ಅಮಿತ್ ಶಾರೊಂದಿಗೆ ಸಚಿವರಿಗೂ ಊಟಕ್ಕೆ ಆಹ್ವಾನ – ಕುತೂಹಲ ಮೂಡಿಸಿದ ಬೊಮ್ಮಾಯಿ ನಡೆ

Public TV
1 Min Read

ಬೆಂಗಳೂರು: ಆಡಳಿತ ಸರ್ಕಾರ ಬಿಜೆಪಿ ಪಾಳಯದಲ್ಲಿ ಬದಲಾವಣೆ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ, ಬಸವ ಜಯಂತಿ ದಿನದಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸಿಎಂ ನಿವಾಸದಲ್ಲಿ ಏರ್ಪಡಿಸಲಿರುವ ಮಧ್ಯಾಹ್ನ ಊಟಕ್ಕೆ ಸಚಿವರಿಗೂ ಆಹ್ವಾನ ನೀಡಿರುವುದು ಕುತೂಹಲ ಮೂಡಿಸಿದೆ.

ಬಸವ ಜಯಂತಿ ದಿನದ ವಿಶೇಷ ಭೋಜನ ಕೂಟದಲ್ಲಿ ಯಾರಿಗೆ ಹೆಚ್ಚು ಸಿಹಿ ಸಿಗಲಿದೆ ಎಂಬ ಮಾತು ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿದೆ. ಈಗಾಗಲೇ ರೇಸ್‌ಕೋರ್ಸ್ ರಸ್ತೆಯ ರೇಸ್ ವ್ಯೂವ್ ಕಾಟೇಜ್‌ನಲ್ಲಿ ಭರತ ಸಿದ್ಧತೆ ನಡೆದಿದೆ. ಎಸ್‌ಪಿಜಿ ಟೀಂಗೆ ಅಮಿತ್ ಶಾ ಲಂಚ್‌ಗೆ ಆಗಮಿಸುವವರ ಪಟ್ಟಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರಿಗೂ ಆಸನದ ವ್ಯವಸ್ಥೆಯನ್ನು ಸಿಎಂ ಕಚೇರಿ ಕಲ್ಪಿಸಿದೆ. ಇದನ್ನೂ ಓದಿ: ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು: ಡಿ.ಕೆ.ಶಿವಕುಮಾರ್

ಮಂಗಳವಾರ ಬಸವ ಜಯಂತಿ ಹಿನ್ನೆಲೆಯಲ್ಲಿ ಚಾಲುಕ್ಯ ವೃತ್ತದಲ್ಲಿ ಅಮಿತ್ ಶಾ ಅವರು ಬಸವ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಸವ ಪ್ರತಿಮೆ ಬಳಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಳಿಕ ಅಮಿತ್ ಶಾ ಅವರು ಮಹತ್ವದ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಿ.ಟಿ.ರವಿ ಜೊತೆ ಶಾಸಕ ರಾಜುಗೌಡ ಇದ್ದರು. ಇದನ್ನೂ ಓದಿ: ಪಿಎಸ್‍ಐ ಅಕ್ರಮ – ಕೈ ನಾಯಕರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ: ಅಶ್ವಥ್ ನಾರಾಯಣ

ಬಿಜೆಪಿಯಲ್ಲಿ ಬದಲಾವಣೆ ಮಾತು ಕೇಳಿಬರುತ್ತಿದೆ. ಈ ವೇಳೆ ಶಾಸಕರು, ಸಚಿವರು, ಪರಿಷತ್ ಸದಸ್ಯರು, ಪಕ್ಷದ ಹಿರಿಯ ಸದಸ್ಯರನ್ನೂ ಸಿಎಂ ಭೋಜನ ಕೂಟಕ್ಕೆ ಆಹ್ವಾನಿಸಿದ್ದಾರೆ.

ರಾಜ್ಯ ಪ್ರವಾಸ ಕೈಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು, ಬಿಜೆಪಿ ನಾಯಕತ್ವ ಬದಲಾವಣೆ, ಹೊಸ ಮುಖಗಳಿಗೆ ಮಣೆ ಎನ್ನುವಂತಹ ವಿಚಾರಗಳನ್ನು ಪ್ರಸ್ತಾಪಿಸಿ ಬಿರುಗಾಳಿ ಎಬ್ಬಿಸಿ ದೆಹಲಿಗೆ ವಾಪಸ್ ಆಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರೂ ಈ ಸರ್ಕಾರವನ್ನು ಮೆಚ್ಚುವುದಿಲ್ಲ: ಎಚ್.ವಿಶ್ವನಾಥ್

Share This Article
Leave a Comment

Leave a Reply

Your email address will not be published. Required fields are marked *