ಮುಸ್ಲಿಂನವರ ಕೊಲೆಯಾಗಿದ್ರೆ ರಾಹುಲ್, ಸೋನಿಯಾ ಗಾಂಧಿ ಬರ್ತಿದ್ರು: ಯತ್ನಾಳ್

Public TV
2 Min Read

ಶಿವಮೊಗ್ಗ: ಮುಸ್ಲಿಂನವರ ಕೊಲೆಯಾಗಿದ್ದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಈಗಾಗಲೇ ಬಂದು ಹೋಗುತ್ತಿದ್ದರು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

ಶಿವಮೊಗ್ಗದ ಸೀಗೆಹಟ್ಟಿಯಲ್ಲಿರುವ ಹರ್ಷ ನಿವಾಸಕ್ಕೆ ಒಂದೇ ಕಾರಿನಲ್ಲಿ ಆಗಮಿಸಿದ ಬಿಜೆಪಿ ಗ್ರಾಮೀಣಭಿವೃದ್ಧಿ ಸಚಿವ ಈಶ್ವರಪ್ಪ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರ್ಷ ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಯತ್ನಾಳ್ ಅವರು, ಇವತ್ತು ನಮ್ಮ ಹಿಂದೂ ಕಾರ್ಯಕರ್ತನ ಹತ್ಯೆ ಇಡೀ ರಾಜ್ಯವೇ ತಲ್ಲಣಗೊಳ್ಳುವ ಪ್ರಕರಣ. ಇದು ನಿಲ್ಲುವ ಕೆಲಸ ಮಾಡಬೇಕಿದೆ. ಇವರನ್ನು ಗಲ್ಲಿಗೆ ಏರಿಸದೇ ಹೋದರೆ ಹಿಂದೂಗಳ ಯುವಕರ ಹತ್ಯೆಯಾಗುತ್ತಲೇ ಇರುತ್ತದೆ ಎಂದರು. ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ – ಹಿಂದೂಗಳಿಗೆ ಮುಸ್ಲಿಂ ಸಹೋದರರ ಸಾಂತ್ವನ

ಹಿಂದೂಗಳ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಈ ಹತ್ಯೆಯ ಹಿಂದೆ ಅತಿ ದೊಡ್ಡ ಷಡ್ಯಂತ್ರ ಇದೆ. ಈಶ್ವರಪ್ಪ ಇರುವುದರಿಂದ ಹಿಂದೂಗಳ ನೆಮ್ಮದಿಯಿಂದ ಇದ್ದಾರೆ. ಹಿಂದೂಗಳ ಕಗ್ಗೊಲೆಯಾಗಿದ್ದರೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಕೇರಳದ ಗಡಿ ಭಾಗದಿಂದ ಶಸ್ತ್ರಾಸ್ತ್ರ ಪೂರೈಕೆಯಾಗಿದೆ. ಹೆಣ್ಣು ಮಕ್ಕಳನ್ನು ಮುಂದಿಟ್ಟುಕೊಂಡು ಈ ರೀತಿ ಕೆಲಸ ಮಾಡುತ್ತಾರೆ. ಇವರು ಶೂರರಲ್ಲ, ಹೆಣ್ಣು ಮಕ್ಕಳನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಾರೆ. ಕಾಂಗ್ರೆಸ್‍ನವರು ಯಾರು ಕೂಡ ಹರ್ಷನ ಮನೆಗೆ ಬಂದಿಲ್ಲ. ಇದೇ ಮುಸ್ಲಿಂನವರ ಕೊಲೆಯಾಗಿದ್ದರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬಂದು ಹೋಗುತ್ತಿದ್ದರು. ಇದನ್ನೂ ಓದಿ: ಶಿವಮೊಗ್ಗ ಕೊಲೆ ಪ್ರಕರಣ – 6 ಆರೋಪಿಗಳಿಗೆ ನ್ಯಾಯಾಂಗ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಪೇಜ್‍ಗಳಲ್ಲಿ ಓಪನ್ ಆಗಿ ಚಾಲೆಂಜ್ ಮಾಡುತ್ತಾರೆ. ಅದನ್ನು ಪೊಲೀಸರು ನಿಯಂತ್ರಣ ಮಾಡಬೇಕಿದೆ. ಹರ್ಷ ಕೊಲೆ ಪ್ರಕರಣವನ್ನು NIA ವಹಿಸಬೇಕು ಎಂದು ಒತ್ತಾಯಿಸಿದ್ದರು. ಕಾಶ್ಮೀರದಲ್ಲಿ ಕೂಡ ಹೆಣ್ಣುಮಕ್ಕಳನ್ನು ಮುಂದೆ ಬಿಟ್ಟು ಕೆಲಸ ಮಾಡುತ್ತಿದ್ದರು. ಈಗ ಎಲ್ಲವನ್ನೂ ತಣ್ಣಗೆ ಮಾಡಿದ್ದಾರೆ. ಮುಸ್ಲಿಂ ಸಂಘಟನೆಗಳನ್ನು ನಿಷೇಧ ಮಾಡಲು ಒತ್ತಾಯಿಸುತ್ತೇವೆ. ಹಿಂದೂ ಸಮಾಧಿಯ ಮೇಲೆ ಅಧಿಕಾರ ಮಾಡುವವರು ನಾವಲ್ಲ. ಹಿಂದೂತ್ವದ ಆಧಾರದ ಮೇಲೆ ನಾವು ಅಧಿಕಾರಕ್ಕೆ ಬಂದಿದ್ದೇವೆ. ನಮ್ಮ ಜೀವ ಹೋದರೂ ಹಿಂದೂ ಪರವಾಗಿ ನಾವು ಇರುತ್ತೇವೆ. ಅವರ ರಕ್ಷಣೆ ಮಾಡುತ್ತೇವೆ. ಇಂತಹ ಪ್ರಕರಣಗಳಿಗೆ ಅಂತ್ಯವಾಡುವಂತಹ ಕೆಲಸ ಮಾಡುತ್ತೇವೆ. ಹರ್ಷನ ಕೊಲೆಯೇ ರಾಜ್ಯದಲ್ಲಿ ಕೊನೆಯಾಗಬೇಕು. ಈ ರೀತಿಯ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದೇ ವೇಳೆ ಹರ್ಷನ ಕುಟುಂಬಕ್ಕೆ 5 ಲಕ್ಷ ಚೆಕ್ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *