ಬಾಗಲಕೋಟೆಯ ತೋಟಗಾರಿಕೆ ವಿವಿ ಮುಚ್ಚೋದಿಲ್ಲ- ಚೆಲುವರಾಯಸ್ವಾಮಿ

Public TV
1 Min Read

ಬೆಂಗಳೂರು : ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯವನ್ನು (Bagalkote Horticulture University) ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ (Chaluvaraya Swamy) ಸ್ಪಷ್ಟಪಡಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಹನುಮಂತ ನಿರಾಣಿ ಪ್ರಶ್ನೆ ಕೇಳಿದ್ರು. ಸರ್ಕಾರ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯವನ್ನ ಸಮಗ್ರ ವಿವಿ ಮಾಡಲು ಸರ್ಕಾರ ಹೊರಟಿದೆ .ಮಂಡ್ಯದಲ್ಲಿ ಸಮಗ್ರ ವಿವಿ ಮಾಡಲು ಸರ್ಕಾರ ಹೊರಟಿದೆ. ಈ ಮೂಲಕ ಬಾಗಲಕೋಟೆ ವಿವಿ ಮುಚ್ಚುವ ಹುನ್ನಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಬಾಗಲಕೋಟೆ ತೋಟಗಾರಿಕೆ ವಿವಿಯನ್ನು ಮುಚ್ಚಬಾರದು, ಮಂಡ್ಯಗೆ ಬದಲಾವಣೆ ಮಾಡಬಾರದು ಅಂತ ಒತ್ತಾಯ ಮಾಡಿದರು.  ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್‌!

 

ಇದಕ್ಕೆ ಸಚಿವ ಚೆಲುವರಾಯಸ್ವಾಮಿ ಉತ್ತರ ನೀಡಿ, ಸಮಗ್ರ ವಿವಿ ಮಾಡುವ ಹಿನ್ನೆಲೆಯಲ್ಲಿ ವಿಜಯ್ ಭಾಸ್ಕರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ‌. ಇನ್ನು ವರದಿ ಬಂದಿಲ್ಲ. ವರದಿ ಬಂದ ಮೇಲೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಬಾಗಲಕೋಟೆ ತೋಟಗಾರಿಕೆ ವಿವಿಯನ್ನ ಮುಚ್ಚುವುದಿಲ್ಲ ಮತ್ತು ವಿಲೀನ ಮಾಡುವುದಿಲ್ಲ. ಯಾವುದೇ ಕಡೆ ಶಿಫ್ಟ್ ಕೊಡೋದು ಇಲ್ಲ ಎಂದು ಹೇಳಿದರು.

Share This Article