ಯತೀಂದ್ರ ಕೂಡ ವಿಜಯೇಂದ್ರನಂತೆ ವಸೂಲಿಗೆ ಇಳಿದಿದ್ದಾನೆ: ಯತ್ನಾಳ್

2 Min Read

ವಿಜಯಪುರ: ವಿಜಯೇಂದ್ರ ಹೇಗೆ ಯಡ್ಡಿಯೂರಪ್ಪ ಸಿಎಂ ಇದ್ದಾಗ ವಸೂಲಿ ಮಾಡಿದ್ದ, ಹಾಗೆ ಸಿದ್ದರಾಮಯ್ಯ ಮಗ ಕೂಡ ವಿಜಯೇಂದ್ರನಂತೆ ವಸೂಲಿಗೆ ನಿಂತಿದ್ದಾನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಮಾತನಾಡಿದ ಅವರು, ಯತೀಂದ್ರ ಕೂಡ ವಸೂಲಿ ಕಂಪನಿಯಾಗಿದ್ದಾನೆ. ವಿಜಯೇಂದ್ರ ಹೇಗೆ ಯಡ್ಡಿಯೂರಪ್ಪ ಸಿಎಂ ಇದ್ದಾಗ ವಸೂಲಿ ಮಾಡಿದ್ದ. ಹಾಗೆ ಸಿದ್ದರಾಮಯ್ಯ ಮಗ ಕೂಡ ವಿಜಯೇಂದ್ರ ಹಾಗೆ ವಸೂಲಿಗೆ ನಿಂತಿದ್ದಾನೆ. ವಿಜಯೇಂದ್ರ ಕಡೆ ರಾತ್ರಿ ಟ್ರೇನಿಂಗ್ ತೆಗೆದುಕೊಳ್ಳುತ್ತಾನಂತೆ. ಹೇಗೆ ನಕಲಿ ಸಹಿ ಮಾಡಬೇಕು ಅಂತ ತಿಳಿಸಿಕೊಳ್ಳುತ್ತಿದ್ದಾನೆ ಟ್ರೇನಿಂಗ್ ಕೊಡುವ ಮಾಸ್ಟರ್ ನಮ್ಮವನೇ. ಹೀಗಾಗಿ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಡುವುದಿಲ್ಲ, ಡಿಕೆಶಿ ಸಿಎಂ ಆಗುವುದಿಲ್ಲ. ವಿಧಾನಸಭೆ ವಿಸರ್ಜನೆ ನಿಶ್ಚಿತ ಎಂದಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ನಾಳೆ ಮೋದಿ ಚಾಲನೆ

ಗದ್ದುಗೆ ಗುದ್ದಾಟ ಜಗಳ ವಿಧಾನಸಭೆ ವಿಸರ್ಜನೆವರೆಗೆ ಬಂದ್ರೆ ಆಶ್ಚರ್ಯ ಇಲ್ಲ. ಡಿಕೆಶಿ ಅವರಿಗೆ ಡೂ ಆರ್ ಡೈ ಇದೆ. ಸಿದ್ದರಾಮಯ್ಯ ಅವರಿಗೆ ಏನಿದೆ ಇನ್ನೊಮ್ಮೆ ಸಿಎಂ ಆಗಲ್ಲ, ಹೇಗಿದ್ರೂ ಮನೆಗೆ ಹೋಗುತ್ತೇನೆ ಅಂತಾ ಗೊತ್ತಿದೆ. ನನ್ನ ಮಗ ಅಂತ್ರೂ ಅಷ್ಟು ಯೋಗ್ಯನಲ್ಲ ಅಂತಾ ಗೊತ್ತಾಗಿದೆ. ವಿಸರ್ಜನೆ ಆಗೇ ಆಗುತ್ತೆ, ಮುಂದೆ ಮತ್ತೆ ಒಳ್ಳೆಯ ಸರ್ಕಾರ ಬರುತ್ತೆ. ರಾಜ್ಯದಲ್ಲಿ ನಡೆದಿರುವ ಭೂಕಬಳಿಕೆ, ಹಿಂದೂ ದೇವಸ್ಥಾನಗಳಿಗೆ ಕಲ್ಲು ಎಸೆಯು ವುದು. ನಿನ್ನೆ ಒಂದು ಮೂರ್ತಿ ಭಗ್ನ ಮಾಡಿದ್ದಾರೆ. ಇದೆಕ್ಕೆಲ್ಲ ಶಾಶ್ವತ ಪರಿಹಾರ ಅಂದ್ರೆ ನಮ್ಮ ಜೆಸಿಬಿ ಒಂದೇ ಎಂದು ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಬೇರೆ ಕ್ಷೇತ್ರಗಳಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ನಿಮ್ಮ ಕ್ಷೇತ್ರದ ಬಗ್ಗೆ ತಲೆಕೆಡಿಸಿಕೊಳ್ಳಿ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು ಶಿಕಾರಿಪುರದ ಬಗ್ಗೆ ಅಷ್ಟೆ ತಲೆಕೆಡಿಸಿಕೊಳ್ಳಲಿ. ಶಿಕಾರಿಪುರನೇ ಅಲ್ಲಾಡುತ್ತಿದೆ, ಮೈಸೂರು ನಿಲ್ಲಬೇಕಾ, ತೂಮಕುರು ನಗರಕ್ಕೆ ನಿಲ್ಲಬೇಕಾ, ರಾಜಾಜಿನಗರಕ್ಕೆ ನಿಲ್ಲಬೇಕಾ ಅಂತಾ ಓಡಾಡುತ್ತಿದ್ದಾನೆ. ಇಲ್ಲಿ ಬಂದು ಬಾಗಲಕೋಟೆಯವರು ವಿಜಯಪುರದ ಬಗ್ಗೆ, ವಿಜಯಪುರದವರು ಬಾಗಲಕೋಟೆ ಬಗ್ಗೆ ಮಾತನಾಡುವುದು ಬೇಡ ಅಂತಾ ಹೇಳ್ತಾನೆ. ಮೊದಲು ಶಿಕಾರಿಪುರ ಗಟ್ಟಿ ಮಾಡಿಕೊಳ್ಳಲಿ. ಯಾರಿಗಾದ್ರು ಮೊದಲು ಸಲಹೆ, ಮಾರ್ಗದರ್ಶನ ಮಾಡಬೇಕಾದ್ರೆ ಮೊದಲು ತಮ್ಮ ಕುರ್ಚಿ ಗಟ್ಟಿ ಇರಬೇಕು ಎಂದು ಕಾಲೆಳೆದಿದ್ದಾರೆ.ಇದನ್ನೂ ಓದಿ: ಇವರ ಸಾಧನೆ ಸಾಲದ ಹೊರೆ ಅಷ್ಟೇ – ಸರ್ಕಾರದ 1000 ದಿನಗಳ ಸಂಭ್ರಮಕ್ಕೆ ನಿಖಿಲ್ ಲೇವಡಿ

Share This Article