ಸೋರುತಿದೆ ಬಂಕಾಪುರ ಆರೋಗ್ಯ ಕೇಂದ್ರದ ಕಟ್ಟಡ – ನೀರು ಬೀಳುತ್ತಿರುವ ಬೆಡ್ ಮೇಲೆಯೇ ರೋಗಿಗಳಿಗೆ ಚಿಕಿತ್ಸೆ

Public TV
2 Min Read

ಹಾವೇರಿ: ಇಲ್ಲಿನ ಸಮುದಾಯದ ಆರೋಗ್ಯ ಕೇಂದ್ರಕ್ಕೆ ಪ್ರತಿನಿತ್ಯವೂ ನೂರಾರು ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ. ಆದರೆ ನಿರಂತರ ಮಳೆಯಿಂದ ಆಸ್ಪತ್ರೆಯ ಮೇಲ್ಛಾವಣಿಯಲ್ಲಿ ಸೋರುತ್ತಿದ್ದು, ಸೋರುತ್ತಿರೋ ಕಟ್ಟಡದಲ್ಲಿಯೇ ರೋಗಿಗಳು ಚಿಕಿತ್ಸೆ ಪಡೆಯುವ ಪರಿಸ್ಥಿತಿ ಬಂದಿದೆ.

ಹೌದು, ಇದು ಹಾವೇರಿ (Haveri) ಜಿಲ್ಲೆಯ ಶಿಗ್ಗಾಂವಿ ತಾಲೂಕು ಬಂಕಾಪುರ ಪಟ್ಟಣದಲ್ಲಿರೋ ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆಯಲ್ಲಿ ಸೋರುತ್ತಿರೋ ಆಸ್ಪತ್ರೆಯಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳ ಬೆಡ್ ಮೇಲೆ ಮಳೆಯ ನೀರು ಬೀಳುತ್ತಿದ್ದು, ಬಕೆಟ್ ಇಟ್ಟು ಮಳೆ ನೀರನ್ನು ಸಂಗ್ರಹ ಮಾಡಲಾಗುತ್ತಿದೆ. ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಟೀಂ ಇಂಡಿಯಾ ಮಾಜಿ ಬೌಲರ್‌ ಆರ್‌ಪಿ ಸಿಂಗ್‌ ಭೇಟಿ

ನಿರಂತರ ಮಳೆಯಿಂದ ಸಮುದಾಯದ ಆರೋಗ್ಯ ಕೇಂದ್ರ ಕೊಠಡಿಗಳು ಸೋರುತ್ತಿವೆ. ಆಸ್ಪತ್ರೆಯ ಮೇಲ್ಛಾವಣಿಯಿಂದ ರೋಗಿಗಳು ಮಲಗಿದ ಜಾಗದಲ್ಲಿಯೇ ನೀರು ಬೀಳುತ್ತಿದೆ. ಕೆಮ್ಮು, ಜ್ವರ ಮತ್ತು ಮೈ-ಕೈ ನೋವು ಮತ್ತು ವಾಂತಿ ಭೇದಿ ಅಂತಾ ಬಂದು ರೋಗಿಗಳು ಸೋರುತ್ತಿರೋ ಕಟ್ಟಡದಲ್ಲಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಕೆಆರ್‌ಎಸ್‌ನಿಂದ 91 ಸಾವಿರ ಕ್ಯೂಸೆಕ್‌ ನೀರು ಹೊರಕ್ಕೆ – ಮುಳುಗಡೆ ಭೀತಿಯಲ್ಲಿ ವೆಲ್ಲೆಸ್ಲಿ ಸೇತುವೆ

ಬಂಕಾಪುರ ಪಟ್ಟಣ ಸಮುದಾಯದ ಆರೋಗ್ಯ ಕೇಂದ್ರ 35 ಹಾಸಿಗೆಯ ಆಸ್ಪತ್ರೆಯಾಗಿದೆ. ಅಲ್ಲದೆ ನಿತ್ಯವೂ ನೂರಾರು ರೋಗಿಗಳು ಪುಟಾಣಿ ಮಕ್ಕಳು, ಗರ್ಭಿಣಿ ಮಹಿಳೆಯರು ಆಸ್ಪತ್ರೆಗೆ ಬರುತ್ತಾರೆ. ಆಸ್ಪತ್ರೆಯಲ್ಲಿ ಮಳೆ ಬಂದರೆ ಸಾಕು ಆಸ್ಪತ್ರೆ ಒಳಗೆ ಸೋರಲು ಪ್ರಾರಂಭವಾಗುತ್ತಿದೆ. ಆಸ್ಪತ್ರೆಯನ್ನ ನಿರ್ಮಾಣ ಮಾಡಿ ಕೇವಲ 10 ರಿಂದ 12 ವರ್ಷ ಆಗಿದೆ. ಆದರೆ ಆಸ್ಪತ್ರೆಯ ಈ ಪರಿಸ್ಥಿತಿಯ ಬಗ್ಗೆ ಹೇಳುವವರಿಲ್ಲ, ಕೇಳುವವರಿಲ್ಲದಂತಾಗಿದೆ. ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಟೀಂ ಇಂಡಿಯಾ ಮಾಜಿ ಬೌಲರ್‌ ಆರ್‌ಪಿ ಸಿಂಗ್‌ ಭೇಟಿ

ಸರ್ಕಾರವು ಆಸ್ಪತ್ರೆಯ ಈ ಸಮಸ್ಯೆ ಬಗ್ಗೆ ಗಮನಹರಿಸಿ, ಆಸ್ಪತ್ರೆ ಕಟ್ಟಡದ ದುರಸ್ತಿ ಮಾಡಬೇಕು. ಅಲ್ಲದೇ ಗುತ್ತಿಗೆದಾರನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಳೆ ಬಂದರೆ ಸಾಕು ಆಸ್ಪತ್ರೆ ಒಳಗಡೆ ಸಂಪೂರ್ಣವಾಗಿ ಸೋರುತ್ತದೆ. ಬಡ ರೋಗಿಗಳಿಗೆ ಸಾವಿರಾರು ರೂ. ಹಣ ಖರ್ಚು ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ತೋರಿಸುವ ಶಕ್ತಿ ಇಲ್ಲ. ವಿಧಿಯಿಲ್ಲದೇ ಸೋರುತ್ತಿರೋ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹೋಗುತ್ತಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಆಸ್ಪತ್ರೆಯ ಕಟ್ಟಡ ದುರಸ್ತಿ ಮಾಡುವ ಕೆಲಸ ಮಾಡಬೇಕಿದೆ.

Share This Article