ಮುಂಬೈ: ಕೆಲಸದ ಒತ್ತಡವೇ ಕಾರಣ ಅಂತ ಡೆತ್‌ನೋಟ್ ಬರೆದಿಟ್ಟು ಬ್ಯಾಂಕ್ ಮ್ಯಾನೇಜರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ (Pune) ನಡೆದಿದೆ.
ಜಿಲ್ಲೆಯ ಬಾರಾಮತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್ (Bank Manger) ಶಿವಶಂಕರ್ ಮಿತ್ರ (40) ಕಚೇರಿಯಲ್ಲಿಯೇ ಗುರುವಾರ ತಡರಾತ್ರಿ ಸೀಲಿಂಗ್‌ಗೆ ನೇಣು ಬಿಗಿದುಕೊಂಡಿದ್ದಾರೆ. ಇದನ್ನೂ ಓದಿ: 14 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಹೆಚ್‌ಪಿವಿ ವ್ಯಾಕ್ಸಿನ್ – ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ
ಮಿತ್ರ ಅವರು ಆರೋಗ್ಯ ಸಮಸ್ಯೆಗಳು ಮತ್ತು ಕೆಲಸದ ಒತ್ತಡದಿಂದಾಗಿ ಜುಲೈ 11ರಂದು ಬ್ಯಾಂಕ್ ಮ್ಯಾನೇಜರ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ಆಫೀಸ್‌ನ ನೋಟಿಸ್ ಪಿರೇಡನ್ನು ಮಾಡುತ್ತಿದ್ದರು. ಇದನ್ನೂ ಓದಿ: ʻಡೆವಿಲ್ʼ ಮೋಷನ್ ಪೋಸ್ಟರ್ ರಿಲೀಸ್ – ಖದರ್ ಲುಕ್‌ನಲ್ಲಿ ದರ್ಶನ್, ಡಿಬಾಸ್ ಫ್ಯಾನ್ಸ್‌ಗೆ ಹಬ್ಬ
ಸಂಜೆ ಕೆಲಸದ ಮುಗಿದ ಬಳಿಕ ಮಿತ್ರ ಅವರು ನಾನೇ ಬ್ಯಾಂಕ್ ಬೀಗ ಹಾಕುವುದಾಗಿ ಹೇಳಿ ಎಲ್ಲರನ್ನು ಕಳುಹಿಸಿದ್ದರು. ಅಲ್ಲದೇ ಈ ಮೊದಲೇ ಅವರು ಸಹೊದ್ಯೋಗಿಯೊಂದಿಗೆ ಹಗ್ಗ ತರಲು ಹೇಳಿದ್ದರು ಎನ್ನಲಾಗಿದೆ. ಬ್ಯಾಂಕ್ ವಾಚ್‌ಮ್ಯಾನ್ ಸಹ ರಾತ್ರಿ 9 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ತೆರಳಿದ್ದರು.
ಇದನ್ನೇ ಕಾಯುತ್ತಿದ್ದ ಮಿತ್ರ ಅವರು 10 ಗಂಟೆ ಸುಮಾರಿಗೆ ಅದೇ ಹಗ್ಗದಿಂದ ಕಚೇರಿಯ ಸೀಲಿಂಗ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ದೃಶ್ಯವು ಬ್ಯಾಂಕ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಹಾಸನ | 2 ಕಾರುಗಳ ನಡುವೆ ಭೀಕರ ಅಪಘಾತ – ಇಬ್ಬರು ಸಾವು, ನಾಲ್ವರು ಗಂಭೀರ
ಮಿತ್ರ ಅವರು ಮನೆಗೆ ಹಿಂತಿರುಗದಿದ್ದಾಗ ಅವರ ಪತ್ನಿ ಫೋನ್ ಕರೆ ಸಹ ಮಾಡಿದ್ದರು. ಇದ್ಯಾವುದಕ್ಕೂ ಪ್ರತಿಕ್ರಿಯಿಸದ ಕಾರಣ ಗಾಬರಿಗೊಂಡ ಪತ್ನಿ ಬ್ಯಾಂಕ್ ಬಳಿ ತೆರಳಿದ್ದರು. ಬ್ಯಾಂಕ್ ಒಳಗಡೆ ಲೈಟ್ ಉರಿಯುತ್ತಿದ್ದದ್ದನ್ನು ಗಮನಿಸಿದ ಅವರು ಪತಿಯನ್ನು ಕರೆದಿದ್ದರು. ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅವರು ಬ್ಯಾಂಕ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: Uttar Pradesh | ಸ್ಕೂಲ್ ವ್ಯಾನ್‌ನಲ್ಲಿ 4 ವರ್ಷದ ಬಾಲಕಿ ಮೇಲೆ ರೇಪ್ – ಡ್ರೈವರ್ ಬಂಧನ
ಬಳಿಕ ಸಿಬ್ಬಂದಿ ಬ್ಯಾಂಕ್ ತೆರೆದಾಗ ಮಿತ್ರಾ ಅವರು ಸೀಲಿಂಗ್‌ಗೆ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಡೆತ್‌ನೋಟ್ ಪತ್ತೆಯಾಗಿತ್ತು.
ಡೆತ್‌ನೋಟ್‌ನಲ್ಲಿ ಕೆಲಸದ ಒತ್ತಡದಿಂದ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾರೆ. ಡೆತ್‌ನೋಟ್ ವಶಪಡಿಸಿಕೊಂಡ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.