ಪ್ರಸ್ತ ಮುಗಿಸಿ ಮಾರನೇ ದಿನವೇ ಓಡಿ ಹೋಗಿದ್ದ ಪತಿರಾಯನನ್ನ ಹುಡುಕಿ ಕರೆತಂದ ಪೊಲೀಸರು

Public TV
1 Min Read

ಬೆಂಗಳೂರು: ಮದುವೆಯಾಗಿ, ಪ್ರಸ್ತ ಮುಗಿಸಿ ಮಾರನೇ ದಿನವೇ ಓಡಿ ಹೋಗಿದ್ದ ಗಂಡನನ್ನ ಬಾಣಸವಾಡಿ ಪೊಲೀಸರು ಹುಡುಕಿ ಕರೆತಂದಿದ್ದಾರೆ.

ಮದುವೆಯಾದ ಮೂರೇ ದಿನಕ್ಕೆ ಅನುರಾಧ ಎಂಬವರನ್ನ ವರಿಸಿದ ಕೇಶವಮೂರ್ತಿ ನಾಪತ್ತೆಯಾಗಿದ್ದ. ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಇಂದು ಅನುರಾಧ ಗಂಡ ಕೇಶವಮೂರ್ತಿಯನ್ನು ಕರೆತಂದು ವಿಚಾರಣೆ ಮಾಡಲಾಗ್ತಿದೆ.

ಏಪ್ರಿಲ್ 2 ರಂದು ಧರ್ಮಸ್ಥಳದಲ್ಲಿ ಗುರುಹಿರಿಯರ ಸಮ್ಮುಖದಲ್ಲೇ ಅನುರಾಧ ಹಾಗೂ ಕೇಶವಮೂರ್ತಿಯ ವಿವಾಹವಾಗಿತ್ತು. ಏಪ್ರಿಲ್ 3 ರಂದು ಬೆಂಗಳೂರಿನ ಶ್ರೀರಾಮಪುರದಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ರು. ಮದುವೆಗೆ 2 ಲಕ್ಷ ನಗದು 50 ಗ್ರಾಂ ಚಿನ್ನ ನೀಡಲಾಗಿತ್ತು. ಮದುವೆ ಬಳಿಕ ಐದು ಲಕ್ಷ ನಗದು ಮತ್ತು ಚಿನ್ನಾಭರಣದೊಂದಿಗೆ ಕೇಶವಮೂರ್ತಿ ಪರಾರಿಯಾಗಿದ್ದ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಕೇಶವಮೂರ್ತಿಯನ್ನ ಹುಡುಕಿ ಕರೆತಂದಿರೋ ಪೊಲೀಸರು ಎರಡೂ ಕುಟುಂಬಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *