ಹಿಂದಿಯಲ್ಲಿ ಬೈದಿದ್ದು ಅರ್ಥ ಆಗಿಲ್ಲ ಎಂದಿದ್ದಕ್ಕೆ ಗಲಾಟೆ: ಯುವಕನ ತಾಯಿ ಅಳಲು

Public TV
2 Min Read

ಬೆಂಗಳೂರು: ವಿಂಗ್ ಕಮಾಂಡರ್ (Wing Commander) ಮೇಲೆ ಯುವಕ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಯುವಕ ವಿಕಾಸ್ ತಾಯಿ ಪ್ರಕರಣದಲ್ಲಿ ಮಗನದ್ದು ಯಾವುದೇ ತಪ್ಪು ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೈಕಿನ ಸೈಲೆನ್ಸರ್‌ಗೆ ಕಾರು ಟಚ್ ಆಗಿದೆ. ಈ ವೇಳೆ ಹಿಂದಿಯಲ್ಲಿ ಬೈದಿದ್ದಾರೆ. ಹಿಂದಿಯಲ್ಲಿ ಹೇಳಿದ್ದು ಅರ್ಥ ಆಗಿಲ್ಲ ಎಂದು ಹೇಳಿದ್ದಕ್ಕೆ ಗಲಾಟೆ ಮಾಡಿದ್ದಾರೆ. ಮಹಿಳೆ ಬಳಿ ಕೇಳಬಾರದೆಂದು ಗಂಡನ ಬಳಿ ಕೇಳಿದ್ದಾನೆ. ವಿಂಗ್ ಕಮಾಂಡರ್‌ನನ್ನು ಕೇಳಿದ್ದಕ್ಕೆ ಮಗನನ್ನು ತಳ್ಳಿದ್ದಾರೆ. ಕೈ ಕಚ್ಚಿ, ಮೈ ಪರಚಿದ್ದಾರೆ. ಬೈಕ್ ಅನ್ನು ಎತ್ತಿಹಾಕಿ ಕಾಲಿಂದ ಒದ್ದಿದ್ದಾರೆ. ನಮ್ಮ ಮೇಲೆ ಹಲ್ಲೆ ಮಾಡಿ ನಮ್ಮ ಮೇಲೆಯೇ ಗೂಬೆ ಕೂರಿಸಿದ್ದಾರೆ. ಇದು ಎಷ್ಟು ನ್ಯಾಯ ಎಂದು ಯುವಕನ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ.‌ ಇದನ್ನೂ ಓದಿ: ಓಂ ಪ್ರಕಾಶ್‌ ಹತ್ಯೆಗೆ 1 ವಾರದಿಂದ ಸ್ಕೆಚ್‌ ಹಾಕಿದ್ದ ಪತ್ನಿ, ಪುತ್ರಿ!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ವಿಂಗ್ ಕಮಾಂಡರ್ ಬಂಧನಕ್ಕೆ ಆಗ್ರಹ ಹೆಚ್ಚಿದೆ. ಕನ್ನಡಿಗನ ಮೇಲೆ ವಿಂಗ್ ಕಮಾಂಡರ್ ಮನಸೋಇಚ್ಛೆ ಥಳಿಸಿದ್ದಾರೆ. ತೀವ್ರ ಹೊಡೆತದಿಂದ ಯುವಕ ಅಸ್ವಸ್ಥನಾಗಿ ಬಿದ್ದಿದ್ದಾನೆ. ಯುವಕನ ರಕ್ಷಣೆಗೆ ಧಾವಿಸಿದ ಸ್ಥಳೀಯರಿಗೆ ವಿಂಗ್ ಕಮಾಂಡರ್ ಶಿಲಾದಿತ್ಯಾ ಅವಾಜ್ ಕೂಡ ಹಾಕಿದ್ದಾರೆ. ಕನ್ನಡಿಗನ ಮೇಲೆ ಹಲ್ಲೆಗೆ ಕನ್ನಡಿಗರು ಕೆರಳಿದ್ದಾರೆ. ಸೈನಿಕನ ಹೆಸರಲ್ಲಿ ಸಿಂಪತಿ ಗಿಟ್ಟಿಸಿಕೊಂಡವನ ಬಂಧನಕ್ಕೆ ಪಟ್ಟುಹಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಂಗ್ ಕಮಾಂಡರ್ ಬಂಧನಕ್ಕೆ ಆಗ್ರಹ ಹೆಚ್ಚಿದ್ದು, ಸಂಘಟನೆಗಳು ಬೈಯಪ್ಪನಹಳ್ಳಿ ಪೊಲೀಸರಿಗೆ ಮನವಿ ಮಾಡಲಿವೆ. ಇದನ್ನೂ ಓದಿ: ರಿಕ್ಕಿ ರೈ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ ಫೇಕಾ?

ಪ್ರಕರಣ ಏನು?
ಬೆಂಗಳೂರಿನಲ್ಲಿ ಕೋಲ್ಕತ್ತಾ ಮೂಲದ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ತಮ್ಮ ಪತ್ನಿಯೊಂದಿಗೆ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಸಿವಿ ರಾಮನ್ ನಗರದ ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ತೆರಳುತ್ತಿದ್ದರು. ಈ ವೇಳೆ, ಬೈಕ್‌ನಲ್ಲಿ ಬಂದ ಸವಾರ, ನೆರೆ ರಾಜ್ಯದವರು ಎಂಬ ಕಾರಣಕ್ಕೆ ಹಲ್ಲೆ ಮಾಡಿದ್ದಾನೆ ಎಂದು ಶಿಲಾದಿತ್ಯ ಆರೋಪಿಸಿದ್ದಾರೆ. ಮುಖ, ತಲೆಗೆ ಗಾಯಗಳಾಗಿದ್ದು, ರಕ್ತ ಹರಿದಿದೆ. ಸ್ಥಳೀಯರು ಘಟನೆಯನ್ನು ನೋಡುತ್ತಾ ನಿಂತಿದ್ದರು. ಯಾರೂ ಕೂಡ ನನ್ನ ನೆರವಿಗೆ ಬರಲಿಲ್ಲ ಎಂದು ಬೇಸರ ತೋಡಿಕೊಂಡಿದ್ದ ವೀಡಿಯೋ ಹರಿಬಿಟ್ಟಿದ್ದರು. ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭೇಟಿಯಾದ ಪ್ರಧಾನಿ ಮೋದಿ – ವ್ಯಾಪಾರ ಒಪ್ಪಂದದ ಬಗ್ಗೆ ಚರ್ಚೆ

ಇದು ಭಾಷಾ ಹಲ್ಲೆ ಎಮದು ದೇಶಾದ್ಯಂತ ಚರ್ಚೆಗೀಡಾಗಿತ್ತು. ಇದರ ಬೆನ್ನಲ್ಲೇ ಬೈಯ್ಯಪ್ಪನಹಳ್ಳಿ ಪೊಲೀಸರು ತನಿಖೆಗೆ ಇಳಿದು ಇದು ಭಾಷಾ ವಿಚಾರಕ್ಕೆ ನಡೆದ ಹಲ್ಲೆ ಅಲ್ಲ. ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ನಡೆದ ಹಲ್ಲೆ ಎಂದು ಸ್ಪಷ್ಟನೆ ನೀಡಿದರು. ಎಫ್‌ಐಆರ್ ದಾಖಲಿಸಿಕೊಂಡು, ಬೈಕ್ ಸವಾರ, ಡೆಲಿವರಿಬಾಯ್ ವಿಕಾಸ್ ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ. ಈ ಮಧ್ಯೆ ವಿಂಗ್ ಕಮಾಂಡರೇ ಆ ಯುವಕನ ಮೇಲೆ ಮುಗಿಬಿದ್ದು, ಪದೇ ಪದೇ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಯುವಕನ ಮೊಬೈಲ್ ಕೂಡ ಕಿತ್ತು ಬಿಸಾಕಿದ್ದಾರೆ. ಇದನ್ನೂ ಓದಿ: ನಿವೃತ್ತ ಡಿಜಿಪಿ ಕೊಲೆ ಕೇಸ್‌ – ಆರೋಪಿ ಪತ್ನಿಗೆ 14 ದಿನ ನ್ಯಾಯಾಂಗ ಬಂಧನ

Share This Article