ಹೊಸ ವರ್ಷಾಚರಣೆಗೆ ಹೆಚ್ಚಿನ ಸಮಯ ಫಿಕ್ಸ್? – ಮಧ್ಯರಾತ್ರಿ 2 ಗಂಟೆವರೆಗೂ ಅವಕಾಶ ಸಾಧ್ಯತೆ

Public TV
1 Min Read

ಬೆಂಗಳೂರು: ಕೋವಿಡ್ (Covid) ಬಳಿಕ ಅದ್ಧೂರಿ ಹೊಸ ವರ್ಷ ಸಂಭ್ರಮಾಚರಣೆಗೆ (NewYear 2023) ಸಿಲಿಕಾನ್ ಸಿಟಿ ಸಿದ್ಧವಾಗುತ್ತಿದ್ದು, ಮೋಜು-ಮಸ್ತಿ ಸಂಭ್ರಮದ ರಂಗು ಮತ್ತಷ್ಟು ಹೆಚ್ಚಿಸಲು ಸಮಯ ನಿಗದಿ ಮಾಡುವ ಬಗ್ಗೆ ಪೊಲೀಸರು (Police) ಚಿಂತನೆ ನಡೆಸಿದ್ದಾರೆ.

ಹೊಸ ವರ್ಷ ಸಂಭ್ರಮಾಚರಣೆಗೆ (NewYear 2023) ಕೆಲವೇ ದಿನಗಳು ಬಾಕಿ ಇದ್ದು, ಬೆಂಗಳೂರಿನಲ್ಲಿ ಈ ಬಾರಿ ಅದ್ಧೂರಿ ಹೊಸ ಸಂಭ್ರಮಾಚರಣೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ಬಾರಿ ಸಂಭ್ರಮಾಚರಣೆನ್ನ ತಡರಾತ್ರಿ 1 ಗಂಟೆ ವರೆಗೆ ಮಾತ್ರ ನಿಗದಿ ಮಾಡಲಾಗುತ್ತಿತ್ತು. ಈ ಬಾರಿ ಹೆಚ್ಚುವರಿ ಸಮಯಾವಕಾಶ ಕಲ್ಪಿಸಿಕೊಡಲು ಚಿಂತನೆ ಮಾಡಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಝಿಕಾ ವೈರಸ್‌ ಭೀತಿ – ಚಿಕಿತ್ಸಾ ಕ್ರಮ ಪಟ್ಟಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

ಈ ಬಾರಿ ಬೆಂಗಳೂರು ಪೊಲೀಸರು ಹೊಸ ವರ್ಷ ಸಂಭ್ರಮಾಚರಣೆಗೆ ಮಧ್ಯರಾತ್ರಿ 2 ಗಂಟೆಯ ತನಕ ಮೋಜು-ಮಸ್ತಿಗೆ ಅವಕಾಶ ಕಲ್ಪಿಸಿಕೊಡುವ ಚಿಂತನೆಯಲ್ಲಿದ್ದಾರೆ. ಇಂದು ಪೊಲೀಸ್ ಆಯುಕ್ತರ (Bengaluru Police Commissioner) ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಸಂಭ್ರಮಾಚರಣೆಗೆ ಎರಡು ಗಂಟೆಯ ತನಕ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು, 2 ಗಂಟೆಯ ಸಮಯ ಅವಕಾಶ ನಿಗದಿ ಮಾಡಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ – ಸಿಸಿಟಿವಿಯಿಂದ ಚಾಲಕನ ಸುಳ್ಳು ಬಯಲು

ಹೋಟೆಲ್ ಮಾಲೀಕರ ಸಂಘ ಸೇರಿದಂತೆ ಹಲವು ವರ್ತಕರು ಪೊಲೀಸರಿಗೆ ಹೆಚ್ಚುವರಿ ಸಮಯ ನಿಗದಿ ಮಾಡುವಂತೆ ಮನವಿ ಸಲ್ಲಿಸಿದ್ದರು. ಮನವಿ ಪರಿಶೀಲಿಸಿರುವ ಪೊಲೀಸರು ಮಧ್ಯರಾತ್ರಿ 2 ಗಂಟೆಯ ತನಕ ಸಮಯ ನಿಗದಿ ಮಾಡುವ ಸಾಧ್ಯತೆಗಳಿವೆ. ಹೆಚ್ಚುವರಿ ಸಮಯದಿಂದ ಆಗುವ ಸಾಧಕ-ಬಾಧಕಗಳನ್ನ ಪರಿಶೀಲನೆ ಮಾಡಿ ಸರ್ಕಾರ ಅವಕಾಶ ಕಲ್ಪಿಸಲಿದೆ ಎಂದು ಪೊಲೀಸರ ಮೂಲಗಳು ತಿಳಿಸಿವೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *