ಬೆಂಗಳೂರು | ಅಪ್ರಾಪ್ತೆಯನ್ನು ಕರೆದೊಯ್ದು ಮದುವೆಗೆ ಯತ್ನ – ಆರೋಪಿ ಅರೆಸ್ಟ್

Public TV
1 Min Read

ಆನೇಕಲ್: ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋಗಿ ಮದುವೆ (Marriage) ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರು ಹೊರ ವಲಯದ ಆನೇಕಲ್ ಪೋಲಿಸ್ ಠಾಣಾ (Anekal Police Station) ವ್ಯಾಪ್ತಿಯಲ್ಲಿ ನಡೆದಿದೆ.

ಕೋರಮಂಗಲ (Koramangala) ಮೂಲದ ನಿವಾಸಿ ಸೊಸೆರಾಜು ಬಂಧಿತ ಆರೋಪಿ. ಬೆಂಗಳೂರಿನ ಕೋರಮಂಗಲದಲ್ಲಿರುವ ಅಜ್ಜಿಯ ಮನೆಗೆಂದು ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಆರೋಪಿ ಕರೆದುಕೊಂಡು ಓಡಿ ಹೋಗಿದ್ದ. ಇದನ್ನೂ ಓದಿ: ಮಂಗಳೂರು | ಲವ್-ಸೆಕ್ಸ್ ದೋಖಾ ಕೇಸ್‌ – ಬಿಜೆಪಿ ಪ್ರಭಾವಿ ಮುಖಂಡನ ಪುತ್ರ ಅರೆಸ್ಟ್‌

ವಿಚಾರ ತಿಳಿಯುತ್ತಿದ್ದಂತೆ ಅಪ್ರಾಪ್ತೆಯ ತಂದೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವುದಾಗಿ ದೂರು ನೀಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಆರೋಪಿಯನ್ನು ಬಂಧಿಸಿ ಆನೇಕಲ್ ಠಾಣೆಗೆ ಕರೆತಂದಿದ್ದಾರೆ. ಇದನ್ನೂ ಓದಿ: ಉದ್ಯಮಿ ನೀರವ್ ಮೋದಿ ಸಹೋದರ ನೇಹಲ್ ಮೋದಿ ಬಂಧನ

ಈ ಪ್ರಕರಣ ಸಂಭವಿಸಿ ಎರಡು ದಿನ ಕಳೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share This Article