ಸಂಜೆ ನೆರೆ ಮನೆಗೆ ನುಗ್ಗಿ ಇಬ್ಬರು ಮಕ್ಕಳ ಹತ್ಯೆ – ರಾತ್ರಿ ಯುಪಿ ಪೊಲೀಸರ ಎನ್‌ಕೌಂಟರ್‌ಗೆ ಪಾತಕಿ ಬಲಿ

By
1 Min Read

ಲಕ್ನೋ: ತನ್ನ ನೆರೆ ಮನೆಯ ಇಬ್ಬರು ಮಕ್ಕಳನ್ನು (Children) ಹತ್ಯೆಗೈದ ಕ್ಷೌರಿಕನನ್ನು(Barber) ಎನ್‌ಕೌಂಟರ್‌ (Encounter) ಮಾಡಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.  ಇದನ್ನೂ ಓದಿ: ಮುಸ್ಲಿಮರ ಬಹುಪತ್ನಿತ್ವ ಕಂಡು ಬೇರೆಯವರಿಗೆ ಹೊಟ್ಟೆಕಿಚ್ಚು: ಜಾವೇದ್‌ ಅಖ್ತರ್‌

ಉತ್ತರ ಪ್ರದೇಶದ ಬದೌನ್‌ನಲ್ಲಿ ಆರೋಪಿ ಸಾಜೀದ್‌ (22) ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ಪರಾರಿಯಾಗಿದ್ದ. ಪೊಲೀಸರು ಆತನ ಶೋಧ ನಡೆಸುತ್ತಿದ್ದಾಗ ಆತ ಪೊಲೀಸರ (Police) ಮೇಲೆಯೆ ಹಲ್ಲೆ ನಡೆಸಲು ಮುಂದಾಗಿದ್ದ. ಈ ವೇಳೆ ಪೊಲೀಸರು ಆತನನ್ನು ಎನ್‌ಕೌಂಟರ್‌ ಮಾಡಿ ಹತ್ಯೆ ಮಾಡಿದ್ದಾರೆ. ಆರೋಪಿ ಬಳಿಯಿಂದ ರಿವಾಲ್ವಾರ್‌ ಮತ್ತು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಾಮೂಲ್ ಅಧ್ಯಕ್ಷರಾಗಿ ಸತತ 7ನೇ ಬಾರಿಗೆ ಹೆಚ್.ಡಿ.ರೇವಣ್ಣ ಅವಿರೋಧ ಆಯ್ಕೆ

ಏನಿದು ಘಟನೆ?
ಆರೋಪಿ ಸಾಜೀದ್‌ ವಿನೋದ್‌ ಅವರ ಮನೆ ಮುಂಭಾಗದಲ್ಲಿ ಸಲೂನ್ ಅಂಗಡಿ ಹಾಕಿದ್ದ. ಮಂಗಳವಾರ ಸಂಜೆ ವಿನೋದ್‌ ಕುಮಾರ್‌ ಮನೆಗೆ ಬಂದು ಚಹಾ ಕೇಳಿದ್ದಾನೆ. ಪತ್ನಿ ಚಹಾ ಮಾಡಲು ಅಡಿಗೆ ರೂಮಿಗೆ ಹೋದಾಗ ಟೆರೇಸ್‌ ಮೇಲೆ ಆಡುತ್ತಿದ್ದ ಮೂವರು ಮಕ್ಕಳ ಮೇಲೆ ಸಾಜೀದ್‌ ಹಲ್ಲೆ ನಡೆಸಿದ್ದಾನೆ. 11 ಮತ್ತು 6 ವರ್ಷದ ಇಬ್ಬರು ಸಹೋದರರ ಕತ್ತು ಸೀಳಿ ಕೊಲೆ ಮಾಡಿದರೆ ಇನ್ನೊಬ್ಬನ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾನೆ.

ಮಕ್ಕಳ ಮೇಲೆ ಹಲ್ಲೆ ನಡೆಸಿದ ವಿಚಾರ ತಿಳಿದು ತಾಯಿ ಜೋರಾಗಿ ಕಿರುಚಾಡಿದಾಗ ಮನೆಯ ಬಳಿ ಹತ್ತಿರದ ನಿವಾಸಿಗಳು ಆಗಮಿಸಿದ್ದಾರೆ. ನಿವಾಸಿಗಳು ಬರುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.

ಕೊಲೆಗೆ ನಿಜವಾದ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆ ಮಾಡಿದ ವಿಚಾರ ತಿಳಿದ ಸ್ಥಳೀಯರು ಸಾಜೀದ್‌ ಅಂಗಡಿಗೆ ಬೆಂಕಿ ಹಚ್ಚಿ ಆಕ್ರೋಶ ಪ್ರದರ್ಶಿಸಿದ್ದಾರೆ.  ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಶಾಂತಿ ಕಾಪಾಡುವಂತೆ ಸ್ಥಳೀಯರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.

 

Share This Article