ಕೆಂಪೇಗೌಡ ಪ್ರತಿಮೆ ನೋಡಿ ತನ್ವೀರ್ ಸೇಠ್‍ಗೆ ಹೊಟ್ಟೆ ಕಿಚ್ಚು: ಮಂಜುನಾಥ್

Public TV
2 Min Read

ಮಂಡ್ಯ: ಕೆಂಪೇಗೌಡ ಅವರ ಪ್ರತಿಮೆಯನ್ನು ನೋಡಿ ತನ್ವಿರ್ ಸೇಠ್‍ಗೆ (Tanveer Sait) ಹೊಟ್ಟೆ ಕಿಚ್ಚು ಬಂದಿದೆ, ಅದಕ್ಕಾಗಿಯೇ ಟಿಪ್ಪು ಪ್ರತಿಮೆ ಮಾಡುತ್ತೆವೆ ಎಂದು ಹೇಳಿದ್ದಾರೆ, ಅವರು ಒಕ್ಕಲಿಗ ವಿರೋಧಿ ಎಂದು ತನ್ವೀರ್ ಸೇಠ್ ವಿರುದ್ಧ ಭಜರಂಗಸೇನೆಯ (Bajrang Sena) ರಾಜ್ಯಾಧ್ಯಕ್ಷ ಮಂಜುನಾಥ್ (Manjunath) ಕಿಡಿಕಾರಿದರು.

ದೇವನಹಳ್ಳಿಯಲ್ಲಿ ಲೋಕಾರ್ಪಣೆಗೊಂಡ ಕೆಂಪೇಗೌಡ ಅವರ 108 ಅಡಿಯ ಪ್ರತಿಮೆ ನೋಡಿ ತನ್ವೀರ್ ಸೇಠ್‍ಗೆ ಹೊಟ್ಟೆ ಕಿಚ್ಚು ಬಂದಿದೆ. ಹೊಟ್ಟೆ ಕಿಚ್ಚಿಗಾಗಿ 100 ಅಡಿ ಟಿಪ್ಪು ಸುಲ್ತಾನ್ ಪ್ರತಿಮೆ ಮಾಡ್ತೀವಿ ಎಂದಿದ್ದಾರೆ. ತನ್ವೀರ್ ಸೇಠ್ ಮುಸಲ್ಮಾನರಾ ಎನ್ನುವುದೇ ಅನುಮಾನವಾಗಿದೆ. ಇಸ್ಲಾಂನ್ನು ತನ್ವೀರ್ ಸೇಠ್ ಸರಿಯಾಗಿ ಅಧ್ಯಯನ ಮಾಡಿಲ್ಲ. ಇಸ್ಲಾಂನಲ್ಲಿ ಮೂರ್ತಿ ಪೂಜಾ ಮಾಡುವುದಕ್ಕೆ ಅವಕಾಶವಿಲ್ಲ. ಇವರು ಟಿಪ್ಪು ಜಯಂತಿ ಮಾಡುವುದೇ ತಪ್ಪು ಎಂದರು.

ಟಿಪ್ಪು ಸುಲ್ತಾನ್ (Tipu Sultan) ಮತಾಂಧ. ಹಿಂದೂ ವಿರೋಧಿ ಹಾಗೂ ಕನ್ನಡ ವಿರೋಧಿ. ದಕ್ಷಿಣ ಕರ್ನಾಟಕದ ಈಗಿನ ಮುಸ್ಲಿಮರು ಹಿಂದೆ ಹಿಂದೂಗಳು ಆಗಿದ್ದರು. ಟಿಪ್ಪು ಸುಲ್ತಾನ್‍ನ ಕ್ರೌರ್ಯಕ್ಕೆ ಸಿಲುಕಿ ಈಗಿನ ಮುಸ್ಲಿಮರ ಪೂರ್ವಜರು ಮತಾಂತರವಾಗಿದ್ದರು. ಶ್ರೀರಂಗಪಟ್ಟಣದಲ್ಲಿ ಅಲ್ಲ ಕರ್ನಾಟಕದಲ್ಲಿ ಟಿಪ್ಪು ಪ್ರತಿಮೆ ಮಾಡಲು ಒಂದು ಇಂಚು ಜಾಗ ಕೊಡಲ್ಲ. ಅಂತಹ ಪ್ರಯತ್ನಕ್ಕೆ ಮುಂದಾದರೆ ಹಿಂದೂ ಕಾರ್ಯಕರ್ತರು ಸುಮ್ಮನೆ ಇರಲ್ಲ. ಟಿಪ್ಪು ಪ್ರತಿಮೆ ನಿರ್ಮಾಣ ಆದ್ರೆ ನಾವೇ ಒಡೆದು ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರೇಮ ವಿವಾಹವಾಗಿದ್ದಕ್ಕೆ ದಲಿತರಿಂದಲೇ ದಲಿತ ಕುಟುಂಬಕ್ಕೆ ಬಹಿಷ್ಕಾರ!

ತನ್ವೀರ್ ಸೇಠ್ ಟಿಪ್ಪು ಸುಲ್ತಾನ್ ಪ್ರತಿಮೆ ವಿಚಾರ ಎತ್ತಿರುವುದು ಚುನಾವಣೆಯ ಗಿಮಿಕ್‍ಗಾಗಿ. ನರಸಿಂಹರಾಜ ಕ್ಷೇತ್ರದಲ್ಲಿ ಎಸ್‍ಟಿಪಿಐ ಜೊತೆ ಮುಸ್ಲಿಮರು ಹೋಗ್ತಾ ಇದ್ದಾರೆ. ಅವರನ್ನು ಓಲೈಸಿಕೊಳ್ಳಲು ಈ ರೀತಿ ತನ್ವೀರ್ ಸೇಠ್ ಮಾಡುತ್ತಿದ್ದಾರೆ. ತನ್ವೀರ್ ಸೇಠ್ ಮುಸ್ಲಿಂ ಸಮುದಾಯದಲ್ಲಿ ಹಲವು ಮಹನೀಯರು ಇದ್ದಾರೆ. ಅಂತಹ ಮಹನೀಯರ ಪ್ರತಿಮೆಯನ್ನು ಮಾಡಿ. ಅದಕ್ಕಾಗಿ ನಾವು ಕೈಜೋಡಿಸುತ್ತೇವೆ. ಟಿಪ್ಪು ಪ್ರತಿಮೆ ಮಾಡಲು ನಾವು ಬಿಡುವುದಿಲ್ಲ ಎಂದರು. ಇದನ್ನೂ ಓದಿ: ಮಗನ ಅನಾರೋಗ್ಯ ನಿವಾರಿಸಿದ ಕೊರಗಜ್ಜನಿಗೆ ಉಕ್ರೇನ್ ಕುಟುಂಬದಿಂದ ಅಗೆಲು ಸೇವೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *