ವೇದಿಕೆ ಸಜ್ಜಾಗಿದೆ, ಕೆಲವೇ ದಿನಗಳಲ್ಲಿ ಮರಳಿ ಬಿಜೆಪಿಗೆ ಬರಲಿದ್ದಾರೆ ಯತ್ನಾಳ್‌ : ರಮೇಶ್‌ ಜಾರಕಿಹೊಳಿ

1 Min Read

ಬೆಳಗಾವಿ: ಬಸನಗೌಡ ಪಾಟೀಲ್‌ ಯತ್ನಾಳ್‌(Basangouda Patil Yatnal) ಕೆಲವೇ ದಿನಗಳಲ್ಲಿ ಮರಳಿ ಬಿಜೆಪಿಗೆ (BJP) ಬರುತ್ತಾರೆ ಎಂದು ಅಥಣಿಯಲ್ಲಿ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ(Ramesh Jarkiholi) ಹೇಳಿದ್ದಾರೆ.

ಉಚ್ಚಾಟನೆಯಾದ ದಿನದಿಂದ ನಾನು ಯತ್ನಾಳ್‌ ಅವರನ್ನು ಮರಳಿ ಬಿಜೆಪಿಗೆ (BJP) ಕರೆತರುವ ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ ಒಂದು ವೇದಿಕೆ ಸಜ್ಜಾಗಿದೆ ಎಂದರು. ಇದನ್ನೂ ಸೋಲಿನ ಭಯ ಕಾಣಿಸಿದ್ದಕ್ಕೆ ಯತ್ನಾಳ್‌ರಿಂದ ಪ್ರಚಾರ: ಬಿಜೆಪಿಗೆ ಸಿಎಂ ಗುದ್ದು

 

ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ(Veeranna Charantimath) ಪರ ಯತ್ನಾಳ್ ಪ್ರಚಾರ ನಡೆಸಿದ್ದು ಒಳ್ಳೆಯ ಬೆಳವಣಿಗೆ. ಯತ್ನಾಳ್ ಪ್ರಚಾರದಿಂದ ನಮ್ಮ ಅಭ್ಯರ್ಥಿಗೆ ಲಾಭವಾಗಬಹುದು ಎಂದು ಭವಿಷ್ಯ ನುಡಿದರು.

ಯತ್ನಾಳ್ ಬಿಜೆಪಿಗೆ ಬಂದರೆ ಒಳ್ಳೆಯದು. ಹಿಂದೂ ಸಂಘಟನೆ ಮತ್ತು ಬಿಜೆಪಿ ಮತ ಕ್ರೋಢಿಕರಣಕ್ಕೆ ಅನುಕೂಲವಾಗುತ್ತದೆ. ಉಪಚುನಾವಣೆಯಲ್ಲಿ ನಮ್ಮ ಪಕ್ಷದವರು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿದ್ದು ಗೆಲ್ಲುವ ಆಶಾಭಾವನೆಯನ್ನು ನಾವು ಹೊಂದಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article