ಹಿಂದೂ ವ್ಯಕ್ತಿಯ ಹತ್ಯೆ ಕೇಸ್‌ – ಬಾಂಗ್ಲಾ ಪೊಲೀಸರಿಂದ ಮೂವರು ಆರೋಪಿಗಳ ಬಂಧನ

1 Min Read

ಢಾಕಾ: ಇತ್ತೀಚೆಗಷ್ಟೇ ಬಾಂಗ್ಲಾದ ಆಸ್ಪತ್ರೆಯಲ್ಲಿ (Bangladesh) ಸಾವನ್ನಪ್ಪಿದ್ದ ಉದ್ಯಮಿ ಖೋಕೋನ್‌ ದಾಸ್‌ (50) ಹತ್ಯೆ ಪ್ರಕರಣಕ್ಕೆ (Khokon Das Murder Case) ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸಿದೆ ಎಂದು ಸರ್ಕಾರದ ಮುಖ್ಯ ಸಲಹೆಗಾರರ ಮಾಧ್ಯಮ ವಿಭಾಗ ಭಾನುವಾರ (ಇಂದು) ತಿಳಿಸಿದೆ.

ಬಾಂಗ್ಲಾದೇಶದ ಕ್ಷಿಪ್ರ ಕಾರ್ಯ ಬೆಟಾಲಿಯನ್ (RAB) ಮೂವರನ್ನು ಬಂಧಿಸಿರುವುದಾಗಿ ತಿಳಿಸಿದೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಬಲಿ – ಕಿಡಿಗೇಡಿಗಳಿಂದ ಪಾರಾಗಿದ್ದ ಉದ್ಯಮಿ ಚಿಕಿತ್ಸೆ ಫಲಕಾರಿಯಾಗದೇ ಸಾವು

ರ‍್ಯಾಪಿಡ್‌ ಆಕ್ಷನ್‌ ಬೆಟಾಲಿಯನ್‌-8 (RAB-8) ಹಾಗೂ ಢಾಕಾದ (Dhaka) ಗುಪ್ತಚರ ವಿಭಾಗ ಒದಗಿಸಿದ ಮಾಹಿತಿಯ ಪ್ರಕಾರ, ಕಂಪನಿ ಕಮಾಂಡರ್ ಎಎಸ್ಪಿ ಶಹಜಹಾನ್ ನೇತೃತ್ವದ RAB-14, CPC-2, ಕಿಶೋರ್‌ಗಂಜ್ ಕ್ಯಾಂಪ್‌ನ ತಂಡವು ಶನಿವಾರ ಮಧ್ಯರಾತ್ರಿ 1:00 ಗಂಟೆಯ ಸುಮಾರಿಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದೆ. ಕಿಶೋರ್‌ಗಂಜ್‌ನ ಬಜಿತ್‌ಪುರ ಪ್ರದೇಶದಿಂದ ಸೋಹಾಗ್, ರಬ್ಬಿ ಮತ್ತು ಪಲಾಶ್ ಹೆಸರಿನ ಶಂಕಿತರನ್ನ ಬಂಧಿಸಿದೆ.

Hindu Businessman Khokon Das Who Escaped By Jumping Into Pond After Mob Set Him Ablaze In Bangladesh Dies

ಈ ಕಾರ್ಯಾಚರಣೆಯಲ್ಲಿ ಶರಿಯತ್‌ಪುರ ಎಸ್ಪಿ ರಾವ್ನಾಕ್ ಜಹಾನ್ ಸಾವನ್ನಪ್ಪಿದ್ದಾರೆ. ಸಾಯುವ ಮೊದಲು ಉದ್ಯಮಿ ಖೋಕೋನ್ ದಾಸ್ ಹತ್ಯೆ ಪ್ರಕರಣದ ಆರೋಪಿಗಳ ಹೆಸರು ಉಲ್ಲೇಖಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: IPL ನಿಂದ ಮುಸ್ತಾಫಿಜುರ್ ಔಟ್‌ – ವಿಶ್ವಕಪ್‌ ಆಡಲು ಭಾರತಕ್ಕೆ ಬರಲ್ಲ; ಪಾಕ್‌ ರೀತಿ ಕ್ಯಾತೆ ತೆಗೆದ ಬಾಂಗ್ಲಾ

ಜೀವಂತ ಸುಡಲು ಯತ್ನ!
ಪರೇಶ್ ದಾಸ್ ಅವರ ಮಗ ಖೋಕೋನ್ ದಾಸ್ ಔಷಧಿ ಅಂಗಡಿ ಮಾಲೀಕ ಮತ್ತು ಬಿಕಾಶ್ ಏಜೆಂಟ್ ಆಗಿದ್ದರು. 2025ರ ಡಿಸೆಂಬರ್‌ 31 ರ ರಾತ್ರಿ 9:30 ರ ಸುಮಾರಿಗೆ ಖೋಕೋನ್‌ ದಾಸ್‌ ಕೇಔರ್‌ಬಂಗಾದ ಬಜಾರ್‌ನಲ್ಲಿ ಮೆಡಿಕಲ್‌ ಶಾಪ್‌ ಮುಚ್ಚಿ ಮನೆ ಕಡೆ ಬರುತ್ತಿದ್ದರು. ಈ ವೇಳೆ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದರು. ಹಲವು ಬಾರಿ ಹೊಟ್ಟೆಗೆ ಇರಿದು, ಪೆಟ್ರೋಲ್‌ ಹಾಕಿ ಬೆಂಕಿ ಹಚ್ಚಿದ್ದರು.

ಅದೃಷ್ಟವಶಾತ್ ಪಕ್ಕದಲ್ಲೇ ನೀರಿದ್ದ ಕೆರೆಗೆ ಜಿಗಿದು ಖೋಕೋನ್‌ ಪ್ರಾಣ ಉಳಿಸಿಕೊಂಡಿದ್ದರು. ನಂತರ ಕೆಲ ಸ್ಥಳೀಯರು ರಕ್ಷಿಸಿ ಢಾಕಾ ಮಡಿಕಲ್‌ ಆಸ್ಪತ್ರೆಗೆ ದಾಖಲಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ದಾಸ್‌ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.

Share This Article