ಬಾಗಲಕೋಟೆಯ ಕರ್ತವ್ಯನಿರತ ಯೋಧ ರಾಜಸ್ಥಾನದಲ್ಲಿ ಹೃದಯಾಘಾತದಿಂದ ಸಾವು

Public TV
1 Min Read

ಬಾಗಲಕೋಟೆ: ರಾಜಸ್ಥಾನದಲ್ಲಿ (Rajasthan) ಕರ್ತವ್ಯನಿರತರಾಗಿದ್ದ ಬಾಗಲಕೋಟೆಯ (Bagalkote) ಯೋಧ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ.

ಮಾಗೊಂಡಯ್ಯ ಚನ್ನಯ್ಯ ರೇಷ್ಮೆ (37) ಮೃತ ಯೋಧ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದ ಯೋಧ ಕರ್ತವ್ಯದಲ್ಲಿ ಇದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಾಗೊಂಡಯ್ಯ ಕಳೆದ 14 ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬೆಳಗಾವಿ ಮರಾಠಾ ಇನ್‌ಫೆಂಟ್ರಿ ಯುನಿಟ್ 19 ಮೆಕ್ಯಾನಿಕ್ ಸಿ/ಒ 56 ಎಪಿಒ ಬಿಕಾನರ್ ಕಾಂಟ್ ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ – ಆರೋಪಿ ಅರೆಸ್ಟ್

ಪತ್ನಿ ಹಾಗೂ ಮಕ್ಕಳೊಂದಿಗೆ ಯೋಧ ರಾಜಸ್ಥಾನದಲ್ಲಿ ನೆಲೆಸಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಜ. 15ರಂದು ನಂದಿಕೇಶ್ವರ ಗ್ರಾಮದಲ್ಲಿ ಯೋಧನ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ:  ಇಂದು ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರೇಶ್ವರ ಸನ್ನಿಧಿ – ಶಿವಲಿಂಗದ ಮೇಲೆ ಬೀಳಲಿದೆ ಸೂರ್ಯ ರಶ್ಮಿ

Share This Article