ಬಳ್ಳಾರಿ: ವಾಲ್ಮೀಕಿ ಜಯಂತಿ ನಿಮಿತ್ತ ನಗರದಲ್ಲಿ ಹಾಕಲಾಗಿದ್ದ ಬ್ಯಾನರ್ (Banner) ತೆರವು ಮಾಡಿದ್ದನ್ನು ಖಂಡಿಸಿ ವಾಲ್ಮೀಕಿ ಸಮುದಾಯದ (Valmiki Community) ಸದಸ್ಯರು ನಗರದ ಸಂಗಮ್ ಸರ್ಕಲ್‌ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ವಾಲ್ಮೀಕಿ ಜಯಂತಿ ಹಿನ್ನೆಲೆ ಮಹಾನಗರ ಪಾಲಿಕೆಯ (Ballari Municipal Corporation) ಪರವಾನಗಿ ಪಡೆದು ನಗರದ ಹಲವೆಡೆ ಬ್ಯಾನರ್ ಅಳವಡಿಕೆ ಮಾಡಲಾಗಿತ್ತು. ಆದರೆ ಬೆಳಗ್ಗೆ ಏಕಾಏಕಿ ನಗರದ 38 ಕಡೆಗಳಲ್ಲಿ ಹಾಕಲಾಗಿದ್ದ ಬ್ಯಾನರ್‌ಗಳನ್ನು ಕಿತ್ತು ಹಾಕಲಾಗಿದೆ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಾತಿಗಣತಿಯಲ್ಲಿ ತಾಂತ್ರಿಕ ಸಮಸ್ಯೆ – ಹಿಂದೂ ವ್ಯಕ್ತಿಯ ಆಧಾರ್ ನಂಬರ್ ಹಾಕಿದ್ರೆ ಮುಸ್ಲಿಂ ಹೆಸರು!
ಅನುಮತಿ ಪಡೆದು ಬ್ಯಾನರ್ ಅವಳಡಿಕೆ ಮಾಡಲಾಗಿದ್ದರೂ ಅಧಿಕಾರಿಗಳು ಬ್ಯಾನರ್ ತೆರವು ಮಾಡಿದ್ದಾರೆ. ಅಧಿಕಾರಿಗಳು ಶಾಸಕ ಭರತ್ ರೆಡ್ಡಿ ಸೂಚನೆ ಮೇರೆಗೆ ಅಧಿಕಾರಿಗಳು ಬ್ಯಾನರ್‌ಗಳನ್ನ ತೆರವು ಮಾಡಿದ್ದಾರೆ ಎಂದು ಆರೋಪಿಸಿದ ಮುಖಂಡರು, ಬ್ಯಾನರ್ ತೆಗೆದ ಅಧಿಕಾರಿಗಳನ್ನ ಕೂಡಲೇ ಸಸ್ಪಂಡ್ ಮಾಡುವಂತೆ ಆಗ್ರಹಿಸಿದರು.
ಘಟನಾ ಸ್ಥಳಕ್ಕೆ ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ , ಎಸ್‌ಪಿ ಶೋಭಾರಾಣಿ ದೌಡಾಯಿಸಿ, ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಅಧಿಕಾರಿಗಳ ಸಮ್ಮುಖದಲ್ಲೇ ಸರ್ಕಾರಿ ವಾಲ್ಮೀಕಿ ಜಯಂತಿ ಬಹಿಷ್ಕರಿಸಿ , ಪ್ರತ್ಯೇಕ ಜಯಂತಿ ಮಾಡಲು ಪ್ರತಿಭಟನಕಾರರು ನಿರ್ಧರಿಸಿದರು.