ಡಿಕೆಶಿ ಒಂದು ಕಾಲು ಬಿಜೆಪಿಯಲ್ಲಿ ಇಟ್ಟಿದ್ದಾರೆ: ಯತ್ನಾಳ್ ಹೊಸ ಬಾಂಬ್

Public TV
2 Min Read
Basanagouda Patil Yatnal 1

– ಡಿಕೆಶಿ – ವಿಜಯೇಂದ್ರ ಕರ್ನಾಟಕವನ್ನ ಮಾರಿಬಿಡ್ತಿದ್ರು
– ಸೋನಿಯಾ ಮಾತೆ ಅಂತಾ ಹಾಡಿದ್ರೆ ಡಿಕೆಶಿ ಸಿಎಂ ಆಗ್ತಿದ್ರು ಅಂತ ಲೇವಡಿ

ಕಲಬುರಗಿ: ಡಿಕೆ ಶಿವಕುಮಾರ್ (DK Shivakumar) ಒಂದು ಕಾಲನ್ನ ಬಿಜೆಪಿಯಲ್ಲಿ ಇಟ್ಟಿದ್ದು, ಈಗಾಗಲೇ ಬಿಜೆಪಿ ಜೊತೆ ಸಹ ಡಿಕೆಶಿ ಒಂದು ಚರ್ಚೆ ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೊಸ ಬಾಂಬ್ ಸಿಡಿಸಿದ್ದಾರೆ.

ಕಲಬುರಗಿಯಲ್ಲಿ (Kalaburagi) ಮಾತನಾಡಿದ ಅವರು ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಲು ದೆಹಲಿಯಲ್ಲಿ ವಿಜಯೇಂದ್ರ (B Y Vijayendra) ಜೊತೆ ಸೇರಿ ಒಂದು ಚರ್ಚೆ ಮಾಡಿದ್ರು. 60 ರಿಂದ 70 ಕಾಂಗ್ರೆಸ್ ಶಾಸಕರನ್ನ ಕರೆತಂದು ನಮಸ್ತೆ ಸದಾ ವತ್ಸಲೇ ಹಾಡ್ತೀವಿ ಅಂತಾ ಹೇಳಿದ್ದಾರೆ. ಈ ಮೂಲಕ ಡಿಕೆಶಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು. ಆದರೆ ನಮ್ಮ ಆಂತರಿಕ ವರದಿಯಲ್ಲಿ ಡಿಕೆಶಿ ಕಡೆ 12 ಶಾಸಕರು ಇಲ್ಲ ಅಂತಾ ವರದಿ ಬಂತು. ಹೀಗಾಗಿ ನಾವು ಸರ್ಕಾರ ಮಾಡಲು ಪ್ರಯತ್ನಿಸಿಲ್ಲ ಅಂತಾ ಬಿಜೆಪಿ ಹೈಕಮಾಂಡ್ ಹೇಳಿತ್ತು. ವಿಜಯೇಂದ್ರ ಹಾಗೂ ಡಿಕೆಶಿ ಇವರಿಬ್ಬರು ಕುಳಿತುಬಿಟ್ಟಿದ್ದರೆ ಕರ್ನಾಟಕವನ್ನ ಮಾರಾಟ ಮಾಡುತ್ತಿದ್ದರು. ಹೀಗಾಗಿ ಡಿಕೆಶಿ ಬೇಡ ಅಂತಾ ನಮ್ಮವರು ಅಂದಿದ್ರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಾತ್ಯಾತೀತ, ಧರ್ಮಾತೀತವಾಗಿ ಕರ್ನಾಟಕ ಕಟ್ಟಿದ ಹಿರಿಮೆ ಅರಸು ಸಮುದಾಯದ್ದು: ಡಿಕೆಶಿ ಶ್ಲಾಘನೆ

ಡಿಕೆಶಿ ಪಾಪ ನಮಸ್ತೆ ಸದಾ ವತ್ಸಲ್ಯ ಅಂತಾ ಹೇಳಿದ್ರು ನಮಸ್ತೆ ಸೋನಿಯಾ ಮಾತೆ ಇಟ್ಲಿ ಕಾ ಪುತ್ರ ಅಂತಾ ಹಾಡಿದ್ರೆ, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ತೆಗೆದು ಸೋನಿಯಾ ಗಾಂಧಿ ಡಿಕೆಶಿಯನ್ನ ಸಿಎಂ ಮಾಡುತ್ತಿದ್ದರು. ಭಾರತ ಮಾತೆಗೆ ನಮಸ್ತೆ ಅಂದ್ರೆ ಇವರಿಗೆ ನೋವಾಗುತ್ತದೆ. ಇಟ್ಲಿ ಮಾತೆಗೆ ಒಂದು ಹಾಡು ಕಟ್ಟಿ ಹಾಡಬೇಕು. ಸೋನಿಯಾ ಮಾತೆ ಅಂತಾ ಹಾಡಿದ್ರೆ ಡಿಕೆಶಿ 24 ಗಂಟೆಯಲ್ಲಿ ಸಿಎಂ ಆಗುತ್ತಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ನಾಳೆ ಎನ್‌ಐಎ ತನಿಖೆಗೆ ಆಗಮಿಸಿ ಬಿಜೆಪಿಯಿಂದ ಧರ್ಮಸ್ಥಳ ಚಲೋ, ಜಾಗೃತಿ ಸಮಾವೇಶ

ಸಿದ್ದರಾಮಯ್ಯ ಮುಸ್ಲಿಮರೇ ಮತ ಹಾಕಿದಂತೆ ಮಾಡ್ತಿದ್ದಾರೆ
ಬಾನು ಮುಷ್ತಾಕ್ (Banu Mushtaq) ಅವರನ್ನು ದಸರಾ ಉದ್ಘಾಟನೆ ಆಯ್ಕೆ ಮಾಡೋ ಬದಲು ಸನಾತನ ಧರ್ಮದ ಮೇಲೆ ನಂಬಿಕೆ ಇರುವ ಸಾಧನೆ ಮಾಡಿದ ದಲಿತ ಅಥವಾ ಇತರೆ ಮಹಿಳೆಯರನ್ನು ಆಯ್ಕೆ ಮಾಡಬೇಕಾಗಿತ್ತು. ಸಿದ್ದರಾಮಯ್ಯ ಅವರಿಗೆ ಸದ್ಯ ಮುಸ್ಲಿಮರೇ ಮತ ಹಾಕಿದಂತೆ ಮಾಡುತ್ತಿದ್ದಾರೆ. ಹಿಂದುಗಳು ವೋಟ್ ಹಾಕಿಲ್ವಾ? ಎಂದು ಪ್ರಶ್ನಿಸಿದ್ದಾರೆ.

ಚಾಮುಂಡಿ ದೇವಿಯ ಆರಾಧನೆ ಹಿಂದೂಗಳು ಮಾಡುತ್ತಾರೆ. ಡಿಕೆಶಿ ಇದು ಸಾರ್ವಜನಿಕ ಅಂತಾ ಹೇಳ್ತಾರೆ, ಹಾಗಿದ್ರೆ ದರ್ಗಾ, ಮಸೀದಿಗಳನ್ನು ಸಾರ್ವಜನಿಕ ಅಂತಾ ಹೇಳಿ. ಸಿದ್ದರಾಮಯ್ಯ ತಮ್ಮ ಜಾತಿಗೆ ಏನು ಮಾಡಿಲ್ಲ. ಎಲ್ಲಾ ಮುಸ್ಲಿಮರಿಗೇ ಮಾಡ್ತಿದ್ದಾರೆ. ಹಿಂದುಗಳಿಗೆ ಮಾಡುವ ಅಪಮಾನಕ್ಕೆ ಜನ ಬುದ್ಧಿ ಕಲಿಸ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Share This Article