ಬೆಂಗಳೂರು: ಐಟಿ ಅಧಿಕಾರಿಗಳಿಗೆ ಚಳ್ಳೆಹಣ್ಣು, ಐಟಿ `ಐ’ನಿಂದ ತಪ್ಪಿಸಿಕೊಳ್ಳಲು ರಾಜಕೀಯ ನಾಯಕರ ಮಾಸ್ಟರ್ ಪ್ಲಾನ್. ಎಲೆಕ್ಷನ್ ಟೈಂನಲ್ಲಿ ಹಣದ ಹೊಳೆ ಕಂಟ್ರೋಲ್‍ಗಾಗಿ ಐಟಿ ಬ್ರಹ್ಮಾಸ್ತ್ರಕ್ಕೆ ತಿರುಮಂತ್ರ ಹಾಕಿದ್ದಾರೆ ಖಾದಿ ಮೈಂಡ್. ಇದು ಬ್ಯಾಂಕ್ ಅಧಿಕಾರಿಗಳೇ ಬಿಚ್ಚಿಟ್ಟ ಸ್ಫೋಟಕ ಸತ್ಯ.
ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ರಾಜ್ಯದ ಬ್ಯಾಂಕುಗಳಲ್ಲಿ ನೋ ಕ್ಯಾಶ್ ಎಟಿಎಂ ಬಂದ್. ಹಣವೆಲ್ಲ ರಾಜಕೀಯ ನಾಯಕರ ಮನೆಯಲ್ಲಿ ಭದ್ರವಾಗಿದೆ ಅಂತಾ ಹೇಳಲಾಗುತ್ತಿದೆ. ಈ ಹಣದ ಹೊಳೆ ಕಂಟ್ರೋಲ್‍ಗಾಗಿ ಐಟಿ ಅಧಿಕಾರಿಗಳು ಬ್ಯಾಂಕ್‍ನಲ್ಲಿ ಅಧಿಕ ಮೊತ್ತದ ಟ್ರಾನ್ಸ್ ಕ್ಷನ್ ಮೇಲೆ ಕಣ್ಣಿಟ್ಟು ಶಾಕ್ ಕೊಟ್ಟಿದ್ರು. ಆದ್ರೇ ಐಟಿ ಪ್ರಯೋಗಿಸಿದ ಅಸ್ತ್ರವನ್ನು ಠುಸ್ ಮಾಡಲು ರಾಜಕೀಯ ನಾಯಕರು ತಮ್ಮ ಚೇಲಾಗಳ ಮೂಲಕ ಹಾಗೂ ಸಂಬಂಧಿಕರ, ಪರಿಚಿತ ಉದ್ಯಮಿಗಳ ಬ್ಯಾಂಕ್ ಆಕೌಂಟ್ ಮೂಲಕ ದುಡ್ಡಿನ ವಹಿವಾಟು ಪ್ರಾರಂಭಿಸಿದ್ದಾರಂತೆ. ನೋಟ್ ಬ್ಯಾನ್ ಆದ್ರೂ ಈಗ ಕರ್ನಾಟಕದ ಎಲೆಕ್ಷನ್‍ನಲ್ಲಿ ನಡೆಯೋ ಹಣದ ಅಕ್ರಮವನ್ನು ತಡೆಯಲು ಸಾಧ್ಯವೇ ಇಲ್ಲ ಅನ್ನೋದು ಬ್ಯಾಂಕ್ ಸಿಬ್ಬಂದಿಗಳ ಮಾತು.
ರಾಜ್ಯದಲ್ಲಿ ಐಟಿ ಅಧಿಕಾರಿಗಳು ಅಲರ್ಟ್ ಆಗ್ತಿದ್ದಂತೆ ಐಟಿ ಕಣ್ಣಿಂದ ತಪ್ಪಿಸಿಕೊಳ್ಳಲು ರಾಜಕೀಯ ನಾಯಕರು ನಾನಾ ಪರ್ಯಾಯ ಮಾರ್ಗದ ಮೊರೆ ಹೋಗಿದ್ದಾರಂತೆ. ಇದನ್ನು ಸೂಕ್ಷ್ಮವಾಗಿ ಐಟಿ ಇಲಾಖೆಯ ಗಮನಕ್ಕೂ ಬ್ಯಾಂಕ್‍ನವರು ತರುವ ಕೆಲಸವನ್ನು ಮಾಡುತ್ತಿದ್ದಾರೆ. ಆದ್ರೆ ಮಲ್ಟಿ ಬ್ಯಾಂಕ್ ಆಕೌಂಟ್ಸ್ ಡೀಲ್ ಮಾಡೋದಕ್ಕಾಗಿಯೇ ಪರಿಣಿತ ತಂಡವನ್ನೇ ರಾಜಕೀಯ ನಾಯಕರು ರೆಡಿಮಾಡಿಕೊಂಡಿದ್ದು, ಐಟಿ ಕಣ್ತಪ್ಪಿಸಿಕೊಂಡು ಕೋಟಿ ಕೋಟಿ ಹಣದ ವ್ಯವಹಾರ ನಡೆಯುತ್ತಿದೆ ಅಂತಾ ಎನ್ನಲಾಗಿದೆ.
ಐಟಿಯವರು ಚಾಪೆ ಕೆಳಗೆ ತೂರಿದ್ರೆ, ನಾವು ರಂಗೋಲಿ ಕೆಳಗೆ ತೂರ್ತೀವಿ ಅಂತಾ ರಾಜಕೀಯ ನಾಯಕರು ಪ್ಲಾನ್ ರೂಪಿಸುತ್ತಿದ್ದಾರೆ. ಇದ್ರ ನಡುವೆ ಐಟಿಗೂ ರಾಜಕೀಯದ ಲೇಪ ಬಳಿಯಲಾಗಿದೆ. ಇಂತಹ ಸಮಯದಲ್ಲಿ ಯಾವ ರೀತಿ ಎಲೆಕ್ಷನ್ ಟೈಂನಲ್ಲಿ ಕಾಸಿನ ದರ್ಬಾರ್‍ಗೆ ನಿಯಂತ್ರಣ ಹಾಕ್ತಾರೆ ಕಾದು ನೋಡಬೇಕಾಗಿದೆ.