ನಾಳೆ ಸದನದಲ್ಲಿ ಚಂದ್ರಗುಪ್ತ ಮೌರ್ಯನ ಕಾಲದ ಕಥೆ ಹೇಳಬೇಡಿ: ಈಶ್ವರಪ್ಪ ಮನವಿ

Public TV
1 Min Read

ಬೆಂಗಳೂರು: ನಾಳೆ ಸದನದಲ್ಲಿ ಚಂದ್ರಗುಪ್ತ ಮೌರ್ಯನ ಕಾಲದ ಕಥೆ ಹೇಳಬೇಡಿ ಎಂದು ಮೈತ್ರಿ ನಾಯಕರಿಗೆ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಮನವಿ ಮಾಡಿಕೊಂಡಿದ್ದಾರೆ.

ಶಾಸಕರ ಸರಣಿ ರಾಜೀನಾಮೆ ಹಿನ್ನೆಲೆ ಬಹುಮತ ಕಳೆದುಕೊಂಡಿರುವ ಮೈತ್ರಿ ಸರ್ಕಾರ, ಬಹುಮತ ಸಾಬೀತು ಪಡಿಸಲು ಸಮಯ ಕೇಳಿದೆ. ಆದರೆ ಬಹುಮತಯಾಚನೆ ಮಾಡದೇ ಸದನದಲ್ಲಿ ಕಾಲಹರಣ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.

ಈ ವಿಚಾರವಾಗಿ ಇಂದು ಟ್ವೀಟ್ ಮಾಡಿರುವ ಈಶ್ವರಪ್ಪ, “ನಾಳೆ ಮತ್ತೆ ಸದನದಲ್ಲಿ ಚಂದ್ರಗುಪ್ತ ಮೌರ್ಯನ ಕಾಲದಿಂದ ಇವತ್ತಿನ ತನಕ ಕಥೆ ಹೇಳಿ ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬಾರದು ಎಂದು ಎಲ್ಲಾ ಜನಾತದಾಳ ಹಾಗೂ ಕಾಂಗ್ರೆಸ್ ಶಾಸಕರಲ್ಲೂ ಮತ್ತು ಮೇಧಾವಿಗಳಾದ ಸಮನ್ವಯ ಸಮಿತಿ ಅಧ್ಯಕ್ಷರಲ್ಲೂ ನನ್ನ ಕಳಕಳಿಯ ವಿನಂತಿ” ಎಂದು ಟ್ವೀಟ್ ಮಾಡಿದ್ದಾರೆ.

ನಾಳೆ ವಿಶ್ವಾಸ ಮತಯಾಚನೆ ಮಾಡಲು ರಾಜ್ಯ ಸರ್ಕಾರಕ್ಕೆ ಸಮಯ ನೀಡಲಾಗಿದ್ದು, ಆಗಲೇ ಎರಡು ಬಾರಿ ರಾಜ್ಯಪಾಲರು ಆದೇಶ ನೀಡಿದ್ದರೂ ಮೈತ್ರಿ ನಾಯಕರು ಡೋಂಟ್ ಕೇರ್ ಎಂದಿದ್ದಾರೆ. ಈ ವಿಚಾರವಾಗಿ ರಾಜ್ಯಪಾಲರು ಕೇಂದ್ರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಇನ್ನೊಂದೆಡೆ ಮೈತ್ರಿ ನಾಯಕರು ಅತೃಪ್ತ ಶಾಸಕರನ್ನು ಸಂಪರ್ಕಿಸಲು ಕೊನೆ ಕ್ಷಣದ ಕಸರತ್ತು ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *