ಬಾಂಗ್ಲಾ ದೇಶದಲ್ಲಿ ಇಸ್ಕಾನ್ ದೇವಾಲಯ ಧ್ವಂಸ – ದೇಗುಲದ ಸದಸ್ಯನ ಹತ್ಯೆ

Public TV
2 Min Read

ಢಾಕಾ: ಬಾಂಗ್ಲಾ ದೇಶದ ನೋಖಾಲಿ ಪ್ರದೇಶದಲ್ಲಿರುವ ಇಸ್ಕಾನ್ ದೇವಾಲಯವನ್ನು ಗುಂಪೊಂದು ಧ್ವಂಸಗೊಳಿಸಿ ದೇಗುಲದ ಸದಸ್ಯನ ಹತ್ಯೆ ಮಾಡಿದ್ದಾರೆ.

 ISKCON

ಶುಕ್ರವಾರ ರಾತ್ರಿ ಈ ದಾಳಿಯನ್ನು ಉಗ್ರರ ಗುಂಪು ನಡೆಸಿದೆ ಎಂದು ಇಸ್ಕಾನ್ ಆರೋಪಿಸಿದೆ. ಘಟನೆಯಲ್ಲಿ 200ಕ್ಕೂ ಹೆಚ್ಚು ಜನರಿದ್ದ ಗುಂಪು ಇಸ್ಕಾನ್ ಸದಸ್ಯ ಪಾರ್ಥದಾಸ್‍ರನ್ನು ಕೊಂದಿದ್ದಾರೆ  ಮತ್ತು ಅವರ ಮೃತದೇಹ ದೇವಾಲಯದ ಪಕ್ಕದಲ್ಲಿರುವ ಕೊಳದಲ್ಲಿ ಪತ್ತೆಯಾಗಿದೆ ಎಂದು ದೇವಾಲಯದ ಅಧಿಕಾರಿಗಳು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು

 ISKCON

ಧ್ವಂಸಗೊಂಡಿರುವ ದೇವಾಲಯದ ಫೋಟೋವನ್ನು ಇಸ್ಕಾನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಸ್ಕಾನ್ ದೇವಸ್ಥಾನ ಮತ್ತು ಭಕ್ತರು ಇಂದು ಬಾಂಗ್ಲಾದೇಶದ ನೋಖಾಲಿಯಲ್ಲಿ ಒಂದು ಗುಂಪಿನಿಂದ ಹಿಂಸಾತ್ಮಕವಾಗಿ ದಾಳಿಗೊಳಗಾದರು. ದೇವಸ್ಥಾನವು ಗಮನಾರ್ಹ ಹಾನಿಯನ್ನು ಅನುಭವಿಸಿದೆ ಮತ್ತು ಭಕ್ತರ ಸ್ಥಿತಿ ಗಂಭೀರವಾಗಿದೆ. ಎಲ್ಲಾ ಹಿಂದೂಗಳ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಅಪರಾಧಿಗಳನ್ನು ಶಿಕ್ಷಿಸಲು ನಾವು ಬಾಂಗ್ಲಾದೇಶ ಸರ್ಕಾರವನ್ನು ಕೋರುತ್ತೇವೆ ಎಂದು ಟ್ವೀಟ್ ಮಾಡಿದೆ.  ಇದನ್ನೂ ಓದಿ: ಬರ್ತ್‍ಡೇ ಪಾರ್ಟಿಯಲ್ಲಿ ವೈದ್ಯೆ ಮೇಲೆ ಸಹೋದ್ಯೋಗಿಯಿಂದ ಅತ್ಯಾಚಾರ

ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ, ಇತ್ತೀಚೆಗಷ್ಟೇ ದುರ್ಗಾ ಪೂಜೆ ವೇಳೆ ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿದವರನ್ನು ಆದಷ್ಟು ಬೇಗ ಪತ್ತೆ ಮಾಡಿ ಬಂಧಿಸುವುದಾಗಿ ಹಿಂದೂ ಸಮುದಾಯಕ್ಕೆ ಭರವಸೆ ನೀಡಿದ್ದರು, ಇದಾದ ಕೆಲವು ಗಂಟೆಗಳಲ್ಲಿಯೇ ಇಸ್ಕಾನ್ ದೇವಾಲಯದ ಮೇಲೆ ದಾಳಿ ನಡೆದಿದೆ.

ಕೊಮಿಲ್ಲಾದ ಪೂಜಾ ಸ್ಥಳದಲ್ಲಿ ಪವಿತ್ರ ಕುರಾನ್ ಅನ್ನು ಅಪವಿತ್ರಗೊಳಿಸಿದ ಆರೋಪದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆದ ನಂತರ ಬುಧವಾರ ಕೊಮಿಲ್ಲಾದಲ್ಲಿ ಸ್ಥಳೀಯರ ಒಂದು ಬಣದ ನಡುವೆ ಉದ್ವಿಗ್ನತೆ ಉಂಟಾಯಿತು.

ಇದೇ ರೀತಿಯ ಘಟನೆಗಳು ಬುಧವಾರ ಮತ್ತು ಗುರುವಾರ ಸುಮಾರು 22 ಜಿಲ್ಲೆಗಳ ದೇವಾಲಯಗಳ ಮೇಲೆ ಅಪರಿಚಿತರು ದಾಳಿ ನಡೆಸಿ, ದೇಗುಲಗಳನ್ನು ಧ್ವಂಸಗೊಳಿಸಿದ್ದರು. ದುರ್ಗಾ ದೇವಿಯ ದೇವಸ್ಥಾನದಲ್ಲಿ ಹಿಂಸಾಚಾರ ನಡೆದ ಬಳಿಕ ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಟ್ಟಿದ್ದರು. ಇದೇ ವೇಳೆ ಬಾಂಗ್ಲಾದೇಶದ ಚಂದ್ ಪುರದ ಹಜಿಗಂಜ್, ಚತ್ತೋಗ್ರಾಂನ ಬಾಂಶ್ ಖಲಿ ಮತ್ತು ಕಾಕ್ಸ್ ಬಜಾರ್‍ನ ಪೆಕುವಾದಲ್ಲಿ ಕೂಡ ಹಿಂದೂ ದೇವಾಲಯಗಳಲ್ಲಿ ದಾಂಧಲೆ ಎಬ್ಬಿಸಿರುವ ಘಟನೆ ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *