– ಡೆತ್‌ನೋಟ್‌ನಲ್ಲಿ ಹಿರಿಯ ಅಧಿಕಾರಿಗಳ ಹೆಸರಿದೆ ಅನ್ನೋ ಮಾಹಿತಿ ಇದೆ; ಸಚಿವೆ
ಬೆಂಗಳೂರು: ಅಮಾನತ್ತಿನಲ್ಲಿರುವ ಬಳ್ಳಾರಿ ಎಸ್.ಪಿ ಪವನ್ ನೆಜ್ಜೂರ್ (Pavan Nejjuru) ಆತ್ಮಹತ್ಯೆಗೆ ಯತ್ನ ವದಂತಿ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೊಸ ಬಾಂಬ್ ಸಿಡಿಸಿದ್ದಾರೆ. ಪವನ್ ನೆಜ್ಜೂರ್ ಆತ್ಮಹತ್ಯೆ ಯತ್ನಕ್ಕೂ ಮುನ್ನ ಡೆತ್‌ನೋಟ್ ಬರೆದಿದ್ರು ಅಂತ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು (BengaluruP) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪವನ್ ಅವರ ಡೆತ್‌ನೋಟ್ ಮುಚ್ಚಟ್ಟಿದೆ. ಅಧಿಕಾರಿಗಳು ನಿನ್ನೆ ಡೆತ್‌ನೋಟ್ (Deathnote) ಕೈಯಲ್ಲಿ ಮುಚ್ಚಿಟ್ಕೊಂಡು ಮಾತಾಡಿದ್ರು. ಅದರಲ್ಲಿ ಏನಿದೆ ಅಂತ ಬಹಿರಂಗಪಡಿಸಬೇಕು ಅಂತ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಎಸ್‌ಪಿ ಪವನ್ ನಿಜ್ಜೂರ್ ಆತ್ಮಹತ್ಯೆಗೆ ಯತ್ನಿಸಿಲ್ಲ, ವಿಶ್ರಾಂತಿಯಲ್ಲಿದ್ದಾರೆ: ಡಿಸಿಪಿ ಶ್ರೀಹರಿಬಾಬು
ನಮಗೆ ಬಂದಿರುವ ಮಾಹಿತಿ ಪ್ರಕಾರ ಡೆತ್‌ನೋಟ್‌ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರು ಬರೆದಿದ್ದಾರೆ. ಡೆತ್‌ನೋಟ್ ನಲ್ಲಿ ಏನಿದೆ? ಸರ್ಕಾರ ಯಾಕೆ ಮುಚ್ಚಿಡೋ ಪ್ರಯತ್ನ ಮಾಡ್ತಿದೆ ಅಂತ ಸಚಿವರು ಪ್ರಶ್ನಿಸಿದ್ರು.
ಪವನ್ ನೆಜ್ಜೂರ್ ಆತ್ಮಹತ್ಯೆಗೆ ಯತ್ನಿಸಿಲ್ಲ ಅಂತ ಸರ್ಕಾರ ಹೇಳ್ತಿರುವಾಗ ಶೋಭಾ ಕರಂದ್ಲಾಜೆ ಅವರ ಈ ಹೇಳಿಕೆ ಈಗ ನಾನಾ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇದನ್ನೂ ಓದಿ: Ballari Clash | ಕಾಂಗ್ರೆಸ್ ಕಾರ್ಯಕರ್ತನ ಕೊಲೆಗೆ ಬಿಜೆಪಿಯೇ ಕಾರಣ – ಡಿಕೆಶಿ


