ಆರ್‌ಸಿಬಿ ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಯಲಿದ್ದರಾ ಕೊಹ್ಲಿ?

Public TV
1 Min Read

ಬೆಂಗಳೂರು: ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಮತ್ತೆ ಐಪಿಎಲ್ ನಲ್ಲಿ ಆಡಲಿದ್ದಾರೆ ಎಂಬ ಸುದ್ದಿ ಕೇಳಿ ಸಂತಸಗೊಂಡಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ ಸುದ್ದಿಯೊಂದು ಕೇಳಿ ಬಂದಿದ್ದು, ತಂಡದ ನಾಯಕತ್ವ ಪಟ್ಟದಿಂದ ಕೊಹ್ಲಿ ಕೆಳಗಿಳಿಯಲಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿದೆ.

ಐಪಿಎಲ್ ಆರಂಭದಿಂದಲೂ ಟ್ರೋಫಿ ಗೆಲ್ಲಲು ಸತತ ಪ್ರಯತ್ನ ನಡೆಸುತ್ತಿರುವ ಆರ್‌ಸಿಬಿ ಈ ಬಾರಿ ಮುಖ್ಯ ಕೋಚ್ ಸೇರಿದಂತೆ ತಂಡದಲ್ಲಿ ಭಾರೀ ಬದಲಾವಣೆ ತರಲು ಮುಂದಾಗಿದೆ. ಅಲ್ಲದೇ ಬ್ಯಾಟಿಂಗ್ ಸೇರಿದಂತೆ ಬೌಲಿಂಗ್‍ನಲ್ಲೂ ಉತ್ತಮ ತಂಡ ರೂಪಿಸುತ್ತಿದೆ. ಇದರ ಬೆನ್ನಲ್ಲೇ ನಾಯಕತ್ವದ ಬದಲಾವಣೆಗೂ ಚಿಂತನೆ ನಡೆದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಸದ್ಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಟೂರ್ನಿ ಯಲ್ಲಿ ಸೋಲುಂಡ ಬಳಿಕ ಕೊಹ್ಲಿ ನಾಯಕತ್ವದ ಕುರಿತು ಕೂಡ ಚರ್ಚೆ ಆರಂಭವಾಗಿದೆ. ಈ ಹಿಂದೆ ಎಬಿಡಿ ದಕ್ಷಿಣ ಆಫ್ರಿಕಾ ನಾಯಕತ್ವ ವಹಿಸಿದ್ದ ವೇಳೆ ತಂಡ ಯಾವುದೇ ಟೂರ್ನಿಯಲ್ಲೂ ಗೆಲ್ಲದೇ ನಿರಾಸೆ ಮೂಡಿಸಿತ್ತು. ಆದರೆ ಎಬಿಡಿ ನಾಯಕತ್ವದಲ್ಲಿ ತಂಡ ಎದುರಿಸಿದ್ದ 2015 ಐಸಿಸಿ ಟೂರ್ನಿಯಲ್ಲಿ ತಂಡದಲ್ಲಿ ಮಹತ್ವದ ಬದಲಾವಣೆಗಳು ನಡೆದಿದ್ದವು. ಆರ್‌ಸಿಬಿ ತಂಡದ ಆಟಗಾರರು ಕೊಹ್ಲಿ ಮಾತಿಗೆ ಹೆಚ್ಚಿನ ಮನ್ನಣೆ ನೀಡಿದರೂ ಕೂಡ ತಂಡ ಎಬಿಡಿ ನಾಯಕತ್ವದಲ್ಲಿ ಮುನ್ನಡೆಯುವುದು ಸೂಕ್ತ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಳಿದಂತೆ ಐಪಿಎಲ್ ನಲ್ಲಿ ಆರ್‌ಸಿಬಿ ಪರ 2011 ರಲ್ಲಿ ಮೊದಲ ಪಂದ್ಯವಾಡಿದ ಎಬಿಡಿ, ಅಂದು ನಾಯಕ ವಿರಾಟ್ ಕೊಹ್ಲಿ ಜೊತೆಗೂಡಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಆರ್‌ಸಿಬಿ ಪರ ಈ ಜೋಡಿ 5 ಬಾರಿ 100 ಪ್ಲಸ್ ರನ್ ಸಿಡಿಸಿದ ಹೆಗ್ಗಳಿಕೆ ಪಡೆದಿದೆ. ಅಲ್ಲದೇ 2 ಬಾರಿ 200 ಪ್ಲಸ್ ರನ್ ಜೊತೆಯಾಟ ನೀಡಿದ ಜೋಡಿ ಎಂಬ ದಾಖಲೆ ಹೊಂದಿದೆ. ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *