ಬಳ್ಳಾರಿ: ಜಿಲ್ಲೆಯಲ್ಲಿ ಹೊತ್ತಿಕೊಂಡಿರುವ ರಾಜಕೀಯ ಕಿಚ್ಚು ಮತ್ತೆ ತಾರಕಕ್ಕೇರುತ್ತಿದೆ. ಇದೀಗ ಸರ್ಕಾರ ಗಲಭೆ ಪ್ರಕರಣವನ್ನು ಸಿಐಡಿಗೆ (CID) ವಹಿಸಿದೆ.
ರಾಜಶೇಖರ್ ಸಾವಿಗೆ ಶಾಸಕ ನಾರಾ ಭರತ್ ರೆಡ್ಡಿ, ಸತೀಶ್ ರೆಡ್ಡಿಯೇ ನೇರ ಕಾರಣ, ಇಬ್ಬರನ್ನೂ ತಕ್ಷಣ ಬಂಧಿಸಬೇಕು ಅಂತ ಜನಾರ್ದನ ರೆಡ್ಡಿ ಆಗ್ರಹಿಸಿದ್ದಾರೆ. ಮೊನ್ನೆಯಷ್ಟೇ ಎರಡು ಬಾರಿ ರಾಜಶೇಖರ್ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದಿದ್ದ ರೆಡ್ಡಿ ಈಗ ಅಂತ್ಯಕ್ರಿಯೆ ಸಂಬಂಧ ಇನ್ನೊಂದು ವಿಡಿಯೋ ರಿಲೀಸ್ ಮಾಡಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಗಲಭೆ – ಬಂಧನ ಭೀತಿಯಿಂದ ಬಳ್ಳಾರಿ ತೊರೆದ ಕಾರ್ಯಕರ್ತರು
ಗಲಭೆಯಲ್ಲಿ ಮೃತಪಟ್ಟ ರಾಜಶೇಖರ್ ಅಂತ್ಯಕ್ರಿಯೆಯಲ್ಲಿ ಸಾಕ್ಷ್ಯನಾಶದ ಪ್ರಯತ್ನ ನಡೆದಿದೆ ಎಂದು ಆರೋಪಿಸಿ ಸಾಕ್ಷ್ಯಾಧಾರ ರಿಲೀಸ್ ಮಾಡಿದ್ದಾರೆ. ಮೊದಲು ಅಂತ್ಯಸಂಸ್ಕಾರಕ್ಕೆ ಗುಂಡಿ ತೋಡಿ ಬಳಿಕ ಸುಟ್ಟು ಹಾಕಿದ್ದಾರೆ. ಕಟ್ಟಿಗೆ ಬದಲು ಗ್ಯಾಸ್‌ನಿಂದ ಮೃತದೇಹ ಸುಟ್ಟಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ.
ಸ್ಮಶಾನದಲ್ಲಿ ಗುಂಡಿ ತೋಡೋ ಸೋಮ ಅನ್ನೋ ವ್ಯಕ್ತಿಯ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಶಾಸಕ ಭರತ್ ರೆಡ್ಡಿ ಸೂಚನೆಯಂತೆಯೇ ಮೃತದೇಹವನ್ನು ಸುಡಲಾಗಿದೆ ಅಂತ ವಿಡಿಯೋ ಸಾಕ್ಷ್ಯ ನೀಡಿದ್ದಾರೆ. ಬಳ್ಳಾರಿ ಮೇಲೆ ಹಿಡಿತ ಸಾಧಿಸಲು ಮುಂದಾಗಿರುವ ಬಿಜೆಪಿ ಇದೇ 17ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಸಲು ಮುಂದಾಗಿದೆ. ಇದನ್ನೂ ಓದಿ: ರಾಜಶೇಖರ್ ಸಾವು ಆಕಸ್ಮಿಕ ಅಲ್ಲ, ಉದ್ದೇಶಪೂರ್ವಕ ಕೊಲೆ: ಜನಾರ್ದನ ರೆಡ್ಡಿ


