ವಿವಿಧ ಆಭರಣಗಳಲ್ಲಿ ಬಳೆಗಳು ಕೂಡ ಒಂದಾಗಿದ್ದು, ಸಾಮಾನ್ಯವಾಗಿ ಮಹಿಳೆಯರು ಬಳೆಯನ್ನು ಧರಿಸುತ್ತಾರೆ ಮತ್ತು ಬಳೆಗಳು ಹೆಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಬಳೆಗಳು ಮೊಣ ಕೈವರೆಗೂ ಧರಿಸುವ ಆಭರಣವಾಗಿದ್ದು, ಹಲವು ರೀತಿಯ ಸ್ಟೈಲಿಶ್ ಬಳೆಗಳಿದೆ. ಅಲ್ಲದೇ ವಿವಾಹಿತ ಮಹಿಳೆಯರ ಅಮೂಲ್ಯವಾದ ಆಭರಣಗಳಲ್ಲಿ ಬಳೆ ಕೂಡ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬಳೆಯಲ್ಲಿ ಹಲವು ವೆರೈಟಿ ಡಿಸೈನ್ ಬಳೆಗಳಿದ್ದು, ಈ ಕುರಿತ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ.
ವಜ್ರದ ಡಿಸೈನ್ ಚಿನ್ನದ ಬಳೆಗಳು:
ಕಿಟ್ಟಿ ಪಾರ್ಟಿಗಳಲ್ಲಿ ಮಹಿಳೆಯರು ಧರಿಸಲು ಈ ಬಳೆ ಸುಂದರವಾಗಿರುತ್ತದೆ. ಅಧಿಕೃತ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಈ ಬಳೆ ಧರಿಸಲು ಸೂಕ್ತವಾಗಿದ್ದು, ಇದು ನಿಮಗೆ ಖಂಡಿತವಾಗಿಯೂ ಗ್ರ್ಯಾಂಡ್ ಲುಕ್ ನೀಡುತ್ತದೆ. ಈ ಚಿನ್ನದ ಬಳೆಯನ್ನು ವಜ್ರ ಹಾಗೂ ಪಚ್ಚೆಗಳಿಂದ ವಿನ್ಯಾಸಗೊಳಿಸಲಾಗಿದ್ದು, ಸೀರೆಗೆ ಬಹಳ ಸೂಟ್ ಆಗುತ್ತದೆ.
ಹೂವಿನ ವಿನ್ಯಾಸದ ವಜ್ರದ ಬಳೆಗಳು:
ವಜ್ರಗಳಿಂದ ಕೂಡಿದ ಹೂವಿನ ವಿನ್ಯಾಸದ ಈ ಬಳೆ ಇತ್ತೀಚಿನ ಡಿಸೈನರ್ ಬಳೆಗಳಲ್ಲಿ ಒಂದಾಗಿದ್ದು, ಸಂಪ್ರಾದಾಯಿಕ ಉಡುಪಿನ ಜೊತೆಗೆ ಪಾಶ್ಚಿಮಾತ್ಯ ಉಡುಪುಗಳಿಗೂ ಸಹ ಮ್ಯಾಚ್ ಆಗುತ್ತದೆ. ಇದನ್ನೂ ಓದಿ: ಮದುವೆಯಲ್ಲಿ ಕೇಕ್ ಪೀಸ್ ತಿಂದಿದ್ದಕ್ಕೆ ಅತಿಥಿಗೆ 366 ರೂ. ಪಾವತಿಸಿ ಅಂದ ನವದಂಪತಿ
ಅಗಲವಾದ ವಜ್ರದ ಬಳೆಗಳು:
ಅಗಲವಾಗಿ ವಜ್ರದಿಂದ ವಿನ್ಯಾಸಗೊಳಿಸಿರುವ ಬಳೆಗಳು ಇತ್ತೀಚೆಗೆ ಹೊಸ ಟ್ರೆಂಡ್ ಸೃಷ್ಟಿಸಿದೆ. ಕೇವಲ ಒಂದು ಬಳೆಯನ್ನು ಧರಿಸಿದರೆ ಸಾಕು ಇದು ನಿಮ್ಮ ಕೈಗೆ ಗ್ರ್ಯಾಂಡ್ ಲುಕ್ ನೀಡುತ್ತದೆ ಮತ್ತು ಇದಕ್ಕೆ ಹೆಚ್ಚು ವೆಚ್ಚವಾಗುವುದಿಲ್ಲ. ಈ ಬಳೆಗಳನ್ನು ವಜ್ರ ಹಾಗೂ ಪಚ್ಚೆಗಳಿಂದ ವಿನ್ಯಾಸಗೊಳಿಸಲಾಗಿದೆ.
ಚಿನ್ನದ ಚಕ್ಕೆಗಳ ವಿನ್ಯಾಸದ ರೆಸಿನ್ ಬಳೆಗಳು:
ಈ ಬಳೆ ಹದಿಹರೆಯದವರಿಗೆ ಹೆಚ್ಚು ಪ್ರಿಯವಾಗಿದ್ದು, ಇತ್ತೀಚಿನ ಡಿಸೈನರ್ ಬಳೆಗಳಲ್ಲಿ ಒಂದಾಗಿದೆ. ಈ ಬಳೆ ಮಹಿಳೆಯರಿಗೆ ಅದ್ಭುತವಾದ ಲುಕ್ ನೀಡುವುದರ ಜೊತೆಗೆ ಎಲ್ಲರ ಮಧ್ಯೆ ಎದ್ದು ಕಾಣಿಸುತ್ತದೆ. ಇದನ್ನೂ ಓದಿ: ಗಾಂಧಿ ಜಯಂತಿ ವಿಶೇಷ – ವಿಜಯಪುರದ ಗ್ರಾಮ ಸಭೆ ವೀಕ್ಷಣೆ ಮಾಡಲಿದ್ದಾರೆ ಮೋದಿ
ಗೋಲ್ಡ್ ಆರ್ಮ್ ಕಫ್ಸ್:
ಈ ಡಿಸೈನರ್ ಬಳೆಗಳು ಹಿರಿಯ ಮಹಿಳೆಯರಿಗೆ ಹಾಗೂ ಯುವತಿಯರಿಗೆ ಸೂಟ್ ಆಗುತ್ತದೆ. ಎರಡು ತುದಿಗಳಿಂದಲೂ ಸಂಕೀರ್ಣವಾದ ಎಳೆಗಳನ್ನು ಹೊಂದಿರುವ ತೆಳುವಾದ ಅಂಚು ಹೊಂದಿರುತ್ತದೆ. ಈ ಬಳೆಯನ್ನು ನೀವು ಯಾವುದೇ ಡ್ರೆಸ್ ಜೊತೆಗೆ ಧರಿಸಬಹುದಾಗಿದೆ.