ಕೋರ್ಟ್ ತೀರ್ಪು ಬರೋವರೆಗೂ ಕಾಲೇಜುಗಳಿಗೆ ರಜೆ ಕೊಡಿ: ಯತ್ನಾಳ್

Public TV
2 Min Read

ವಿಜಯಪುರ: ಕೋರ್ಟ್ ತೀರ್ಪು ಬರೋವರೆಗೂ ಕಾಲೇಜುಗಳಿಗೆ ರಜೆ ಕೊಡಿ ಎಂದು ಶಾಸಕ ಬಸನಗೌಡ ಯತ್ನಾಳ್ ಆಗ್ರಹಿಸಿದರು.

ಹೋರಾಟದಿಂದ ಸಂಘರ್ಷಕ್ಕೆ ತಿರುಗಿದ ಹಿಜಬ್ ಮತ್ತು ಕೇಸರಿ ಶಾಲು ವಿಚಾರ ಕಾಲೇಜುಗಳಲ್ಲಿ ಕಲ್ಲು ತೂರಾಟ ನಡೆದಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ಒಂದು ವಾರಗಳ ಕಾಲ ಕಾಲೇಜುಗಳಿಗೆ ರಜೆ ನೀಡಿ. ಕೋರ್ಟ್ ತೀರ್ಪು ಬರೋವರೆಗೂ ಕಾಲೇಜುಗಳಿಗೆ ರಜೆ ಕೊಡಿ. ಒಂದು ವಾರಗಳ ಕಾಲ ರಜೆ ಘೋಷಣೆ ಮಾಡೋದು ಒಳ್ಳೆಯದು. ಉದ್ದೇಶಪೂರ್ವಕವಾಗಿ ಗಲಾಟೆ ನಡೆಸುತ್ತಾರೆ. ಹಿಜಬ್ ಬೆಂಬಲಿಸೋರ ಉದ್ದೇಶವೇ ಗಲಾಟೆಯಾಗಿದೆ. ಅಶಾಂತಿ ಮೂಡಿಸೋದು ಅವರ ಉದ್ದೇಶ. ಕೋರ್ಟ್ ಶೀಘ್ರದಲ್ಲೇ ನ್ಯಾಯ ಕೊಡಲಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದನ್ನೂ ಓದಿ: ಹಿಜಬ್-ಕೇಸರಿ ಅಂತಾ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ: HDK ಕಿಡಿ

ವಾರ ತಿಂಗಳವರೆಗೆ ಕೋರ್ಟ್ ಜಡ್ಜ್ ಮೆಂಟ್ ಮುಂದುವರೆದರೆ ಸಂಘರ್ಷ ಉಂಟಾಗುತ್ತೆ. ಶೀಘ್ರವಾಗಿ ತೀರ್ಪು ನೀಡಲಿ. ನ್ಯಾಯಾಲಯ ಸೂಕ್ತ ತೀರ್ಪು ನೀಡಲಿದೆ. ನ್ಯಾಯಾಲಯ ನೀಡಿದ ತೀರ್ಪನ್ನ ಎಲ್ಲರೂ ಪಾಲಿಸಲೇಬೇಕು. ತೀರ್ಪು ಪಾಲಿಸದಿದ್ದರೇ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಇದೆಲ್ಲವು ಉದ್ದೇಶ ಪೂರ್ವಕವಾಗಿ ಮಾಡಲಾಗ್ತಿದೆ. ದೇಶದಲ್ಲಿ ಶಾಂತಿ ಹಾಳು ಮಾಡಲು ಹಿಜಬ್ ವಿವಾದ ಸೃಷ್ಟಿಸಲಾಗಿದೆ. ತುಕುಡೆ ತುಕುಡೆ ಗ್ಯಾಂಗ್ ಕಾಂಗ್ರೆಸ್‍ನ ವ್ಯವಸ್ಥಿತ ಹುನ್ನಾರ ಇದಾಗಿದೆ. ದೇಶದಲ್ಲಿ ಅಸ್ಥಿರತೆ ತರಲು ನಡೆದ ಪ್ರಕ್ರಿಯೆ ಇದು. ಕಾಂಗ್ರೆಸ್ ನ ಷಡ್ಯಂತ್ರ ಎಂದು ಕಿಡಿಕಾರಿದರು.

ಹಿಜಬ್ ಹಾಕಲೇಬೇಕು ಅನ್ನೋದರ ಹಿಂದೆ ಕಾಂಗ್ರೆಸ್‍ನ ಶಕ್ತಿ ಇದೆ. ದೇಶ ವಿರೋಧಿ ಸಂಘಟನೆಗಳ ಬೆಂಬಲ ಇದೆ. ಹೈದ್ರಾಬಾದ್ ತಂಡ ಬಂದು, ಉಡುಪಿಯಲ್ಲಿ ಸಭೆ ನಡೆಸಿ ಹಿಜಬ್‍ಗೆ ಬೆಂಬಲಿಸಿದೆ. ರೈತರ ಹೋರಾಟ, ಸಿಎಎ ಹೋರಾಟದಲ್ಲಿಯು ಇದೆ ರೀತಿ ನಡೆದಿತ್ತು ಎಂದು ವಿವರಿಸಿದರು. ಇದನ್ನೂ ಓದಿ: ರಾಜವಂಶದ ಆಚೆಗೆ ಕಾಂಗ್ರೆಸ್ ಯೋಚಿಸಲು ಸಾಧ್ಯವಿಲ್ಲ: ಮೋದಿ ವಾಗ್ದಾಳಿ

ದೇಶದಲ್ಲಿ ಒಂದೇ ಪಕ್ಷಕ್ಕೆ ಅಧಿಕಾರ ಕೊಟ್ಟಿರೋದಕ್ಕೆ ಹೀಗೆಲ್ಲಾ ಮಾಡ್ತಿದ್ದಾರೆ. ಪ್ರಧಾನಿ ಮೋದಿ ಆಡಳಿತ ನೋಡಲಾಗದೆ ಉದ್ದೇಶಪೂರ್ವಕವಾಗಿ ವಿರೋಧ ಪಕ್ಷಗಳು ಹೀಗೆಲ್ಲ ಮಾಡ್ತೀವೆ. ಮುಸ್ಲಿಂರಿಗೆ ದೇಶ ಭಕ್ತಿ ಇಲ್ಲ. ಅವರಿಗೆ ದೇಶಭಕ್ತಿಯನ್ನ ನಾವು ಕಲಿಸಲಿಲ್ಲ. ವಕ್ಫ ಬೋರ್ಡ್, ಕಾಶ್ಮೀರ 370, ಅಲ್ಪ ಸಂಖ್ಯಾತ ಆಯೋಗ, ಇಲಾಖೆ ಅವರಿಗಾಗಿ ಪ್ರತ್ಯೇಕ ನಿಧಿ ಕೊಟ್ಟು ಹೀಗೆಲ್ಲ ನಡೆಯುತ್ತಿದೆ. ಅವರು ಸಂವಿಧಾನವನ್ನು ಒಪ್ಪುವುದಿಲ್ಲ. ಸಂವಿಧಾನ ಒಪ್ಪದವರಿಗೆ ಈ ದೇಶದಲ್ಲಿ ಇರಲು ನೈತಿಕತೆ ಇಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *