ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ – ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಮಳೆ

Public TV
2 Min Read

– ಕಾರವಾರ, ಶಿವಮೊಗ್ಗ, ಉಡುಪಿಯಲ್ಲಿ ಜಿಟಿಜಿಟಿ ಮಳೆ

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ (Arabian Sea) ವಾಯುಭಾರ ಕುಸಿತ ಕಾಣಿಸಿಕೊಂಡಿರುವ ಹಿನ್ನೆಲೆ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ (Rain) ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈಗಾಗಲೇ ರಾಜ್ಯದಲ್ಲಿ ಕೆಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲೂ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಇರಲಿದೆ. ವಾಯುಭಾರ ಕುಸಿತದಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದನ್ನೂ ಓದಿ: ನಾನೂ ಕರಸೇವಕ, ನನ್ನನ್ನೂ ಬಂಧಿಸಿ – ಅಭಿಯಾನ ಆರಂಭಿಸಿದ್ದ ಸುನಿಲ್‌ ಕುಮಾರ್‌ ವಶಕ್ಕೆ

ಉತ್ತರ ಕನ್ನಡ (Uttara Kannada) ಕರಾವಳಿಯಲ್ಲಿ ದಿಢೀರ್ ವರುಣನ ಆಗಮನವಾಗಿದ್ದು, ಕಾರವಾರದಲ್ಲಿ ಬೆಳಗ್ಗೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕಳೆದ ಒಂದು ಗಂಟೆಯಿಂದ ಮಳೆ ಅಬ್ಬರಿಸಿದ್ದು, ಏಕಾಏಕಿ ಮಳೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದನ್ನೂ ಓದಿ: ಇನ್ಮುಂದೆ ರಾಜ್ಯದಲ್ಲಿ ಪದವಿ ಶಿಕ್ಷಣ ದುಬಾರಿ – ಶುಲ್ಕ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್

ಮಳೆ ಸುರಿಯುತ್ತಿರುವ ಹಿನ್ನೆಲೆ ನಗರದ ರಸ್ತೆಗಳು ಖಾಲಿಖಾಲಿಯಾಗಿವೆ. ಬಿಸಿಲಿಗೆ ಕಾದಿದ್ದ ಇಳೆಗೆ ವರುಣ ತಂಪೆರೆದಿದ್ದು, ಶಾಲೆ, ಕೆಲಸಕ್ಕೆ ತೆರಳುವವರಿಗೆ ಮಳೆರಾಯ ಅಡಿಪಡಿಸಿದ್ದಾನೆ. ಕಾರವಾರ, ಅಂಕೋಲ, ಕುಮಟಾ ಸೇರಿ ಹಲವು ತಾಲೂಕುಗಳಲ್ಲಿ ಮಳೆ ಸುರಿಯುತ್ತಿದೆ. ಬುಧವಾರದಿಂದ ಹಲವು ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಕೆಲವು ಕಡೆ ಮಳೆಯ ಸಿಂಚನವಾಗಿದೆ. ಇದನ್ನೂ ಓದಿ: ಸ್ವಯಂಪ್ರೇರಿತ ನಂಜನಗೂಡು ಬಂದ್‌ಗೆ ಭರ್ಜರಿ ಪ್ರತಿಕ್ರಿಯೆ – ಮೆಡಿಕಲ್ ಅಂಗಡಿ ಹೊರತು ಪಡಿಸಿ ಎಲ್ಲಾ ವ್ಯಾಪಾರ ಬಂದ್

ಇನ್ನು ಕರಾವಳಿ ಜಿಲ್ಲೆ ಉಡುಪಿಯಲ್ಲಿ (Udupi) ಮುಂಜಾನೆಯಿಂದ ಮಳೆಯಾಗುತ್ತಿದೆ. ಕಳೆದ ಎರಡು ದಿನಗಳಿಂದ ಕೊಂಚ ಮೋಡ ಮುಸುಕಿದ, ಬಿಸಿಲು ಆವರಿಸಿದ ವಾತಾವರಣ ಇತ್ತು. ಇಂದು ಮುಂಜಾನೆಯಿಂದ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ. ಇದನ್ನೂ ಓದಿ: ಮಸ್ಕ್‌ನ ಸ್ಪೇಸ್‍ಎಕ್ಸ್ ರಾಕೆಟ್‍ನಲ್ಲಿ ಶೀಘ್ರ ಇಸ್ರೋ ಉಪಗ್ರಹ ಉಡಾವಣೆ

ಜಿಲ್ಲೆಯ ವಾತಾವರಣ ಸಂಪೂರ್ಣವಾಗಿ ತಂಪಾಗಿದೆ. ರಾಜ್ಯದ ಹಲವೆಡೆ ಶೀತಗಾಳಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ನಾಲ್ಕೈದು ದಿನ ಮಳೆ ಬೀಳಬಹುದು ಎಂದು ತಿಳಿಸಿದೆ. ಶಿವಮೊಗ್ಗದಲ್ಲಿ (Shivamogga) ಮುಂಜಾನೆಯಿಂದ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಜಿಟಿಜಿಟಿ ಮಳೆ ಆರಂಭಗೊಂಡಿದೆ. ಇದನ್ನೂ ಓದಿ: ಕರಸೇವಕರ ಅರೆಸ್ಟ್‌ ಮಾಡಿದ್ದ ಇನ್ಸ್‌ಪೆಕ್ಟರ್‌ಗೆ ಕಡ್ಡಾಯ ರಜೆ – ಪ್ರಶ್ನೆಗೆ ಕಾರಣವಾಯ್ತು ಸರ್ಕಾರದ ನಡೆ

Share This Article