ಮುಸ್ಲಿಂ ಯುವತಿಯರನ್ನ ಮದ್ವೆಯಾದ್ರೆ 5 ಲಕ್ಷ: ಯತ್ನಾಳ್‌ ಘೋಷಣೆ

Public TV
1 Min Read

– ಕೊಪ್ಪಳದಲ್ಲಿ ಕೊಲೆಯಾದ ಗವಿ ನಾಯಕನ ಮನೆಗೆ ಶಾಸಕ ಭೇಟಿ

ಕೊಪ್ಪಳ: ಮುಸ್ಲಿಂ ಯುವತಿಯರನ್ನ (Muslim Girls) ಮದ್ವೆಯಾದ್ರೆ 5 ಲಕ್ಷ ರೂ. ಕೊಡುವ ಅಭಿಯಾನ ಆರಂಭಿಸುತ್ತೇವೆ. ಈ ಮೂಲಕ ಹಿಂದೂಗಳನ್ನ ಕೊಲೆ ಮಾಡುವ ಮನಸ್ಥಿತಿಯುಳ್ಳ ಮುಸ್ಲಿಮರಿಗೆ ಉತ್ತರ ನೀಡಬೇಕಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ (Basangouda Patil Yatnal) ಹೇಳಿದ್ದಾರೆ.

ಕೊಪ್ಪಳ ನಗರದ (Koppala City) ಕುರುಬರ ಓಣಿಯಲ್ಲಿನ ಕೊಲೆಯಾದ ಗವಿಸಿದ್ದಪ್ಪ ಮನೆಗೆ ಭೇಟಿ ನೀಡಿದ ನಂತರ ಮಾಧ್ಯಮ ಗಳೊಂದಿಗೆ ಅವರು ಮಾತನಾಡಿದರು.

ಮಸೀದಿ ಮುಂದೆಯೇ ಗವಿಸಿದ್ದಪ್ಪ ನಾಯಕ ಕೊಲೆಯಾಗಿದೆ. ಕೊಲೆ ಮಾಡುವಾಗ ತಡೆಯುವ ಕೆಲಸ ಅಲ್ಲಿದ್ದವರು ಮಾಡಿಲ್ಲ. ಕೊಲೆ ಮಾಡಿದ ಆರೋಪಿ ರೀಲ್ಸ್‌ನಲ್ಲಿ ಮಚ್ಚು ತೋರಿಸಿದ್ದಾನೆ. ಈಗ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಆ ಹುಡುಗಿಯನ್ನೂ ಅರೆಸ್ಟ್‌ ಮಾಡಬೇಕು. ಮಚ್ಚು ಹಿಡಿದು ಓಡಾಡುವವರಿಗೆ ಸರ್ಕಾರ ಬೆಂಬಲ ನೀಡುತ್ತದೆ. ಲವ್ ಜಿಹಾದ್ ಮಾಡಿದಾಗ ಸರ್ಕಾರ ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡುತ್ತದೆ. ಸರ್ಕಾರ ಮುಸ್ಲಿಂರಿಗೆ ಮಾತ್ರ ರಕ್ಷಣೆ ನೀಡುತ್ತದೆ. ಈ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. ಅಧಿವೇಶನದಲ್ಲಿ ಈ ಕುರಿತು ಪ್ರಶ್ನಿಸುತ್ತೇನೆ. ಆ.11ರ ಪ್ರತಿಭಟನೆಗೆ ಎಲ್ಲರೂ ಸಹಕರಿಸಬೇಕು. ಇದೇ ನೆಪದಲ್ಲಿ ಗಣೇಶ ಹಬ್ಬಕ್ಕೆ ಅಡ್ಡಿ ಪಡಿಸಬಾರದು ಎಂದು ಆಗ್ರಹಿಸಿದರು.

ಮುಸ್ಲಿಮರು ಅಪರಾಧಿಗಳಲ್ಲ ಎಂದು ಬಿಂಬಿಸದಂತೆ ಪೊಲೀಸರಿಗೆ ಒತ್ತಡವಿದೆ. ಡ್ರಗ್ಸ್ ಗಾಂಜಾದ ಬಗ್ಗೆ ಗೃಹ ಸಚಿವರು ಉಡೊ ಮಾತನಾಡುತ್ತಾರೆ. ಸದ್ಯ ರಾಜ್ಯದಲ್ಲಿ ಸಾಬರ ಸರ್ಕಾವಿದೆ. ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಏನಾದರೂ ತೊಂದರೆಯಾದ್ರೆ ಮಾತ್ರ ಪ್ರತಿಕ್ರಿಯಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಸಾಂತ್ವಾನ ಹೇಳಿದ್ರೆ ಸಾಲದು. ಕುಟುಂಬದ ನೆರವಿಗೆ ಬರಬೇಕು ಎಂದು ವಾಗ್ದಾಳಿ ಮಾಡಿದರು.

Share This Article