ತನ್ನ ಉಗುಳಿನಿಂದ ಗ್ರಾಹಕನ ಮುಖಕ್ಕೆ ಮಸಾಜ್‌ ಮಾಡಿದ ಕ್ಷೌರಿಕ!

Public TV
1 Min Read

ಲಕ್ನೋ: ಆಘಾತಕಾರಿ ಘಟನೆಯೊಂದರಲ್ಲಿ ಲಕ್ನೋದ ಸಲೂನ್‌ನಲ್ಲಿ (Lucknow salon) ಕ್ಷೌರಿಕನೊಬ್ಬ ಗ್ರಾಹಕನ ಮುಖಕ್ಕೆ ತನ್ನದೇ ಆದ ಉಗುಳಿನಿಂದ ಮಸಾಜ್ (Spit Massage) ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿ ಝೈದ್ ತನ್ನ ಕೈ ಮೇಲೆ ಉಗುಳುವುದು ಮತ್ತು ಗ್ರಾಹಕರ ಮುಖವನ್ನು ಉಜ್ಜಲು ಬಳಸಿರುವ ದೃಶ್ಯ ಸಲೂನ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಣಿಪುರ ಸಿಎಂ ನಿವಾಸದ ಬಳಿಯ ಕಾಂಪ್ಲೆಕ್ಸ್‌ನಲ್ಲಿ ಭಾರೀ ಅಗ್ನಿ ದುರಂತ

ಆರೋಪಿ ಝೈದ್ ನ ಕೃತ್ಯದಿಂದ ಗ್ರಾಹಕನಿಗೆ ಅನುಮಾನ ಬಂದಿದೆ. ಕೂಡಲೇ ಅವರು ಸಲೂನ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಪರಿಶೀಲಿಸಿದ್ದಾರೆ. ಕ್ಷೌರಿಕ ತನ್ನ ಕೈಗೆ ಉಗುಳುವುದು ಮತ್ತು ಮುಖಕ್ಕೆ ಮಸಾಜ್ ಮಾಡಲು ಉಗುಳನ್ನು ಬಳಸುವುದನ್ನು ಕಂಡು ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.

ಗ್ರಾಹಕನ ದೂರಿನ ಆಧಾರದ ಮೇಲೆ ಲಕ್ನೋ ಪೊಲೀಸರು ಝೈದ್‌ನನ್ನು ಬಂಧಿಸಿದ್ದಾರೆ. ಸದ್ಯ ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಘಟನೆ ನಡೆದು ಕೆಲ ದಿನಗಳಾದರೂ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಕ್ಷೌರಿಕನ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Share This Article