ಜ.24ರಿಂದ ನಾಲ್ಕು ದಿನ ಬ್ಯಾಂಕ್ ಬಂದ್

1 Min Read

ನವದೆಹಲಿ: ವಾರದಲ್ಲಿ 5 ದಿನ ಕೆಲಸ ನಿಗದಿಪಡಿಸಬೇಕೆಂದು ಆಗ್ರಹಿಸಿ ಬ್ಯಾಂಕ್ ಸಿಬ್ಬಂದಿ ಜ.27ರಂದು ರಾಷ್ಟ್ರಮಟ್ಟದಲ್ಲಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಈ ಕಾರಣದಿಂದಾಗಿ ಜ.24ರಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್‌ ಬಂದ್‌ ಆಗಿರಲಿವೆ.

ವಾರಕ್ಕೆ 2 ದಿನ ರಜೆ ಹಾಗೂ 5 ದಿನ ಕೆಲಸ ನಿಗದಿಪಡಿಸಬೇಕೆಂದು ಆಗ್ರಹಿಸಿ ಬ್ಯಾಂಕ್ ಸಿಬ್ಬಂದಿ  ಜ.27ರಂದು ರಾಷ್ಟ್ರಮಟ್ಟದಲ್ಲಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಈ ಮುಷ್ಕರದಿಂದಾಗಿ ಒಟ್ಟು ನಾಲ್ಕು ದಿನಗಳ ಕಾಲ ಬ್ಯಾಂಕ್‌ ಬಂದ್‌ ಆಗಿರಲಿವೆ. ಯಾಕಂದ್ರೆ, ಜನವರಿ 24 (ನಾಲ್ಕನೇ ಶನಿವಾರ), ಜ.25 (ಭಾನುವಾರ), ಜ.26 (ಗಣರಾಜ್ಯೋತ್ಸವ ಸರ್ಕಾರಿ ರಜೆ) ಹಾಗೂ ಜ.27ರಂದು ಬ್ಯಾಂಕ್ ಮುಷ್ಕರ ಇರುತ್ತದೆ. ಹೀಗಾಗಿ ನಾಲ್ಕು ದಿನ ಹಣ ವಹಿವಾಟು, ಚೆಕ್ ಕ್ಲಿಯರೆನ್ಸ್, ಡಿಮ್ಯಾಂಡ್ ಡ್ರಾಫ್ಟ್, ಪಾಸ್‌ಬುಕ್ ಎಂಟ್ರಿ ಸೇರಿದಂತೆ ಪ್ರಮುಖ ವ್ಯವಹಾರಗಳು ನಡೆಯುವುದಿಲ್ಲ. ಇದನ್ನೂ ಓದಿ: 4 ಮನೆ ಸೇರಿ 14 ಕೋಟಿ ಆಸ್ತಿ – ಜಮೀರ್ ಆಪ್ತನ ಮನೆಯಲ್ಲಿ ಲೋಕಾ ದಾಳಿ ವೇಳೆ ಸಿಕ್ಕ ಆಸ್ತಿ ಮೌಲ್ಯ ಬಹಿರಂಗ!

ಈ ನಾಲ್ಕು ದಿನದಲ್ಲಿ ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್, ಯುಪಿಐ ಹಾಗೂ ಎಟಿಎಂ ಸೇವೆಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಡಿಜಿಟಲ್ ಮೂಲಕ ಹಣ ವರ್ಗಾವಣೆ ಹಾಗೂ ಪಾವತಿಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಭಾರತದ ವಿಶಾಲವಾದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಐದು ದಿನಗಳು ಮಾತ್ರ ಕೆಲಸದ ದಿನವೆಂದು ಜಾರಿಗೆ ತರುವುದು ಸುಲಭವಲ್ಲ. ಸದ್ಯ ಪ್ರತಿ ತಿಂಗಳ ಎರಡು ಮತ್ತು ನಾಲ್ಕನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನದಂದು ಬ್ಯಾಂಕ್‌ಗಳ ಸೇವೆ ಇರುವುದಿಲ್ಲ. ಇದೀಗ ಸಿಬ್ಬಂದಿ ವಾರದಲ್ಲಿ ಎರಡು ದಿನ ರಜೆ ನೀಡಲೇಬೇಕು ಎಂಬ ಪಟ್ಟು ಹಿಡಿದು ಕುಳಿತಿದ್ದಾರೆ.

Share This Article