ಸಂಗಮೇಶ್ ಈ ಜನ್ಮದಲ್ಲೇ ಇಸ್ಲಾಂಗೆ ಹೋಗಿಬಿಡಲಿ: ಯತ್ನಾಳ್ ತರಾಟೆ

Public TV
2 Min Read

ಬೆಂಗಳೂರು: ಮುಸ್ಲಿಮರಲ್ಲಿ ಮರುಜನ್ಮ ಅನ್ನೋದೇ ಇಲ್ಲ. ಹಾಗಾಗಿ, ಸಿಎಂ ಮತ್ತು ಸಂಗಮೇಶ್ (Sangamesh) ಈಗಲೇ ಇಸ್ಲಾಂಗೆ ಹೋಗಿಬಿಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ತರಾಟೆಗೆ ತೆಗೆದುಕೊಂಡರು.

ವಿಧಾನಸೌಧದಲ್ಲಿ ಮಾತನಾಡಿದ ಯತ್ನಾಳ್, ಮುಸ್ಲಿಮರಲ್ಲಿ ಮರುಜನ್ಮ ಅನ್ನೋದೇ ಇಲ್ಲ. ಸಂಗಮೇಶ್ ಮುಸ್ಲಿಮರ ಜತೆಗೇ ಹೋಗಿಬಿಡಲಿ. ಹಿಂದೂಗಳ ಮತ ಬೇಕಿಲ್ಲ ಅಂತ ಹೇಳಲಿ. ಸಂಗಮೇಶ್ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲಿ. ಸಲಾಲುದ್ದೀನ್ ಖಿಲ್ಜಿ ಅಥವಾ ಶಂಶುದ್ದೀನ್ ಅಥವಾ ಸಲ್ಮಾನ್ ಖಾನ್ ಅಂತ ಹೆಸರು ಬದಲಾಯಿಸಿಕೊಳ್ಳಲಿ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ದುಡ್ಡು ಏನ್‌ ಮೊಟ್ಟೆಯಿಡುತ್ತಾ? – ಅರಣ್ಯ ಸಚಿವರಿಗೆ ಸಿಎಂ ಪ್ರಶ್ನೆ

ಗಣೇಶೋತ್ವದಲ್ಲಿ ಕಲ್ಲು ತೂರಾಟ, ಚಿಕ್ಕಮಕ್ಕಳಿಂದ ಉಗಿಸೋದು, ಪಾಕ್ ಪರ ಘೋಷಣೆ ಇದೆಲ್ಲದರಲ್ಲೂ ಕ್ರಮ ತಗೊಂಡಿಲ್ಲ. ಹಿಂದೂಗಳ ಟಾರ್ಗೆಟ್ ಆಗ್ತಿದೆ. ಮದ್ದೂರಿನ ಜನ ನನ್ನ ಕರೆಸಿ ಮಾತಾಡಿಸುವ ಉತ್ಸುಕತೆಯಲ್ಲಿದ್ದಾರೆ. ಇವತ್ತು ಮದ್ದೂರಿಗೆ ಹೋಗ್ತೇನೆ. ಇದು ಔರಂಗಜೇಬನ ಸರ್ಕಾರ ಅಂತ ಹೋಗಿ ಹೇಳ್ತೇನೆ ಎಂದು ತಿಳಿಸಿದರು.

ವಿರೋಧಕ್ಕೆ ವಿರೋಧ ಮಾಡೋದು ಸರಿಯಲ್ಲ. ಇವಿಎಂಗಳಿಂದ ಅಕ್ರಮ ಅಸಾಧ್ಯ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಇವರು ಈಗ ಬ್ಯಾಲೆಟ್ ಪೇಪರ್ ತರಲು ಹೊರಟಿದ್ದಾರೆ. ಇವರೇ ವೋಟ್ ಸೀಲ್ ಹಾಕಿಕೊಳ್ತಾರೆ, ರಿಗ್ಗಿಂಗ್ ಮಾಡ್ತಾರೆ. ಅದಕ್ಕಾಗಿ ಬ್ಯಾಲೆಟ್ ಪೇಪರ್ ತರ್ತಿದ್ದಾರೆ. ಇವಿಎಂಗಳಲ್ಲಿ ದೋಷ ಇದೆ ಅನ್ನೋದು ಮೊದಲು ಸಾಬೀತು ಮಾಡಲಿ. ಮನೆ ಹಾಳು ಮಾಡೋದಷ್ಟೇ ಇವರಿಗೆ ಗೊತ್ತಿರೋದು. ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ತಾವು ಸೋಲ್ತೀವಿ ಅಂತ ಕಾಂಗ್ರೆಸ್‌ಗೆ ಗೊತ್ತು. ಅದಕ್ಕಾಗಿ ಬ್ಯಾಲೆಟ್ ಪೇಪರ್ ತರ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿ.ಟಿ ರವಿ ಸಂಸ್ಕೃತಿ ಬಗ್ಗೆ ಜನರಿಗೆ ಗೊತ್ತಿದೆ – ಡಿಕೆಶಿ

ಸಿ.ಟಿ ರವಿ ವಿರುದ್ಧ ಎಫ್‌ಐಆರ್ ವಿಚಾರವಾಗಿ ಮಾತನಾಡಿ, ಒಂದು ಕೋಮನ್ನು ಖುಷಿಪಡಿಸಲು ಹಿಂದೂಗಳ ಟಾರ್ಗೆಟ್ ಮಾಡಲಾಗುತ್ತಿದೆ. ಬಿಜೆಪಿಯವರ ಮೇಲೆ, ಹಿಂದೂಗಳ ಮೇಲೆ ಪ್ರಕರಣ ಹಾಕ್ತಿದ್ದಾರೆ. ನನ್ನ ಮೇಲೂ 70 ಕೇಸ್‌ಗಳಿವೆ. ಹಿಂದೂಗಳ ದನಿ ಅಡಗಿಸುವ ಕೆಲಸ ಇದು. ಇದಕ್ಕೆಲ್ಲ ನಾವು ಹೆದರಲ್ಲ, ಜಗ್ಗಲ್ಲ ಎಂದು ಸವಾಲು ಹಾಕಿದರು.

ರಾಜ್ಯದ ಜನ ಯಾರನ್ನು ಒಪ್ಪಿಕೊಂಡಿದ್ದಾರೆ ಅನ್ನೋ ಸಂದೇಶ ಹೈಕಮಾಂಡ್‌ಗೆ ಕೊಡಬೇಕಿದೆ. ಹೈಕಮಾಂಡ್ ತಲೆಯಲ್ಲಿ ಇನ್ನೂ ಪೂಜ್ಯ ತಂದೆಯವರು, ಅವರ ಮಗ ಜನಪ್ರಿಯ ಇದ್ದಾರೆಂಬ ಭಾವನೆ ಇದೆ. ಸಮಸ್ತ ವೀರಶೈವ ಲಿಂಗಾಯತರು ಅವರ ಕಡೆ ಇದ್ದಾರೆ ಅನ್ಕೊಂಡಿದ್ದಾರೆ. ವಿಜಯೇಂದ್ರ ತೆಗೆದರೆ ವೀರಶೈವ ಲಿಂಗಾಯತ ಸಮುದಾಯ ಕೈಬಿಟ್ಟು ಹೋಗುತ್ತೆ ಅಂತ ಅಮಿತ್ ಶಾ, ಜೆಪಿ ನಡ್ಡಾ ಮುಂದೆ ಪೋಸ್ ಕೊಟ್ಟಿದ್ದಾರೆ. ಇದನ್ನ ಬಟಾಬಯಲು ಮಾಡಲು ನಾನು ಪ್ರವಾಸ ಮಾಡ್ತಿದ್ದೀನಿ. ತಂದೆ ಮಗನ ಪರ ಈಗ ಯಾರೂ ಇಲ್ಲ. ಲಿಂಗಾಯತರು ಇಲ್ಲ, ಕಾರ್ಯಕರ್ತರೂ ಇಲ್ಲ, ಪಕ್ಷದ ಹಿರಿಯರೂ ಅವರ ಪರ ಇಲ್ಲ. ವಿಜಯೇಂದ್ರ ಹೊಂದಾಣಿಕೆ ರಾಜಕೀಯ ಮಾಡ್ತಿದ್ದಾರೆ. ಆರ್‌ಸಿಬಿ ಸಾವುಗಳ ಬಗ್ಗೆ ವಿಜಯೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿಲ್ಲ. ಅಶೋಕ್ ಕೂಡಾ ಮಾತಾಡಲಿಲ್ಲ. ಡಿಕೆಶಿ ಬಗ್ಗೆ ಅಶೋಕ್‌ಗೆ ಮಾತಾಡುವ ಧೈರ್ಯವೇ ಇಲ್ಲ. ಪರಮೇಶ್ವರ್ ಬಗ್ಗೆನೂ ಮಾತಾಡಿಲ್ಲ. ಇದೇ ಅಡ್ಜಸ್ಟ್ಮೆಂಟ್. ವಿಜಯೇಂದ್ರ ಮಾತಾಡುವಾಗ ಯತ್ನಾಳ್ ಯತ್ನಾಳ್ ಅಂತ ಜನ ಕೂಗ್ತಾರೆ. ಈ ಸರ್ಕಾರದ ಲೂಟಿ ವಿರುದ್ಧ ಜನ ಸಾಕಾಗಿ ಹೋಗಿದ್ದಾರೆ. ನೇಪಾಳದ ಪರಿಸ್ಥಿತಿಯ ಪಾರ್ಟ್ 2 ಕರ್ನಾಟಕದಲ್ಲಿ ಆಗುತ್ತೆ ಎಂದು ಎಚ್ಚರಿಸಿದ್ದಾರೆ.

Share This Article