ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ- ಬಾಡಿಗೆದಾರನನ್ನ ಗಮನಿಸದೇ ಮನೆ ಸೀಜ್

By
2 Min Read

– ಕೋರ್ಟ್ ಕಮಿಷನರ್‍ನಿಂದ ದೈಹಿಕ ಹಲ್ಲೆ ಆರೋಪ

ಬೆಂಗಳೂರು: ಮನೆ ಮಾಲೀಕ ಲೋನ್ ಮಾಡಿ ಬಾಡಿಗೆದಾರ ಲಾಕ್ ಆದ ಪ್ರಸಂಗವೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ಕೋ ಆಪರೇಟಿವ್ ಬ್ಯಾಂಕ್ (Co-Operative Bank) ಸಿಬ್ಬಂದಿಯ ಎಡವಟ್ಟಿನಿಂದ ಈ ಘಟನೆ ನಡೆದಿದೆ. ಬಾಡಿಗೆದಾರ ಮನೆಯೊಳಗೆ ಇರುವುದನ್ನು ಗಮನಿಸದೇ ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಿದ್ದಾರೆ. ಬಳಿಕ ಠಾಣೆಗೆ ದೂರು ನೀಡಿ, ಮಗನನ್ನ ಮನೆಯಿಂದ ಪೋಷಕರು ಹೊರ ಕರೆತಂದಿದ್ದಾರೆ.

ಏನಿಸು ಘಟನೆ..?: ಮನೆ ಮಾಲೀಕನು ತುಮಕೂರಿನ ವೀರಶೈವ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ 2 ಕೋಟಿ ಸಾಲ ಪಡೆದಿದ್ದನು. ಹೀಗಾಗಿ ಸಿಬ್ಬಂದಿ ಕೋರ್ಟ್ ನಿಂದ ಅನುಮತಿ ಪಡೆದು ಬ್ಯಾಂಕ್ ಲೋನ್ ರಿಕವರಿಗೆ ಸಂಜೆ ಕೆಂಗೇರಿ ಉಪನಗರದಲ್ಲಿರುವ ಮೂರಂತಸ್ಥಿನ ಮನೆಗೆ ಬಂದಿದ್ದು, ಮನೆಯನ್ನು ಸೀಜ್ ಮಾಡಿದ್ದಾರೆ. ಆದರೆ ಮನೆ ಸೀಜ್ ಮಾಡುವಾಗ ಬಾಡಿಗೆದಾರ ಮನೆಯಲ್ಲಿಯೇ ಮಲಗಿದ್ದರು. ಇದನ್ನ ಗಮನಿಸದೇ ಸಿಬ್ಬಂದಿ ಮನೆ ಸೀಜ್ ಮಾಡಿದ್ದಾರೆ. ಕೇಸ್ ನ್ನು ವಜಾ ಮಾಡಿದ್ದಾರೆ. ಹಾಗಿದ್ರೂ ಸೀಜ್ ಮಾಡಿದ್ದಾರೆ. ಅಲ್ಲದೆ ಮನೆ ಮಾಲೀಕರ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾರೆಂದು ಬಾಡಿಗೆದಾರ ಪರ ವಕೀಲರು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಮಣಿಪುರ ಹಿಂಸಾಚಾರ ತನಿಖೆಗೆ 53 ಸಿಬಿಐ ಅಧಿಕಾರಿಗಳ ನಿಯೋಜನೆ

ಈ ಸಂಬಂಧ ಬಾಡಿಗೆದಾರರ (Rent) ಸಂಬಂಧಿ ಪ್ರಸನ್ನ ಪ್ರತಿಕ್ರಿಯಿಸಿ, ಮೂರು ತಿಂಗಳ ಹಿಂದೆ ನಮ್ಮ ತಂಗಿ ಲೀಸ್ ಹಾಕಿಕೊಂಡಿದ್ರು. 10 ಲಕ್ಷಕ್ಕೆ ಲೀಸ್ ಹಾಕಿಕೊಂಡಿದ್ರು. ಯಾವುದೇ ಮಾಹಿತಿ ನೀಡದೇ ಮನೆ ಸೀಜ್ ಮಾಡಲಾಗಿದೆ. ವೀರಶೈವ ಕೋ ಆಪರೇಟಿವ್ ಬ್ಯಾಂಕ್ ನಿಂದ ಸೀಜ್ ಮಾಡಲಾಗಿದೆ. ಮನೆಯಲ್ಲಿ ಮಗ ಇದ್ದ, ಇದನ್ನ ಗಮನಿಸದೇ ಮನೆ ಸೀಜ್ ಆಗಿದೆ. ಮಗ ಒಳಗಡೆ ಇದ್ದಾನೆ ಅಂತ ಠಾಣೆಗೆ ಮಾಹಿತಿ ನೀಡಿ ಹೊರ ಕಕೊರ್ಂಡು ಬಂದಿದ್ದಾರೆ ಎಂದರು.

ಬಾಡಿಗೆದಾರ ಪರ ವಕೀಲ ಹೇಮಂತ್ ಮಾತನಾಡಿ, ತುಮಕೂರು ವೀರಶೈವ ಕೋ ಆಪರೇಟಿವ್ ಬ್ಯಾಂಕ್ ನಿಂದ ಸೀಜ್ ಮಾಡಲಾಗಿದೆ. ಮನೆಯಲ್ಲಿರೋ ವಸ್ತುಗಳನ್ನ ಹೊರ ಹಾಕಿದ್ರು. ಕೋರ್ಟ್ ಕಮಿಷನರ್ ದೈಹಿಕ ಹಲ್ಲೆ ನಡೆಸಿದ್ದಾರೆ. ನಮ್ಮ ಸಹೋದ್ಯೋಗಿನ ನಿಂದಿಸಿದ್ದಾರೆ, ನನಗೂ ಹೊಡೆದಿದ್ದಾರೆ. 2021 ಕೋರ್ಟ್ ಆರ್ಡರ್ ಇದೆ. ಡಿಸ್ ಮಿಸ್ ಆಗಿರೋ ಕೋರ್ಟ್ ಆರ್ಡರ್ ತಗೊಂಡು ಬಂದಿದ್ದಾರೆ. ಸಂಜೆ 7 ಗಂಟೆಗೆ ಡೋರ್ ಲಾಕ್ ಮಾಡಿದ್ದಾರೆ. ಒಳಗಡೆ ಯಾರಿದ್ದಾರೆ ಅಂತ ನೋಡದೇ ಸೀಜ್ ಮಾಡಿದ್ದಾರೆ ಎಂದು ಆರೋಪಿಸಿದರು.

ಮನೆ ಮಾಲೀಕನಿಗೆ ಎದೆ ನೋವು: ಮನೆ ಸೀಜ್ ಮಾಡಿ, ಮನೆಯಲ್ಲಿದ್ದ ವಸ್ತುಗಳನ್ನ ಬೀದಿ ಹಾಕಿದ್ದಕ್ಕೆ ಮಾಲೀಕ ಮನನೊಂದಿದ್ದು, ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರು ರಸ್ತೆಯಲ್ಲಿ ಒದ್ದಾಡಿದ್ದಾರೆ. ಅಂಬುಲೆನ್ಸ್ ಸಕಾಲಕ್ಕೆ ಬಾರದಿದ್ದರಿಂದ ಕಾರಿನಲ್ಲಿಯೇ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು.

ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್