ಕಲಬುರಗಿಯಲ್ಲಿ ವಕೀಲನ ಬರ್ಬರ ಹತ್ಯೆ – 6 ಜನರ ವಿರುದ್ಧ ಎಫ್‌ಐಆರ್

Public TV
1 Min Read

ಕಲಬುರಗಿ: ಕೋರ್ಟ್‌ಗೆ (Court) ತೆರಳುತ್ತಿದ್ದ ವೇಳೆ ವಕೀಲರೊಬ್ಬರನ್ನು (Lawyer) ಕೆಲ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.

ವೀರಣ್ಣ ಗೌಡ ಹತ್ಯೆಯಾದ ವಕೀಲ. ಇಂದು ಬೆಳಗ್ಗೆ ವೀರಣ್ಣ ಗೌಡ ಅವರನ್ನು ಹಂತಕರು ಶ್ರೀ ಗಂಗಾ ಅಪಾರ್ಟ್ಮೆಂಟ್‌ನಲ್ಲಿ ಕೊಲೆ ಮಾಡಿದ್ದಾರೆ. ಕೋರ್ಟ್‌ಗೆ ತೆರಳುತ್ತಿದ್ದ ವೇಳೆ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹತ್ಯೆ ಮಾಡಲಾಗಿದೆ. ಜಮೀನು ವಿವಾದಕ್ಕೆ (Land Dispute) ಸಂಬಂಧಿಸಿದಂತೆ ವೀರಣ್ಣ ಗೌಡ ಅವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಹಮಾಸ್‌ ಜೊತೆ ಗುಂಡಿನ ಚಕಮಕಿ; ತಿಂಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ ಸಾವು

ಈ ಕುರಿತು ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಹತ್ಯೆಗೆ ಸಂಬಂಧಿಸಿದಂತೆ 6 ಜನರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ನೀಲಕಂಠ ಪೊಲೀಸ್ ಪಾಟೀಲ್, ವಿಜಯಕುಮಾರ್, ಸಿದ್ದಣ್ಣಗೌಡ, ಸಿದ್ರಾಮ್, ಅವ್ವಣ್ಣ, ಗುರು ಸೇರಿದಂತೆ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಲಾರಿ, ಟಾಟಾ ಏಸ್ ನಡುವೆ ಡಿಕ್ಕಿ – ನಾಲ್ವರ ದುರ್ಮರಣ, ಓರ್ವನ ಸ್ಥಿತಿ ಗಂಭೀರ

Share This Article