ರಾಷ್ಟ್ರಮಟ್ಟದ ಬಸವ ಕೃಷಿ ಪ್ರಶಸ್ತಿ ಪ್ರಕಟ

Public TV
1 Min Read

ವಿಜಯಪುರ: ಈ ಬಾರಿಯ ರಾಷ್ಟ್ರಮಟ್ಟದ ಬಸವ ಕೃಷಿ ಪ್ರಶಸ್ತಿ ಪ್ರಕಟವಾಗಿದೆ. ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಾಹಾಪೀಠ ಕೊಡಮಾಡುವ ಪ್ರಶಸ್ತಿ ಇದಾಗಿದ್ದು, ರಾಷ್ಟ್ರಮಟ್ಟದಲ್ಲಿ ಸಾಧನೆ ಗೈದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಈ ಬಾರಿಯ ಪ್ರಶಸ್ತಿಯನ್ನ ತೆಲಂಗಾಣ ರಾಜ್ಯದ ಜಲಸಂಪನ್ಮೂಲ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಕಾಶರಾವ್ ವೀರಮಲ್ಲ ಅವರಿಗೆ ಘೋಷಣೆ ಮಾಡಲಾಗಿದೆ. ವಿರಮಲ್ಲ ಅವರಿಗೆ ವಿಶ್ವದ ಅತಿ ದೊಡ್ಡ ಕಾಳೇಶ್ವರ ಏತ ನೀರಾವರಿ ಯೋಜನೆ, ಮಿಷನ್ ಭಗೀರಥ ಕುಡಿಯುವ ನೀರಿನ ಯೋಜನೆ ಸೇರಿದಂತೆ ರೈತರ ಹಕ್ಕುಗಳ ಹೋರಾಟದ ಹಿನ್ನೆಲೆ ಪ್ರಶಸ್ತಿ ನೀಡಲಾಗಿದೆ.

ಈ ಪ್ರಶಸ್ತಿ ಒಂದು ಲಕ್ಷ ರೂ ನಗದು, ಪುರಸ್ಕಾರ ಹಾಗೂ ತಾಮ್ರಪತ್ರ ಸ್ಮರಿಣಿಕೆಯನ್ನು ಒಳಗೊಂಡಿರುತ್ತದೆ. 2012ರಲ್ಲಿ ಈ ಪ್ರಶಸ್ತಿ ಪುರಸ್ಕಾರ ಪ್ರಾರಂಭವಾಗಿದ್ದು, ಗಾಂಧಿವಾದಿ ಅಣ್ಣಾ ಹಜಾರೆ, ಜಲತಜ್ಞ ರಾಜೇಂದ್ರಸಿಂಗ್ ಸೇರಿದಂತೆ ಅನೇಕ ರಾಷ್ಟ್ರ ಸೇವಕರಿಗೆ ಈ ಪ್ರಶಸ್ತಿ ದೊರೆತಿದೆ.

ರಾಜ್ಯದಲ್ಲಿ ಲಿಂಗಾಯತರಿಗೂ ಮೀಸಲಾತಿ ಸಿಗಬೇಕು. ಈ ಆಲೋಚನೆ ಶುರುವಾಗಿರೋದು ಉತ್ತಮ ಬೆಳವಣಿಗೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಅಲ್ಲದೆ ಲಿಂಗಾಯತರ 111 ಒಳ ಪಂಗಡಗಳಿವೆ. ಎಲ್ಲ ಪಂಗಡಗಳಿಗೂ ಮೀಸಲಾತಿ ಸಿಗಬೇಕು. ಮಹಾರಾಷ್ಟ್ರದಲ್ಲಿ ಮರಾಠರಿಗೆ ಶೇಕಡಾ 16 ರಷ್ಟು ಮೀಸಲಾತಿ ನೀಡಿದಂತೆ, ರಾಜ್ಯದಲ್ಲೂ ಲಿಂಗಾಯತರಿಗೆ ಮೀಸಲಾತಿ ಸಿಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಇನ್ನು ಈ ಕುರಿತು ಜನವರಿ 15ರ ಬಳಿಕ ಸ್ವಾಮೀಜಿಗಳು, ಚಿಂತಕರ ಜೊತೆಗೆ ಚರ್ಚಿಸಲಾಗುವುದು. ದಿನಾಂಕ 19 ರಂದು ಜಾಮದಾರ್ ಅವರು ಸಭೆ ಕರೆದಿದ್ದು, ಅಲ್ಲಿಯೂ ಈ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದರು.

Share This Article
Leave a Comment

Leave a Reply

Your email address will not be published. Required fields are marked *