ಬಳ್ಳಾರಿ: ಅಧಿದೇವತೆ ಕನಕ ದುರ್ಗಮ್ಮ ಸಿಡಿ ಬಂಡಿ ರಥೋತ್ಸವ (Kanaka Durgamma Sidi Bandi Rathotsava) ಇಂದು ಅದ್ದೂರಿಯಾಗಿ ನೆರವೇರಿತು.
ನಗರ ಶಾಸಕ ನಾರಾ ಭರತ್ ರೆಡ್ಡಿ, ವಿಶೇಷ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ಮಹಾರಾಷ್ಟ್ರ, ಆಂಧ್ರಪ್ರದೇಶ ತೆಲಂಗಾಣ ಸೇರಿ ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಸಿಡಿ ಬಂಡಿ ರಥೋತ್ಸವದಲ್ಲಿ ಭಾಗಿಯಾಗಿ ಕಣ್ತುಂಬಿಕೊಂಡರು.
ಭಕ್ತರು ಸಿಡಿ ಬಂಡಿಗೆ ಬಾಳೆ ಹಣ್ಣಿನ ಜೊತೆಗೆ ಜೀವಂತ ಕೋಳಿ ಎಸೆದರು. ಕನಕದುರ್ಗಮ್ಮ ಸಿಡಿ ಬಂಡಿ ರಥೋತ್ಸವಕ್ಕೆ ಕೋಳಿ ಎಸೆಯುವುದು ಸಂಪ್ರದಾಯ. ಹೀಗಾಗಿ ಭಕ್ತರು ಸಿಡಿ ಬಂಡಿ ರಥೋತ್ಸವಕ್ಕೆ ಜೀವಂತ ಕೋಳಿ ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

