ದ್ವೇಷ ಮರೆತು ಮತ್ತೆ ಸ್ನೇಹಿತರಾಗುವುದಾಗಿ ನಂಬಿಸಿ ವ್ಯಕ್ತಿಯ ಬರ್ಬರ ಹತ್ಯೆ

Public TV
2 Min Read

ನವದೆಹಲಿ: ಮತ್ತೆ ಗೆಳೆಯರಾಗುವುದಾಗಿ ಹೇಳಿ ಮದ್ಯಪಾನ ಮಾಡುವ ನೆಪದಲ್ಲಿ ವ್ಯಕ್ತಿಯೋರ್ವನನ್ನು ಕರೆದೊಯ್ದು ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಪದೇ ಪದೇ ಇರಿದು ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ (Delhi) ನಡೆದಿದ್ದು, ಹತ್ಯೆಯ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

ಆಶಿಶ್ (22) ಹತ್ಯೆಯಾದ ಯುವಕ. ವಿಕಾಸ್ ಮತ್ತು ವಂಶು ಎಂಬ ಯುವಕರು ಈ ಕೊಲೆಯನ್ನು ಮಾಡಿದ್ದು, ಇವರು ಆಶಿಶ್‌ನೊಂದಿಗೆ ದೀರ್ಘಕಾಲದ ದ್ವೇಷವನ್ನು ಹೊಂದಿದ್ದರು. ಅಲ್ಲದೇ ಜೂನ್ 24ರಂದು ದೆಹಲಿಯ ಕಂಟೋನ್ಮೆಂಟ್‌ನಲ್ಲಿರುವ ತಮ್ಮ ಮನೆಗೆ ಬಂದು ಆಶಿಶ್‌ನೊಂದಿಗೆ ಮತ್ತೆ ಸ್ನೇಹಿತರಾಗುವುದಾಗಿ (Friends) ಹೇಳಿದ್ದಾರೆ. ಬಳಿಕ ಬಾರ್‌ಗೆ (Bar) ಹೋಗೋಣ. ಅಲ್ಲಿ ಬಿಲ್ ನಾವೇ ಕೊಡುತ್ತೇವೆ ಎಂದು ಹೇಳಿದ್ದರು ಎಂದು ಮೃತ ಆಶಿಶ್ ತಂದೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭೀಮ್ ಆರ್ಮಿ ಮುಖ್ಯಸ್ಥನ ಮೇಲೆ ದಾಳಿ ಮಾಡಿದ್ದ ನಾಲ್ವರ ಬಂಧನ

CRIME

ಮತ್ತೆ ಸ್ನೇಹಿತರಾಗಲು ಬಯಸಿದ್ದನ್ನು ಗಮನಿಸಿದ ಆಶಿಶ್ ತಂದೆ ಅನುಮಾನಗೊಂಡು ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಮೂವರೂ ಸುಮಾರು ಅರ್ಧಗಂಟೆಗಳ ಕಾಲ ಪ್ರಯಾಣಿಸಿದ ಬಳಿಕ ವಿಕಾಸ್ ಆಶಿಶ್ ಜೊತೆ ಜಗಳ ಮಾಡಿದ್ದಾನೆ. ಇವರಿಬ್ಬರ ಜಗಳಕ್ಕೆ ವಂಶು ಕೂಡಾ ಸೇರಿಕೊಂಡು ಇದ್ದಕ್ಕಿದ್ದಂತೆ ಆಶಿಶ್‌ಗೆ ಚಾಕುವಿನಿಂದ (Knife) ಇರಿದಿದ್ದಾರೆ. ಇದನ್ನೂ ಓದಿ: ದೇವಸ್ಥಾನದ ಹೊರರಸ್ತೆಯಲ್ಲಿ ಎಮ್ಮೆಯ ತಲೆ ಪತ್ತೆ- ಅಪ್ರಾಪ್ತ ಸೇರಿದಂತೆ ಇಬ್ಬರ ಬಂಧನ

ಚಾಕುವಿನಿಂದ ಇರಿದ ಬಳಿಕ ವಿಕಾಸ್ ಮತ್ತು ವಂಶು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಯ ವಿಡಿಯೋದಲ್ಲಿ ವಿಕಾಸ್ ಹಾಗೂ ವಂಶು ಆಶಿಶ್‌ನ ಬೆನ್ನಿಗೆ ಹಲವು ಬಾರಿ ಇರಿದಿದ್ದು, ಬಳಿಕ ರಸ್ತೆಯಲ್ಲಿ ಆತನನ್ನು ಥಳಿಸಿರುವುದು ಸೆರೆಯಾಗಿದೆ. ಘಟನೆಯಿಂದ ಭೀಕರ ಗಾಯಗೊಂಡಿದ್ದ ಆಶಿಶ್‌ನನ್ನು ಆತನ ತಂದೆ ಏಮ್ಸ್ (AIIMS) ಟ್ರಾಮಾ ಸೆಂಟರ್‌ಗೆ ಕರೆದೊಯ್ದಿದ್ದಾರೆ. ಈ ವೇಳೆ ಸಾರ್ವಜನಿಕರು ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಬ್ಲಾಸ್ಟ್ ಕೇಸ್‌ – ರೊಬೊಟ್‌ ಬಳಸಿ‌ ಭಾರತದಲ್ಲಿ ದಾಳಿಗೆ ಮುಂದಾಗಿದ್ದ ಐಸಿಸ್

ಈ ಹಿನ್ನೆಲೆ ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ಧಾವಿಸಿದ್ದು, ಬಳಿಕ ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಆಶಿಶ್ ಮೃತಪಟ್ಟಿದ್ದು, ಆತನ ತಂದೆಯ ಹೇಳಿಕೆಯನ್ನು ತೆಗೆದುಕೊಂಡು ಅದೇ ದಿನ ಸಂಜೆ ವಿಕಾಸ್ ಮತ್ತು ವಂಶುವನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನಲ್ಲೇ ಮಹಿಳೆ ಜೊತೆ ಕಂಡಕ್ಟರ್ ಸೆಕ್ಸ್- ವೀಡಿಯೋ ವೈರಲ್

ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಆಶಿಶ್‌ನನ್ನು ಕೊಲೆ ಮಾಡಲು ಒಂದು ದಿನ ಮೊದಲೇ ಯೋಜನೆ ಹಾಕಿಕೊಂಡಿದ್ದೆವು ಎಂದು ಒಪ್ಪಿಕೊಂಡಿದ್ದು, ಆತನನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗುವ ಸಲುವಾಗಿ ಮತ್ತೆ ಸ್ನೇಹಿತರಾಗುವ ನಾಟಕವಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಅನ್ಯ ಜಾತಿ ಹುಡ್ಗನನ್ನ ಪ್ರೀತಿಸಿ ಮದ್ವೆಯಾಗಿದ್ದಕ್ಕೆ ಬದುಕಿದ್ದಾಗಲೇ ಮಗಳ ಅಂತ್ಯಸಂಸ್ಕಾರ ಮಾಡಿದ ತಂದೆ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್