ಬ್ಯಾಂಕಾಕ್‍ನಿಂದ 109 ಜೀವಂತ ಪ್ರಾಣಿಗಳನ್ನು ಸಾಗಿಸುತ್ತಿದ್ದ ಇಬ್ಬರು ಭಾರತೀಯ ಮಹಿಳೆಯರ ಬಂಧನ

Public TV
1 Min Read

ಬ್ಯಾಂಕಾಕ್: ತನ್ನ ಲಗೇಜ್‍ನಲ್ಲಿ 109 ಜೀವಂತ ಪ್ರಾಣಿಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇರೆಗೆ ಇಬ್ಬರು ಭಾರತದ ಮಹಿಳೆಯರನ್ನು ಥೈಯ್ಲೆಂಡ್ ಅಧಿಕಾರಿಗಳು ಬ್ಯಾಂಕಾಕ್‍ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ನಿತ್ಯ ರಾಜಾ ಮತ್ತು ಝಕಿಯಾ ಸುಲ್ತಾನಾ ಇಬ್ರಾಹಿಂ ಬಂಧಿತ ಆರೋಪಿಗಳು. ನಿತ್ಯ ರಾಜಾ ಮತ್ತು ಝಕಿಯಾ ಸುಲ್ತಾನಾ ಇಬ್ರಾಹಿಂ ಬ್ಯಾಂಕ್‍ಕ್‍ನಿಂದ ಚೆನ್ನೈಗೆ ಹೊರಡಲು ಸಿದ್ಧರಾಗಿದ್ದರು. ಆ ಸಂದರ್ಭದಲ್ಲಿ ಥಾಯ್ಲೆಂಡ್‍ನ ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಮತ್ತು ಸಸ್ಯ ಸಂರಕ್ಷಣಾ ಇಲಾಖೆಯು ನಡೆಸಿದ ಎಕ್ಸ್-ರೇ ತಪಾಸಣೆಯಲ್ಲಿ 2 ಸೂಟ್‍ಕೇಸ್‍ನಲ್ಲಿ ಜೀವಂತ ಪ್ರಾಣಿಗಳು ಪತ್ತೆಯಾಗಿವೆ.

2 ಬಿಳಿ ಮುಳ್ಳುಹಂದಿ ಮರಿಗಳು, 2 ಆರ್ಮಡಿಲ್ಲೊ, 25 ಆಮೆಗಳು, 50 ಹಲ್ಲಿಗಳು, 20 ಹಾವು ಮರಿಗಳು 2 ಸೂಟ್‍ಕೇಸ್‍ನಲ್ಲಿದ್ದವು. 2019ರ ವನ್ಯಜೀವಿ ಸಂರಕ್ಷಣೆ ಮತ್ತು ಸಂರಕ್ಷಣಾ ಕಾಯ್ದೆ, 2015ರ ಅನಿಮಲ್ ಡಿಸೀಸ್ ಆಕ್ಟ್ ಮತ್ತು 2017ರ ಕಸ್ಟಮ್ಸ್ ಆಕ್ಟ್ ಅನ್ನು ಉಲ್ಲಂಘಿಸಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು – ಸಂಜೆ 5 ಗಂಟೆಗೆ ಸುಪ್ರೀಂನಲ್ಲಿ ಮಹತ್ವದ ಅರ್ಜಿ ವಿಚಾರಣೆ

ಆರೋಪಿಗಳು ಈ ಪ್ರಾಣಿಗಳನ್ನು ಚೆನ್ನೈಗೆ ತೆಗೆದುಕೊಂಡು ಹೋಗಿ ಏನು ಮಾಡಲು ಯೋಚಿಸಿದ್ದರು ಹಾಗೂ ಆ ಎಲ್ಲಾ ಪ್ರಾಣಿಗಳನ್ನು ಸೂಟ್‍ಕೇಸ್‍ನಿಂದ ರಕ್ಷಿಸಿದ ನಂತರ ಏನಾಯಿತು ಎನ್ನುವುದರ ಬಗ್ಗೆ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: 3 ದಿನದ ಮಗುವನ್ನು ಆಸ್ಪತ್ರೆಯಿಂದ ಹೊತ್ತೊಯ್ದು ಕಚ್ಚಿ ಕೊಂದ ಬೀದಿನಾಯಿ

Live Tv

Share This Article
Leave a Comment

Leave a Reply

Your email address will not be published. Required fields are marked *