ ಕಾಂಗ್ರೆಸ್  ಅವರದ್ದು ಬೇಜವಾವ್ದಾರಿ ನಡೆ. ಈ ಧರಣಿ ಕಾಂಗ್ರೆಸ್‍ಗೆ ಲಾಭ ತರಲ್ಲ. ರಾಜಕೀಯ ಲಾಭವನ್ನೂ ತಂದು ಕೊಡಲ್ಲ ಎಂದು  ಕಾಂಗ್ರೆಸ್‍ಗೆ ತಿರುಗೇಟು ಕೊಟ್ಟರು.

ಒಗ್ಗಟ್ಟಾಗಿ ರಾಜಕೀಯ ಪಕ್ಷಗಳು ಮುಂದುವರೆಯಬೇಕು. ಮಕ್ಕಳ ಭವಿಷ್ಯ ರೂಪಿಸಬೇಕು ಆದರೆ ಕಾಂಗ್ರೆಸ್ ಮಕ್ಕಳ ಭವಿಷ್ಯಕ್ಕೆ ಮಾರಕವಾಗುತ್ತಿದೆ. ಅವರೆಲ್ಲ ನಮ್ಮ ಮಕ್ಕಳು. ಇಡೀ ದೇಶ ನೋಡುತ್ತಿರುವ ವೇಳೆ ಕಾಂಗ್ರೆಸ್ ವಿಷಯ ಡೈವರ್ಟ್ ಮಾಡುತ್ತಿದೆ ಎಂದು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ರಾಜ್ಯದ ಮಕ್ಕಳಿಗೆ, ಜನತೆಗೆ ದ್ರೋಹ ಮಾಡುತ್ತಿದೆ. ಇದು ರಾಜದ್ರೋಹದ ಕೆಲಸ. ನಮ್ಮ ಮಾತನ್ನು ಕೇಳದಿದರೂ ಮಾಲೀಕರಾದ ಜನರ ಮಾತು ಕೇಳಲಿ. ಕೆಂಪು ಕೋಟೆಯಲ್ಲಿ ಭಗವಾಧ್ವಜ ಹಾರಿಸ್ತೇನೆ ಅಂತ ಈಶ್ವರಪ್ಪ ಎಲ್ಲೂ ಹೇಳಿಲ್ಲ. ಸುಳ್ಳು ಆರೋಪ ಮೂಲಕ ಕಾಂಗ್ರೆಸ್ ಸೃಷ್ಟಿ ಮಾಡುತ್ತಿದೆ ಅಂತಾ ಈಶ್ವರಪ್ಪ ಅವರನ್ನ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ನಾನು ವಿಶ್ವದ ಸ್ವೀಟೆಸ್ಟ್‌ ಭಯೋತ್ಪಾದಕ: ಅರವಿಂದ್‌ ಕೇಜ್ರಿವಾಲ್‌

ಕಾಂಗ್ರೆಸ್ ಧರಣಿಗೆ ಸಚಿವ ಮಾಧುಸ್ವಾಮಿ ಕೂಡ ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಕಲಾಪದ ಸಮಯ ವ್ಯರ್ಥ ಮಾಡಿ, ಈ ವ್ಯವಸ್ಥೆಗೆ ಅಪಹಾಸ್ಯ ಮಾಡುವ ಕೆಲಸ ಇದು. ಕಾಂಗ್ರೆಸ್ ಧರಣಿ ದುರಾದೃಷ್ಟಕರ. ಸ್ಪೀಕರ್ ರೂಲಿಂಗ್ ಕೊಟ್ಟು ನಿಲುವಳಿ ಸೂಚನೆ ನಿರಾಕರಿಸಿದ್ದಾರೆ. ಯಾರಿಗೂ ಮಾತಾಡಲು ಅವಕಾಶ ಸಿಕ್ತಿಲ್ಲ. ಸದನದ ಘನತೆಗೆ ಕಾಂಗ್ರೆಸ್ ಅವಮಾನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *