ದಾಖಲೆ ಬರೆದ ಬ್ಯಾಂಗಲ್ ಬಂಗಾರಿ – ಯುವ ಸ್ಟೆಪ್‌ಗೆ ಫ್ಯಾನ್ಸ್ ಫಿದಾ

Public TV
1 Min Read

ಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ (Bangle Bangari) ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಗೀತೆ ಎಲ್ಲೆಡೆ ವೈರಲ್ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ನಾಯಕ ಯುವರಾಜ್ ಕುಮಾರ್ (Yuva Rajkumar) ಹಾಗೂ ನಾಯಕಿ ಸಂಜನಾ ಆನಂದ್ ಬ್ಯಾಂಗಲ್ ಬಂಗಾರಿ ಅಂತಾ ಕುಣಿದು ಕುಪ್ಪಳಿಸಿದ್ದರು.

ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದ ಹಾಡಿಗೆ ಆಂತೋನಿ ದಾಸ್ ಕಂಠ ಕುಣಿಸಿದ್ದರು. ಚರಣ್ ರಾಜ್ ಸಂಗೀತ, ಯುವ-ಸಂಜನಾ ಕುಣಿದ ಬಂಗಾಲ್ ಬಂಗಾರಿ ಗೀತೆ ಸಖತ್ ಹಿಟ್ ಕಂಡಿದೆ. ಕೇವಲ 22 ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್ ವೀಕ್ಷಣೆ ಕಂಡಿರುವ ಹಾಡು, ಟಾಪ್ ಮ್ಯೂಸಿಕ್ ವಿಡಿಯೋ ಕೆಟಗರಿಯಲ್ಲಿ 29ನೇ ಸ್ಥಾನ ಪಡೆದಿದೆ. ಅತಿ ಕಡಿಮೆ ಸಮಯದಲ್ಲಿ ಬ್ಯಾಂಗಲ್ ಬಂಗಾರಿ ದಾಖಲೆ ಬರೆದಿದ್ದು, ಚಿತ್ರತಂಡದ ಖುಷಿಗೆ ಕಾರಣವಾಗಿದೆ.‌ ಇದನ್ನೂ ಓದಿ: ರಾಮಾಯಣ ಫಸ್ಟ್ ಗ್ಲಿಮ್ಸ್ ನೋಡಲು ತಯಾರಾಗಿ ಎಂದ ಯಶ್

ನಾಯಕಿ ಸಂಜನಾ ಆನಂದ್ ಇಲ್ಲಿ ಬ್ಯಾಂಗಲ್ ಬಂಗಾರಿ ಆಗಿದ್ದಾರೆ. ಯವರಾಜ್ ಕುಮಾರ್ ಲೈಫ್ ಅಲ್ಲಿ ಬರೋ ಈ ಬಂಗಾರಿಗೆ ಬ್ಯಾಂಗಲ್ ತೊಡಿಸಿದಾಗ ಶುರು ಆಗೋ ಹಾಡು ಇದಾಗಿದೆ. ಸಂಭ್ರಮಾಚರಣೆಯ ಕ್ಷಣದ ಈ ಗೀತೆಗೆ ಮುರಳಿ ಮಾಸ್ಟರ್ ಒಳ್ಳೆ ಸ್ಟೆಪ್‌ಗಳನ್ನೇ ಕಂಪೋಸ್ ಮಾಡಿದ್ದಾರೆ.

ಎಕ್ಕ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತದ ಮೋಡಿ ಇಡೀ ಚಿತ್ರಕ್ಕಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಒಟ್ಟಿಗೆ ಸೇರಿ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಇದನ್ನೂ ಓದಿ: ಮಡೆನೂರು ಮನುಗೆ ಹೇರಿದ್ದ ಅಸಹಕಾರ ತೆರವು – ಫಿಲ್ಮ್ ಚೇಂಬರ್ ವಾರ್ನಿಂಗ್

ಚಿತ್ರದಲ್ಲಿ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ನಟಿಸಿದ್ದಾರೆ. ಬಾಲಿವುಡ್‌ನ ಅತುಲ್ ಕುಲಕರ್ಣಿ ಕೂಡ ನಟಿಸಿದ್ದಾರೆ. ಇವರಲ್ಲದೇ ಈ ಚಿತ್ರದಲ್ಲಿ ಸಂಜನಾ ಆನಂದ್, ಸಂಪದಾ ಸೇರಿ ಇಬ್ಬರು ನಾಯಕಿಯರಿದ್ದಾರೆ. ಯುವರಾಜ್ ಕುಮಾರ್ ಎರಡನೇ ಸಿನಿಮಾ ಇದಾಗಿದೆ.

Share This Article