2023ಕ್ಕೆ ಕೆಟಿಆರ್‌, ಡಿಕೆಶಿ ಇಬ್ಬರು ಪ್ಯಾಕ್ ಅಪ್: ಬಿಜೆಪಿ ಟ್ವೀಟ್ ತಿವಿತ

Public TV
3 Min Read

ಬೆಂಗಳೂರು: ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೈದರಾಬಾದ್‍ಗೆ ಬನ್ನಿ ಎಂದು ಬೆಂಗಳೂರು ಸ್ಟಾರ್ಟ್ ಅಪ್ ಕಂಪನಿಗೆ ಆಹ್ವಾನ ನೀಡಿದ್ದ ತೆಲಂಗಾಣ ಸಚಿವ ಕೆಟಿ ರಾಮರಾವ್ ರಾಜ್ಯ ಬಿಜೆಪಿ ಸಚಿವರು ತಿರುಗೇಟು ನೀಡಿದ್ದಾರೆ.

ಕೆಟಿ ರಾಮರಾವ್ ಚಾಲೆಂಜ್ ಸ್ವೀಕಾರ ಮಾಡುವುದಾಗಿ ಟ್ವೀಟ್ ಮಾಡಿದ್ದ ಡಿಕೆಶಿಗೂ ಬಿಜೆಪಿ ತಿರುಗೇಟು ಕೊಟ್ಟಿದೆ. 2023ರಲ್ಲಿ ಡಿ.ಕೆ ಶಿವಕುಮಾರ್, ಕೆಟಿ ರಾಮರಾವ್ ಇಬ್ಬರು ಪ್ಯಾಕ್‍ಅಪ್ ಮಾಡಬೇಕಾಗುತ್ತದೆ. ಡಬ್ಬಲ್ ಇಂಜಿನ್ ಸರ್ಕಾರ ಕರ್ನಾಟಕ ಮಾತ್ರವಲ್ಲ ತೆಲಂಗಾಣದಲ್ಲೂ ಗೆಲುವು ಸಾಧಿಸಲಿದೆ. ಆಗ ಎರಡು ಕಡೆ ಅಭಿವೃದ್ಧಿ ಆಗುತ್ತೆ ಅಂತಾ ಬಿಜೆಪಿ ಟ್ವೀಟ್ ಮಾಡಿ ತಿವಿದಿದೆ. ಇದೇ ವೇಳೆ ಸಚಿವ ಅಶ್ವಥ್ ನಾರಾಯಣ್ ಕೂಡ ತಿರುಗೇಟು ನೀಡಿದ್ದು, ಡಿ.ಕೆ.ಶಿವಕುಮಾರ್ ಅವರೇ, ರಾಜ್ಯದ ಜನತೆಯ ಹಿತ ಕಾಪಾಡುವ ಬಗ್ಗೆ ನೀವು ಯೋಚಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ತೆಲಂಗಾಣ ಸರ್ಕಾರದೊಂದಿಗೆ ನೀವು ಯಾವ ರೀತಿಯ ರಾಜಕೀಯ ಹೊಂದಾಣಿಕೆಯನ್ನು ಹೊಂದಿದ್ದೀರಿ? ನಿಮ್ಮ ರಾಜಕೀಯ ಲೆಕ್ಕಾಚಾರಗಳಿಗೆ ಬೇಕಾಗಿ ರಾಜ್ಯದ ಘನತೆಯ ಬಗ್ಗೆ ಸವಾಲು ಹಾಕಬೇಡಿ ಅಂತಾ ಖಾರವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ಧ್ವನಿವರ್ದಕದ ವಿಷಯ ತೀರ್ಮಾನ ಮಾಡಿ ನಿಗದಿ ಮಾಡಿದ್ದಾರೆ: ಡಿ.ಕೆ ಶಿವಕುಮಾರ್

ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಖಾತಾ ಬುಕ್‍ನ ಸಿಇಓ ರವೀಶ್ ನರೇಶ್ ದ್ವನಿ ಎತ್ತಿದ್ರು. ಬೆಂಗಳೂರಿನ ಕೋರಮಂಗಲದ ಸ್ಟಾರ್ಟ್ ಅಪ್ ಕಂಪನಿ ಖಾತಾಬುಕ್ ಸಂಸ್ಥಾಪಕ ರವೀಶ್ ನರೇಶ್, ಐದು ದಿನಗಳ ಹಿಂದೆ ಟ್ವೀಟ್ ಮಾಡಿ, ರಸ್ತೆ, ನೀರು, ಟ್ರಾಫಿಕ್ ಸೇರಿ ಬೆಂಗಳೂರಿನ ಮೂಲಭೂತ ಸಮಸ್ಯೆಗಳ ಬಗ್ಗೆ ಗೋಳು ಹೇಳಿಕೊಂಡು ಪ್ರಧಾನಿ ಮೋದಿ, ರಾಜ್ಯ ಸರ್ಕಾರ, ಸಂಸದ ತೇಜಸ್ವಿ ಸೂರ್ಯಗೆ ಟ್ಯಾಗ್ ಮಾಡಿದ್ರು. ಈ ನುಡವೆ ರವೀಶ್ ನರೇಶ್ ಟ್ವೀಟ್ ಅನ್ನೇ ಬಂಡವಾಳ ಮಾಡಿಕೊಂಡು ತೆಲಂಗಾಣ ಸಚಿವ ಕೆಟಿ ರಾಮರಾವ್, ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು ನಮ್ಮ ಹೈದ್ರಾಬಾದ್‍ಗೆ ಬನ್ನಿ, ಎಲ್ಲ ರೀತಿಯ ಮೂಲಭೂತಸೌಕರ್ಯ ಒದಗಿಸುವುದಾಗಿ ಹೇಳಿದೆ.

ಆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರತಿಕ್ರಿಯಿಸಿ, ನಿಮ್ಮ ಚಾಲೆಂಜ್ ಸ್ವೀಕರಿಸ್ತೇನೆ. 2023ಕ್ಕೆ ನಮ್ಮದೇ ಸರ್ಕಾರ ಬರುತ್ತೆನೆ. ಬೆಂಗಳೂರನ್ನು ಮತ್ತೊಮ್ಮೆ ಉತ್ತಮ ನಗರಿಯನ್ನಾಗಿ ರೂಪಿಸ್ತೇನೆ ಎಂದು ಕೆಟಿಆರ್‍ಗೆ ರೀಟ್ವೀಟ್ ಮಾಡಿದ್ದಾರೆ. ಇದಕ್ಕೆ ರಿಯಾಕ್ಷನ್ ನೀಡಿದ ಕೆಟಿ ರಾಮರಾವ್, ನಿಮ್ ರಾಜ್ಯದ ರಾಜಕೀಯ ನಂಗೊತ್ತಿಲ್ಲ. ನಿಮ್ ಪಕ್ಷ ಗೆಲ್ಲುತ್ತೋ ಇಲ್ವೋ ಅನ್ನೋದು ಗೊತ್ತಿಲ್ಲ. ಆದರೆ ನಿಮ್ಮ ಚಾಲೆಂಜ್ ಅನ್ನು ನಾನು ತೆಗೆದುಕೊಳ್ತೇನೆ. ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಸೃಷ್ಟಿಯಲ್ಲಿ ಕರ್ನಾಟಕ – ತೆಲಂಗಾಣ ನಡುವೆ ಆರೋಗ್ಯಕರ ಪೈಪೋಟಿ ನಡೆಯಲಿ ಎಂದು ಟ್ವೀಟಿಸಿದ್ದಾರೆ. ಜೊತೆಗೆ ಹಲಾಲ್, ಹಿಜಬ್ ರಾಜಕೀಯ ಬೇಡ ಅಂತಾನೂ ಕುಟುಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *