ಬೆಂಗಳೂರಿಗೆ ಸುರಂಗನೂ ಬೇಡ, ಫ್ಲೈಓವರ್ ಬೇಡ.. ಮೊದಲು ನೀರು ಕೊಡಿ: ಎಸ್‌.ಆರ್.ವಿಶ್ವನಾಥ್

Public TV
1 Min Read

-ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ರಾಜ್ಯದಲ್ಲಿ ಬರಗಾಲ ಗ್ಯಾರಂಟಿ

ಚಿಕ್ಕಬಳ್ಳಾಪುರ: ಬೇಸಿಗೆಗೂ ಮುನ್ನವೇ ರಾಜ್ಯ ರಾಜಧಾನಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಹಾಗೂ ಹಲವು ಕಡೆ ಜನರ ಪ್ರತಿಭಟನೆ ವಿಚಾರವಾಗಿ ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ (S.R.Vishwanath) ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮದಲ್ಲಿ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಶಾಸಕ ವಿಶ್ವನಾಥ್, ಬ್ರ್ಯಾಂಡ್ ಬೆಂಗಳೂರು ಅಂತ ಬೆಂಗಳೂರಿಗೆ ನಿಮ್ಮ ಸುರಂಗನೂ ಬೇಡ, ಫ್ಲೈಓವರ್ ಬೇಡ. ಮೊದಲು ಜನರಿಗೆ ಕುಡಿಯುವ ನೀರು ಕೊಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: 3 ವರ್ಷಗಳಿಂದ ವರ್ಗಾವಣೆಯಾಗಿಲ್ಲ; ಪೊಲೀಸರಿಂದಲೇ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ!

ಯಲಹಂಕ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅನುದಾನ ಕೇಳಿದ್ರೆ 25 ಲಕ್ಷ ರೂ. ಕೊಟ್ಟಿದ್ದಾರೆ. 210 ಹಳ್ಳಿಗಳಿವೆ. ಎಷ್ಟು ಕೊಳವೆಬಾವಿ ಕೊರಸೋಕೆ ಆಗುತ್ತೆ? ಈ ಸರ್ಕಾರ ಜನರಿಗೆ ಕುಡಿಯುವ ನೀರು ಕೊಡುವ ಕೆಲಸ ಮಾಡಬೇಕು. ಕಾವೇರಿಯಲ್ಲಿ ನೀರಿಲ್ಲ, ಹೀಗೆ ಆದ್ರೆ ನಾವೆಲ್ಲಾ ಸಾಯಬೇಕಾಗುತ್ತೆ. ಮೊದಲು ಕುಡಿಯುವ ನೀರು ಕೊಡಿ ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಬಂದರೆ ಬರಗಾಲ ಗ್ಯಾರಂಟಿ. ಲೋಕಸಭಾ ಚುನಾವಣಾ ಪ್ರಚಾರಕ್ಕೆ ಹೋದಾಗ ಜನರೇ ಹಳ್ಳಿಗಳಲ್ಲಿ ಮುಖಕ್ಕೆ ಹೊಡಿತಾರೆ. ನಿಮ್ಮ 2,000 ಬೇಡ ನಮಗೆ ಕುಡಿಯೋಕೆ ನೀರು ಕೊಡಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗಿಫ್ಟ್ ಪಾಲಿಟಿಕ್ಸ್- ಕ್ಷೇತ್ರದ ಮತದಾರರಿಗೆ ಕುಕ್ಕರ್, ಡಿನ್ನರ್ ಸೆಟ್ ಹಂಚಿದ ಕಾಂಗ್ರೆಸ್‌

Share This Article