ಬಾರ್ ಡ್ಯಾನ್ಸರ್  ರುಂಡ ಕಡಿದು ಬರ್ಬರವಾಗಿ ಹತ್ಯೆಗೈದ ಪ್ರಿಯತಮ

Public TV
1 Min Read

ಗಾಂಧಿನಗರ: ಪ್ರಿಯತಮನೇ ಯವತಿಯ ರುಂಡ ಕಡಿದು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಗುಜರಾತ್‍ನ ಸೂರತ್ ಪಟ್ಟಣದ ಹೊರವಲಯದ ಟಿಂಬಾ ಗ್ರಾಮದಲ್ಲಿ ನಡೆದಿದೆ.

ನಿಶಾ ಜ್ಯೋತಿ ಮೃತ ದುರ್ದೈವಿ. ಈಕೆ ಬಾರ್ ಡ್ಯಾನ್ಸರ್ ಆಗಿದ್ದು, ಮಾಡೆಲ್ ಕೂಡ ಆಗಿದ್ದರು. ಆರೋಪಿಯಾದ 30 ವರ್ಷದ ಪ್ರೀತೇಶ್ ಪಟೇಲ್‍ನನ್ನು ಟಿಂಬಾ ಗ್ರಾಮದ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ಆಗಾಗ ಈಕೆ ಕೆಲಸ ಮಾಡುವ ಮುಂಬೈ ಬಾರ್ ಗೆ ಭೇಟಿ ನೀಡುತ್ತಿದ್ದ. ಅಲ್ಲಿ ಇವರಿಬ್ಬರಿಗೂ ಪರಿಚಯವಾಗಿತ್ತು ಎಂದು ತಿಳಿದು ಬಂದಿದೆ.

ಪ್ರಿತೇಶ್ ಈಗಾಗಲೇ ಮದುವೆಯಾಗಿದ್ದು, ಈತ ಕಳೆದ ವಾರ ಡಿಸೆಂಬರ್ 27 ರಂದು ಜ್ಯೋತಿಯೊಡನೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ. ಡಿಸೆಂಬರ್ 28 ರಂದು ಈ ಜೋಡಿ ಹೊಸವರ್ಷವನ್ನು ಆಚರಿಸಲು ಮುಂಬೈಗೆ ಹೋಗಿತ್ತು. ಅಲ್ಲಿ ಮೀರಾ ರಸ್ತೆಯಲ್ಲಿರುವ ಹೋಟೆಲ್‍ವೊಂದರಲ್ಲಿ ತಂಗಿ ಸೋಮವಾರ ಟಿಂಬಾಗೆ ಹಿಂದಿರುಗಿದ್ದರು.

ಜ್ಯೋತಿಯ ಕಾರ್ ಡ್ರೈವರ್ ಸಂದೀಪ್ ಸಿಂಗ್ ಮತ್ತು ಆತನ ಪತ್ನಿ ಕೂಡ ಪ್ರೀತೇಶ್ ಜೊತೆ ಟಿಂಬಾದ ತೋಟಕ್ಕೆ ಬಂದಿದ್ದರು. ಮಂಗಳವಾರದಂದು ಪ್ರೀತೇಶ್ ಹಾಗೂ ಜ್ಯೋತಿ ಮಧ್ಯೆ ವಾಗ್ವಾದ ನಡೆದಿದೆ. ಜ್ಯೋತಿಗೆ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಪ್ರೀತೇಶ್ ಆಕ್ರೋಶಗೊಂಡಿದ್ದ.

ಜಗಳ ವಿಕೋಪಕ್ಕೆ ತಿರುಗಿ ಅಲ್ಲೇ ಪಕ್ಕದಲ್ಲಿದ್ದ ಕುಡುಗೋಲು ತೆಗೆದು ಪ್ರಿತೇಶ್ ಪಟೇಲ್ ಜ್ಯೋತಿಯ ತಲೆಯನ್ನು ಕತ್ತರಿಸಿದ್ದಾನೆ. ಈ ಎಲ್ಲಾ ದೃಶ್ಯವನ್ನು ನೋಡುತ್ತಿದ್ದ ಚಾಲಕ ಮತ್ತು ಪತ್ನಿ ಭಯಗೊಂಡು ತಮ್ಮ ಮೇಲೂ ದಾಳಿ ಮಾಡಬಹುದೆಂದು ಹೆದರಿ ಅಲ್ಲಿಂದ ಓಡಿಹೋಗಿದ್ದಾರೆ. ನಂತರ ಅವರು ನಡೆದ ಘಟನೆ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.

2 ಕೋಟಿ ಖರ್ಚು: ಆರೋಪಿ ಪಟೇಲ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಜ್ಯೋತಿಗಾಗಿ ನಾನು ಸುಮಾರು 2 ಕೋಟಿ ರೂ. ಖರ್ಚು ಮಾಡಿದ್ದ ಎನ್ನುವ ವಿಚಾರ ತಿಳಿದು ಬಂದಿದೆ. ಅಲ್ಲದೆ ಇವರಿಬ್ಬರ ಸಂಬಂಧದಿಂದ ಪಟೇಲ್ ದಾಂಪತ್ಯ ಜೀವನದಲ್ಲೂ ಬಿರುಕು ಉಂಟಾಗಿತ್ತು ಎಂದು ವರದಿಯಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *